ಚಿಕ್ಕಬಳ್ಳಾಪುರ | ಮಿನಿ ವಿಧಾನಸೌಧ, ಆಸ್ಪತ್ರೆಯ 40 ಲಕ್ಷ ರೂ. ವಿದ್ಯುತ್ ಬಿಲ್‌ ಬಾಕಿ

Date:

Advertisements

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿರುವ ತಾಲೂಕು ‌ಆಡಳಿತ ಕಚೇರಿ ಮಿನಿ ವಿಧಾನಸೌಧ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿದ್ಯುತ್ ಬಿಲ್‌ ಕಳೆದ ಒಂದೂವರೆ ವರ್ಷದಿಂದ ಬಾಕಿಯಿದ್ದು, ಎರಡೂ ಕಟ್ಟಡಗಳ ಬಾಕಿ ಮೊತ್ತವು ಸುಮಾರು 40 ಲಕ್ಷ ರೂ. ಗಡಿ ಸಮೀಪಿಸಿದೆ.

ಬೆಸ್ಕಾಂ ಇಲಾಖೆಯು ಪಾರದರ್ಶಕ ಮತ್ತು ಶಿಸ್ತು ಬದ್ಧವಾಗಿ ವಾಸದ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳ ವಿದ್ಯುತ್ ಬಿಲ್‌ಗಳನ್ನು ಪ್ರತಿ ತಿಂಗಳು ತಪ್ಪದೆ ಸಂಗ್ರಹಿಸುತ್ತಿವೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಪಾವತಿಸದಿದ್ದಲ್ಲಿ ಕೂಡಲೇ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ಆದರೆ, ಡಿಸೆಂಬರ್ ತಿಂಗಳಿಗೆ ತಾಲೂಕು ಆಡಳಿತ ಸಂಕೀರ್ಣವಾಗಿರುವ ಮಿನಿ ವಿಧಾನಸೌಧ ಕಟ್ಟಡದ್ದು 28.85 ಲಕ್ಷ ರೂ. ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯದ್ದು 10.96 ಲಕ್ಷ ರೂ. ಸೇರಿ ‌ಒಟ್ಟು 39.81 ಲಕ್ಷ ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿದಿದ್ದು, ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ತಾಲೂಕು ಆಡಳಿತದ ಕಟ್ಟಡದಲ್ಲಿ ಪ್ರಸ್ತುತ ಕಂದಾಯ ಇಲಾಖೆ ಸೇರಿದಂತೆ ಖಜಾನೆ, ಆಹಾರ ಇಲಾಖೆ, ಭೂಮಾಪನ ಇಲಾಖೆ, ಚುನಾವಣಾ ಶಾಖೆ, ಉಪನೋಂದಣಾಧಿಕಾರಿಗಳ ಕಚೇರಿ, ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸ್ಥಳೀಯ ಶಾಸಕ ಮತ್ತು ಚಿಕ್ಕಬಳ್ಳಾಪುರ ವಿಧಾನಸಭೆ ‌ಕ್ಷೇತ್ರದ ಶಾಸಕರ ಕಚೇರಿ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

Advertisements

ಇವುಗಳಿಂದ ಮಾಸಿಕ ಕಚೇರಿಯ ನಿರ್ವಹಣೆ ‌ಮತ್ತು ಬಾಡಿಗೆ ರೂಪದಲ್ಲಿ ನಿಗಧಿತ ಹಣವನ್ನು ತಾಲೂಕು ಆಡಳಿತ ಪಡೆಯುತ್ತಿದೆ. ಆದರೆ, ಈ ಹಣವು ಕಚೇರಿಯ ಒಳಾಂಗಣ ಮತ್ತು‌ ಹೊರಾಂಗಣ ನಿರ್ವಹಣೆಗೆ ಸಾಕಾಗುತ್ತಿದೆ. ಆದ್ದರಿಂದ ಕಚೇರಿಯ ವಿದ್ಯುತ್ ಬಿಲ್‌ ಅನ್ನು ಸಮರ್ಪಕವಾಗಿ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಕಚೇರಿಯ ಸಿಬ್ಬಂದಿ ಹೇಳುತ್ತಿದ್ದಾರೆ.

ತಾಯಿ ಮತ್ತು‌ ಮಕ್ಕಳ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ನಗರದಲ್ಲಿದ್ದ ಸಾರ್ವಜನಿಕ ಆಸ್ಪತ್ರೆಯನ್ನು ರವಾನಿಸಲಾಗಿದ್ದು ಎರಡೂ ಆಸ್ಪತ್ರೆಗಳು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಸಂಪೂರ್ಣ ಜವಾಬ್ದಾರಿ ಇಲ್ಲಿನ ಆಡಳಿತಾಧಿಕಾರಿಗಳು ನಿರ್ವಹಣೆ ಮಾಡುತ್ತಿದ್ದಾರೆ.

ಎರಡೂ ಕಚೇರಿಗಳು ಸಾರ್ವಜನಿಕ ಸೇವೆಗೆ ಒಳಪಟ್ಟಿರುವ ಕಾರಣ ಬೆಸ್ಕಾಂ ‌ಇಲಾಖೆ ಅಧಿಕಾರಿಗಳು ಕಾನೂನಿನ ಚೌಕಟ್ಟನ್ನು ಸಡಿಲಗೊಳಿಸಿ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ‌ ಇದ್ದರೂ ಕೂಡ ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ. ಆದರೆ, ಜನಸಾಮಾನ್ಯರ ವಸತಿ ಕಟ್ಟಡ ಅಥವಾ ವಾಣಿಜ್ಯ ಕಟ್ಟಡಗಳ ವಿದ್ಯುತ್ ಬಿಲ್ 50 ದಿನಗಳ ಒಳಗಾಗಿ ಪಾವತಿ ಮಾಡದಿದ್ದರೆ ಕೂಡಲೇ ಸಂಪರ್ಕ ಕಡಿತಗೊಳಿಸುತ್ತಾರೆ.

ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಮೇಲಿನ ಈ ಧೋರಣೆಯು ಸರ್ಕಾರಿ ಕಚೇರಿಗಳ ಬಾಕಿ ಮೊತ್ತ ಪಡೆಯುವಲ್ಲಿ ತೋರಿಸಲಿ ಎನ್ನುತ್ತಿದ್ದಾರೆ ಸ್ಥಳೀಯರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X