2023 ಕಳೆದು 2024ಕ್ಕೆ ಕಾಲಿಡಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಈಗಾಗಲೇ, ರಾಜ್ಯ ರಾಜಧಾನಿ ಬೆಂಗಳೂರಿನ ಎಂಜಿ ರಸ್ತೆ, ಚರ್ಚ್ ರೋಡ್ ಹಾಗೂ ಬ್ರಿಗೇಡ್ ರೋಡ್‌ಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು. ಪ್ರತಿ ವರ್ಷದಂತೆ ಈ ವರ್ಷವೂ ಈ ಮೂರು ರಸ್ತೆಗಳಲ್ಲಿ ಜನಜಾತ್ರೆ ತುಂಬಿರಲಿದೆ. ಈ ಹಿನ್ನೆಲೆ, ಜನಸಂದಣಿ ಸಮಯದಲ್ಲಿ ಸರಕು ಕಳ್ಳತನವಾಗುವ ಭಯದಿಂದ ಎಂಜಿ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಿಗಳು ಡಿಸೆಂಬರ್ 31 ರಂದು ಸಂಜೆ 4:30 ರೊಳಗೆ ತಮ್ಮ ವ್ಯಾಪಾರವನ್ನು ಮುಚ್ಚಿದ್ದಾರೆ.
ಹೌದು, ಈ ನಿರ್ಧಾರವು ಎರಡು ಪ್ರಮುಖ ಕಾರಣಗಳನ್ನು ಆಧರಿಸಿದೆ. ಹೊಸ ವರ್ಷಾಚರಣೆಗಾಗಿ ಎಂ.ಜಿ.ರಸ್ತೆಯಲ್ಲಿ ಭಾರೀ ಜನಸಂದಣಿಯ ಸಮಯದಲ್ಲಿ ಸರಕುಗಳು ಕಳ್ಳತನವಾದ ಹಿಂದಿನ ಅನುಭವಗಳು ಮತ್ತು ಈ ವರ್ಷ ಅಧಿಕ ಜನಸಂದಣಿ ಉಂಟಾಗುವ ಸಾದ್ಯತೆ ಇದೆ.
ಎಂ.ಜಿ.ರಸ್ತೆ ಹಾಗೆಯೇ ಚರ್ಚ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆಯಲ್ಲಿರುವವ ಬೀದಿ ವ್ಯಾಪಾರಿಗಳಿಗೆ ವಿಶೇಷವಾಗಿ ಡಿಸೆಂಬರ್ 31 ಸಾಮಾನ್ಯವಾಗಿ ಅವರಿಗೆ ಹೆಚ್ಚು ಆದಾಯದ ದಿನವಾಗಿದೆ.
ಈ ಸುದ್ದಿ ಓದಿದ್ದೀರಾ? ಹೊಸ ವರ್ಷ ಆಚರಣೆ ವೇಳೆ ಸುರಕ್ಷತೆಗೆ ಬೆಸ್ಕಾಂ ಮನವಿ
ಸಂಜೆ ಸಾವಿರಾರು ಮೌಲ್ಯದ ಸರಕುಗಳನ್ನು ಕಳ್ಳತನ ಮಾಡುವ ಅಪಾಯಕ್ಕಿಂತ ಮುಂಚೆಯೇ ಮುಚ್ಚುವ ಮೂಲಕ ಸಣ್ಣ ನಷ್ಟವನ್ನು ಸ್ವೀಕರಿಸಲು ಆದ್ಯತೆ ನೀಡುವುದಾಗಿ ಬೀದಿಬದಿ ವ್ಯಾಪಾರಿಗಳು ಹೇಳಿದ್ದಾರೆ.
ಹೊಸ ವರ್ಷದ ಮುನ್ನಾದಿನದಂದು ಬ್ರಿಗೇಡ್ ರಸ್ತೆ ಪ್ರದೇಶದಲ್ಲಿ ಸುಮಾರು 2.5 ಲಕ್ಷ ಜನರು ಬರುವ ನಿರೀಕ್ಷೆಯಿದೆ.