ಬೀದರ್‌ | ವಚನ, ದಾಸ ಸಾಹಿತ್ಯ ಕನ್ನಡದ ಎರಡು ಕಣ್ಣು : ಉಸ್ತುವಾರಿ ಸಚಿವ ಈಶ್ವರ ಖಂಡ್ರೆ

Date:

Advertisements
ಮಾತೃ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ವಚನ, ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಬೀದರ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಬೀದರ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಸಾಹಿತ್ಯವು ಭೂಮಿಯನ್ನು ಸ್ವರ್ಗ ಮಾಡುವ ಸರಕಾಗಿದ್ದು. ನಮ್ಮ ದ್ವೇಷ, ಕೌರ್ಯ ಹಾಗೂ ಹಿಂಸೆಯನ್ನು ನಿರ್ನಾಮ ಮಾಡುವ ಶಕ್ತಿ ಸಾಹಿತ್ಯಕ್ಕಿದೆ, ಎಲ್ಲರಿಗೂ ಹಿತವನ್ನು ಕಾಪಾಡುವುದೇ ಸಾಹಿತ್ಯವಾಗಿದೆ. ಕನ್ನಡಕ್ಕೆ ತನ್ನದೇ ಆದ ಐತಿಹಾಸಿಕ ಪರಂಪರೆಯಿದೆ. ಪಂಪ, ರನ್ನ, ಪೊನ್ನ ಸೇರಿದಂತೆ ನಾಡಿನ ಅನೇಕ ಸಾಹಿತಿಗಳು ಕನ್ನಡಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟಿದ್ದಾರೆ. ವಚನಕಾರರು, ಸಾಹಿತಿಗಳು, ಹಾಗೂ ದಾಸರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಸಾಮಾಜಿಕ ನ್ಯಾಯ ಅಂಬೇಡ್ಕರವರು ಕೊಟ್ಟ ಸಂವಿಧಾನದಲ್ಲಿದೆ. ಸಮಾಜದ ಕಟ್ಟಕಡೆಯ ನಿರ್ಗತಿಕನಿಗೂ ಸಾಮಾಜಿಕ ನ್ಯಾಯ ಕೊಟ್ಟರೆ ಪ್ರಜಾಪ್ರಭುತ್ವ ಯಶಸ್ವಿಯಾಗಿ ಜಾರಿಯಾಗುವುದು” ಎಂದರು.
“ವಚನ ಹಾಗೂ ದಾಸ ಸಾಹಿತ್ಯದ ಬಗ್ಗೆ ಪಠ್ಯಕ್ರಮದಲ್ಲಿ ಅಳವಡಿಕೊಳ್ಳಬೇಕು. ಗಡಿ ಭಾಗದಲ್ಲಿ ಕನ್ನಡ ಬೆಳೆಯಬೇಕು. ಕಡಿಮೆ ಮಕ್ಕಳಿದ್ದರೂ ಕನ್ನಡ ಶಾಲೆಗಳನ್ನು ಮುಚ್ಚುವುದಕ್ಕೆ ಬಿಡುವುದಿಲ್ಲ. ಬರುವ ಜನವರಿ 30ರ ಒಳಗಾಗಿ ಬೀದರನಲ್ಲಿ ನಿರ್ಮಾಣವಾದ ನೂತನ ಕನ್ನಡ ಭವನ ಉದ್ಘಾಟನೆ ಮಾಡಲಾಗುವುದು” ಎಂದು ಹೇಳಿದರು.
“ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವದರಿಂದ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ನಾವೆಲ್ಲರೂ ಪುಸ್ತಕಗಳು ಓದುವ ಅಭಿರುಚಿ ಬೆಳೆಸಿಕೊಳ್ಳುವುದು ಬಹಳ ಅವಶ್ಯಕತೆಯಿದೆ. ಸಮಾಜದಲ್ಲಿ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮವೂ ಇದೆ. ಆದರೆ ನಮಗೆ ಪತ್ರಿಕೆ ಓದಿದರೆ ಮಾತ್ರ ಸಮಾಧಾನವಾಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಹೇಳಿದ್ದೇ ಹೇಳ್ತಾರೆ, ಸತ್ಯವಿದೆಯೋ, ಸುಳ್ಳು ಇದೆಯೋ ಎಂಬುದು ವಿಶ್ವಾಸ ಹೋಗುವಂಥ ರೀತಿಯಲ್ಲಿ ಸಮಾಜದಲ್ಲಿ ನಡೆಯುತ್ತಿದೆ. ಆದರೆ ಇಂದು ಪ್ರತಿಕಾ ಮಾಧ್ಯಮ ಮಾತ್ರ ಜನರ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ” ಎಂದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, “ಬೀದರ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದ್ದು, ರಸ್ತೆ, ಆಸ್ಪತ್ರೆ, ನೀರು, ಚರಂಡಿ ಸೇರಿದಂತೆ ಇತರೆ ಕೆಲಸಗಳಿಗೆ 100 ಕೋಟಿ ಹಣ ಬೀದರಗೆ ಬಿಡುಗಡೆ ಮಾಡಲಾಗಿದೆ. ಬೀದರ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ” ಎಂದು ಹೇಳಿದರು.
ಮಾಜಿ ಸಚಿವ, ಸಾಂಸ್ಕೃತಿಕ ಚಿಂತಕ ಎಚ್.ಎಂ.ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಜನರ ಮಾತಾದ ಕೀರ್ತನೆಗಳನ್ನು 14ನೇ ಶತಮಾನದಲ್ಲಿ ಜಾರಿಗೆ ತಂದವರು ನರಹರಿ ತೀರ್ಥರು ಮೊದಲಿಗರಾದರೆ 16ನೇ ಶತಮಾನದಲ್ಲಿ ಪುರಂದರ ದಾಸರು, ಕನಕದಾಸರು ಅದನ್ನು ಮುಂದುವರಿಸಿದರು. 12ನೇ ಶತಮಾನದ ಶರಣರ ವಚನ ಸಾಹಿತ್ಯದ ಮುಂದುವರೆದ ಭಾಗವೇ ದಾಸ ಸಾಹಿತ್ಯ, ದಾಸರು ಕೀರ್ತನೆಗಳ ಮುಖಾಂತರ ಸಾಮಾಜಿಕ ಪರಿವರ್ತನೆಗೆ ಒತ್ತು ನೀಡಿದರು. ಪುರಂದರದಾಸರ ಲೋಕಾನುಭವ ವಿಶಿಷ್ಠವಾದದ್ದು. ಅಕ್ಕಿ, ರಾಗಿ ಹೋಲಿಸಿ ಅವರು ಕೃತಿ ಬರೆದವರಾಗಿದ್ದು. ಮೇಲು-ಕೀಳು, ಬಡವ-ಶ್ರೀಮಂತರ ನಡುವಿನ ತಾರತಮ್ಯಗಳನ್ನು ನಿವಾರಣೆಗಾಗಿ ತಮ್ಮ ಕೀರ್ತನೆಗಳ ಮೂಲಕ ಸಮಾಜ ತಿದ್ದಲು ಪ್ರಯತ್ನಿಸಿದರು” ಎಂದು ಹೇಳಿದರು.
ದಾಸ ಸಂಭ್ರಮ
ʼದಾಸ ಸಂಭ್ರ,ಮʼ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ʼದಾಸ ಸಂಭ್ರಮʼ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, “ಬೀದರ ಸಾಂಸ್ಕೃತಿಕ ಜಿಲ್ಲೆಯಾಗಿದ್ದು. ಇಲ್ಲಿ ನಿರಂತರ ಸಾಹಿತ್ಯ, ಸಾಂಸ್ಕೃತಿಕ ಜಾತ್ರೆಗಳು ನಡೆಯುತ್ತವೆ. ಕಸಾಪದಿಂದ ದಾಸ ಸಾಹಿತ್ಯದ ಪ್ರಥಮ ಸಮ್ಮೇಳನ ಬೀದರನಲ್ಲಿ ನಡೆಯುತ್ತಿರುವುದು ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ನಾಡು-ನುಡಿಗಾಗಿ ಯಾವುದೇ ಭಿನ್ನತೆ ಇಲ್ಲದೆ ಪಕ್ಷಾತೀತವಾಗಿ ಶ್ರಮಿಸಬೇಕು. ಭಾರತ ದೇಶ ಎಲ್ಲ ಧರ್ಮ-ಜಾತಿಗಳಿಂದ ಕೂಡಿದ ಸನಾತನ ಧರ್ಮದ ದೇಶವಾಗಿದೆ. ನಾವೆಲ್ಲರೂ ಒಂದೇ ಎಂದು ಸಾರಿದ ಭಾರತವು 2047ಕ್ಕೆ ವಿಶ್ವಗುರು ಆಗುತ್ತದೆ ಎಂಬುದು ಇಂದಿನ ಪ್ರಧಾನಿಗಳ ಕನಸು, ಅದಕ್ಕೆ ಮುಂದಿನ ಪೀಳಿಗೆ ಸಾಕ್ಷಿಯಾಗುತ್ತಾರೆ” ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ ಮಾತನಾಡಿ, “ಬೀದರನಲ್ಲಿ ಉರ್ದು, ತೆಲಗು, ಮರಾಠಿ ಭಾಷೆಗಳನ್ನು ಮಾತನಾಡುವ ಜನರಿದ್ದರು ನಾವು ಕನ್ನಡ ಸ್ಪಷ್ಟವಾಗಿ ಮಾತನಾಡುವ ಜನರಾಗಿದ್ದೆವೆ. ಗಡಿ ನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಕೆಲಸ ನಾವೆಲ್ಲರೂ ಕೂಡಿ ಮಾಡಬೇಕಾಗಿದೆ. ನಿಜಾಂರ ಕಾಲದಲ್ಲಿ ಕನ್ನಡ ಕಲಿಯುವ ಹಾಗೆ ಇರಲಿಲ್ಲ,ಆದರೆ ಭಾಲ್ಕಿಯ ಚನ್ನಬಸವ ಪಟ್ಟದೇವರು ಹೊರಗಡೆ ಉರ್ದು ಭಾಷೆಯ ನಾಮ ಫಲಕ ಹಾಕಿ, ಒಳಗಡೆ ಕನ್ನಡ ಕಲಿಸುತ್ತಿದ್ದರು” ಎಂದರು.
ಮಾಜಿ ಸಚಿವ ಬಂಡೆಪ್ಪಾ ಖಾಶೆಂಪುರ ಮಾತನಾಡಿ, “ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಕನ್ನಡ ಉಳಿಯಬೇಕಾದರೆ ಶಾಲೆಯಲ್ಲಿ ಎರಡು ಮಕ್ಕಳಿದ್ದರು ಅವರಿಗೆ ಕನ್ನಡ ಕಲಿಸಬೇಕು. ಹಳ್ಳಿಯ ಜನರಲ್ಲಿಯೇ ಶ್ರೇಷ್ಠ ಸಾಹಿತ್ಯವಿದೆ. ಕನಕದಾಸರು, ಪುರಂದರ ದಾಸರು ತಮ್ಮ ಕಿರ್ತನೆಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು” ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, “ಕರ್ನಾಟಕದಲ್ಲಿ ದಾಸ ಸಾಹಿತ್ಯವು 13ನೇ ಶತಮಾನದಲ್ಲಿ ಮಧ್ವಚಾರ್ಯರಿಂದ ಆರಂಭಿಸಲಾಗಿ, ವಿಷ್ಣುವನ್ನು ಸ್ತುತಿಸಲು ರೂಪದಲ್ಲಿ ದ್ವಾದಶ ಸ್ತೋತ್ರಗಳು ರಚಿಸಿದರು. ಇವರಿಂದ ಪ್ರೇರಿತರಾದ ನರಹರಿ ತೀರ್ಥರು ಮಧ್ವಾಚಾರ್ಯರ ನೇರ ಶಿಷ್ಯರಾಗಿ ಕನ್ನಡದಲ್ಲಿ ಕೆಲವು ಹಾಡುಗಳನ್ನು ಬರೆದಿದ್ದಾರೆ. 13-14ನೇ ಶತಮಾನದಲ್ಲಿ ಜೀವಿಸಿದ್ದ ಇವರು ಹರಿದಾಸ ಕೀರ್ತನೆ ಪರಂಪರೆಯ ಆದ್ಯ ಕೃತಿಕಾರರೆಂದು ಅನೇಕ ವಿದ್ವಾಂಸರು ಹೇಳುತ್ತಾರೆ. ನರಹರಿ ತೀರ್ಥರಿಂದ ಆರಂಭವಾದ ಕನ್ನಡದ ದಾಸ ಸಾಹಿತ್ಯ ಶ್ರೀಪಾದರಾಯರು, ವ್ಯಾಸರಾಯರು, ಕನಕದಾಸರು, ಪುರಂದರದಾಸರು, ವಾದಿರಾಜರು, ರಾಘವೇಂದ್ರ ತೀರ್ಥರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಕಾಖಂಡಕಿ ಮಹಿಪತಿ ದಾಸರು, ಪ್ರಾಣೇಶ ದಾಸರು, ಗಲಗಲಿ ಅವ್ವ, ಹೆಳವಕಟ್ಟೆ ಗಿರಿಯಮ್ಮ, ಅಂಬಾಬಾಯಿ, ಮೋಹನದಾಸರು, ಪ್ರಸನ್ನ ವೆಂಕಟದಾಸರು ಹಾಗೂ ವೇಣು ಗೋಪಾಲದಾಸರು ಹೀಗೆ 15 ರಿಂದ 19 ಶತಮಾನದ ದಾಸ ಪರಂಪರೆಯಲ್ಲಿ 320 ದಾಸರು 45 ಸಾವಿರ ಕೀರ್ತನೆ, ಉಗಾಭೋಗ, ಸುಳಾದಿಗಳು ದೊರೆತಿದ್ದು. ಇವುಗಳಿಂದ ಹರಿದಾಸ ಸಾಹಿತ್ಯ ಶ್ರೀಮಂತಗೊಂಡಿದೆ” ಎಂದು ನುಡಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು, ಗುರುಬಸವೇಶ್ವರ ಸಂಸ್ಥಾನ ಮಠ ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿಗಳು ಹಾಗೂ ಕನಕ ಗುರುಪೀಠ, ತಿಂಥಣಿ ಬ್ರಿಜ್‌ನ ಸಿದ್ಧರಾಮನಂದಪುರಿ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಸಂಜುಕುಮಾರ ಅತಿವಾಳೆ ಅವರು ಬರೆದ ದಾಸ ಸಂಭ್ರಮ ಸ್ಮರಣ ಸಂಚಿಕೆ ಹಾಗೂ ಜಗದೇವಿ ಆರ್ ದುಬಲಗುಂಡಿ ಅವರು ಬರೆದ ಕಲ್ಯಾಣದ ಶರಣರು ಕೃತಿ ಬಿಡುಗಡೆಗೊಳಿಸಲಾಯಿತು.
ದಾಸ ಸಮ್ಮೇಳನ ೨
ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
ಬೆಳಿಗ್ಗೆ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿಯ ಮೆರವಣಿಗೆ ವಿ.ಕೆ ಇಂಟರನ್ಯಾಷನಲ್ ಶಾಲೆಯಿಂದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರವರೆಗೆ ನಡೆಯಿತು. ಇದರಲ್ಲಿ ಶಾಲಾ-ಕಾಲೇಜಿನ ಮಕ್ಕಳು, ವಿವಿಧ ಕಲಾ ತಂಡಗಳು, ಕನ್ನಡ ಅಭಿಮಾನಿಗಳು, ಸಾಹಿತಿಗಳು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಡಿಂತ ಚಿದ್ರಿ, ನಗರಸಭೆ ಅಧ್ಯಕ್ಷ ಮೊಹಮ್ಮದ ಗೌಸ್, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ರೆಡ್ಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೃತರಾವ ಚಿಮಕೋಡೆ, ಪ್ರಚಾರ ಸಮಿತಿ ಅಧ್ಯಕ್ಷ ಮಾಳಪ್ಪ ಅಡಸಾರೆ, ಸ್ವಾಗತ ಸಮಿತಿ ಕೋಶಾಧ್ಯಕ್ಷ ಪೀರಪ್ಪಾ ಔರಾದೆ, ಟಿ.ಎಂ ಮಚ್ಚೆ, ಶಿವಶಂಕರ ಟೋಕರೆ, ವಿಜಕುಮಾರ ಡುಮ್ಮೆ, ಸಂಜುಕುಮಾರ ಅಲ್ಲೂರೆ ಸೇರಿದಂತೆ ವಿವಿಧ ತಾಲೂಕು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷರು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಕನ್ನಡಾಭಿಮಾನಿಗಳು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

Download Eedina App Android / iOS

X