ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಮತ್ತು ನವೀಕರಣ ಕಲ್ಯಾಣ ಮಂಡಳಿಯು ವಿಧಿಸಿರುವ ಷರತ್ತುಗಳನ್ನು ಸರಳೀಕರಣಗೊಳಿವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಯಚೂರು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
“ಕಟ್ಟಡ ಪರವಾನಗಿ ಪತ್ರ, ನಕ್ಷೆ ಅನುಮೋದನೆಯನ್ನು ಕೂಡಲೇ ಹಿಂಪಡೆಯಬೇಕು. ವೇತನ ಚೀಟಿ ಹಾಗೂ ಹಾಜರಾತಿ ನಿಯಮಗಳನ್ನು ರದ್ದುಗೊಳಿಸಬೇಕು, ಕಟ್ಟಡ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು.
“ಶೈಕ್ಷಣಿಕ ಧನ ಸಹಾಯವನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು. ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಸೆಸ್ ಹಣ ಸಂಗ್ರಹಣೆ ಮಾಡಲು ವಿಶೇಷ ತಂಡ ನೇಮಕ ಮಾಡಬೇಕು.
ಕಟ್ಟಡ ಕಾರ್ಮಿಕರಿಗಾಗಿ ಮನೆ ನಿರ್ಮಾಣ ಮಾಡಲು ಮಂಡಳಿಯಿಂದ 5 ಲಕ್ಷ ರೂ.ಗಳನ್ನು ಮಂಜೂರು ಮಾಡಬೇಕು. ಅಕ್ರಮವಾಗಿ ನೋಂದಾಯಿಸಿಕೊಂಡಿರುವ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಸ್ಲಮ್ ಬೋರ್ಡ್ ನೀಡಿದ ಸಹಾಯಧನವನ್ನು ತನಿಖೆ ಮಾಡಿ ಮಂಡಳಿ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಒದಿದ್ದೀರಾ? ದಾವಣಗೆರೆ | ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ
ಈ ಸಂದರ್ಭದಲ್ಲಿ ವಿವಿಧ ಕಟ್ಟಡ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರುಗಳಾದ ತಿಮ್ಮಪ್ಪ ಸ್ವಾಮಿ, ವೀರಣ್ಣ, ರಂಗಪ್ಪ ಅಸ್ಕಿಹಾಳ, ವೀರನಗೌಡ, ನಾಗರಾಜ, ಭೀಮಣ್ಣ, ಸುದಾನಂದ ಸ್ವಾಮಿ ಮಾನವಿ, ರಮೇಶ ಸಿರವಾರ, ವೆಂಕಟೇಶ ಬಳಿಗೇರಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ