ಧಾರವಾಡ | ಕೆಐಎಡಿಬಿ ಬಹುಕೋಟಿ ಹಗರಣದ ಸಿಐಡಿ ತನಿಖೆ ಸಮರ್ಪಕವಾಗಿ ನಡೆದಿಲ್ಲ; ಜನಜಾಗೃತಿ ಆರೋಪ

Date:

Advertisements

ಧಾರವಾಡದ ಕೆಐಎಡಿಬಿ ಬಹುಕೋಟಿ ಹಗರಣದ ಸಿಐಡಿ ತನಿಖೆ ಸಮರ್ಪಕವಾಗಿ ನಡೆದಿಲ್ಲ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದ್ದಾರೆ. ಸೋಮವಾರ (ಜ.1) ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಿಐಡಿ ಒಂಬತ್ತು ತಿಂಗಳ ಕಾಲ ತನಿಖೆ ನಡೆಸಿ, ಎರಡು ಹಂತದ ಚಾರ್ಜ್ ಶೀಟ್ ಹಾಕಿದ್ದಾರೆ. ಮೊದಲ ಚಾರ್ಜ್ ಶೀಟ್ 02/06/2023 ಹಾಗೂ ಎರಡನೇ ಚಾರ್ಜ್ ಶೀಟ್ 11/09/2023 ರಂದು ಒಟ್ಟು ಎರಡು ಸಾವಿರಕ್ಕೂ ಅಧಿಕ ಪುಟದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಅದರಲ್ಲಿ ಹಲವು ಹಿರಿಯ ಅಧಿಕಾರಿಗಳನ್ನು ಮತ್ತು ಕೆಲ ಮಧ್ಯವರ್ತಿಗಳನ್ನ ಪ್ರಕರಣದಿಂದ ಬಚಾವ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಆರೋಪಿಸಿ ದಾಖಲೆ ಬಿಡುಗಡೆಗೊಳಿಸಿದರು.

ಇದರಲ್ಲಿ ಪ್ರಮುಖವಾಗಿ ಚಾರ್ಜ್ ಶೀಟ್ ಪ್ರಕಾರವೇ ಕೆಐಎಡಿಬಿ ಹಣಕಾಸು ನಿಯಂತ್ರಣಾಧಿಕಾರಿ ಎನ್.ವಾಣಿ ಅವರು 12/06/2023ರಂದು ಸಿಐಡಿ ವಿಚಾಣಾಧಿಕಾರಿ ಮುಂದೆ ಹಾಜರಾಗಿ ಸಾಕ್ಷಿಧಾರ ಹೇಳಿಕೆ ನೀಡಿದ್ದಾರೆ. ಹೇಳಿಕೆಯಲ್ಲಿ ಹಣ ಬಿಡುಗಡೆಗೆ ಸಿಇಒ, ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಹಲವು ಅಧಿಕಾರಿಗಳ ಪರಿಶೀಲನೆ ಹಾಗೂ ಸಹಿ ನಂತರ ಆರ್‌ಟಿಜಿಎಸ್ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರೂ ಆಯಾ ಅಧಿಕಾರಿಗಳನ್ನು ಇವರು ಯಾಕೆ ವಿಚಾರಣೆಗೊಳಪಡಿಸಲಿಲ್ಲ. ಇದು ಹಲವು ಅನುಮಾನ ಹುಟ್ಟು ಹಾಕಿದೆ ಎಂದರು.

Advertisements

ಈ ಹಗರಣದಲ್ಲಿ ಶಾಮೀಲಾಗಿರುವ ಕುರಿತು ಎಲ್ಲಾ ದಾಖಲೆ ಹಾಗೂ ಸಾಕ್ಷಿಗಳಿದ್ದರೂ ಕೂಡ ಸುಳ್ಳು ಹೇಳಿಕೆ ನೀಡಿದರೂ ಸಿಐಡಿ ಅವರನ್ನು ಹಾಗೂ ಮೇಲಾಧಿಕಾರಿಗಳನ್ನ ಬಚಾವ್ ಮಾಡಿದ್ದು ಯಾಕೆ ಎಂದು ಕಿಡಿಕಾರಿದರು.

30/04/2022ರಂದು ನಿವೃತ್ತಿ ಹೊಂದಿದ ದಿನ ಎಸ್‌ಎಲ್‌ವಿಡಿ ಸಜ್ಜನ ಅವರು 20 ಕೋಟಿಗೂ ಅಧಿಕ ಹಣವನ್ನು ರೈತರಿಗೆ ಆರ್‌ಟಿಜಿಎಸ್ ಮಾಡಿದ ಮಾಹಿತಿ ಇದೆ. ಅದರಲ್ಲಿ ಒಂದು ಸೀತಾಬಾಯಿ ಯಲ್ಲಾ ನಾಯ್ಕ ಪಾಟೀಲ ಹಾಗೂ ಇನ್ನೊಂದು ಮಾಹಿತಿಯನ್ನು ನಾವೇ ದೂರಿನಲ್ಲಿ ಉಲ್ಲೇಖಿಸಿದ್ದೆವು. ಅನುದಾನ ಕೊರತೆ ಅಂತ ಹೇಳಿ ನಾಲ್ಕು ತಿಂಗಳ ನಂತರ ಸೀತಾಬಾಯಿ ಯಲ್ಲಾ ನಾಯ್ಕ ಅವರ ಐಡಿಬಿಐ ಬ್ಯಾಂಕ್ ಖಾತೆಗೆ 5 ಕೋಟಿ 22 ಲಕ್ಷ ಹಣ ಜಮಾ ಆಗಿದೆ. ಎನ್. ವಾಣಿ ಅವರ ಕಾಲಾವಧಿಯಲ್ಲಿಯೇ ಅನುದಾನ ಕೊರತೆಯಿದ್ದಾಗಲೂ ಯಾವ ಯೋಜನೆ ಅಡಿ ಹಣ ಬಿಡುಗಡೆ ಮಾಡಿದ್ದಾರೆ ಎಂಬುದು ಸಿಐಡಿ ವಿಚಾರಿಸಿಲ್ಲ.

ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ದಯಾನಂದ ಬಂಡಾರಿ, ಲೆಕ್ಕಪತ್ರ ವಿಭಾಗದ ಸಹಾಯಕ ಕಾರ್ಯದರ್ಶಿ ಮಂಜುನಾಥ ಮುದಕವಿ ಹಾಗೂ ಹಣಕಾಸು ನಿಯಂತ್ರಣಾಧಿಕಾರಿ ಎನ್. ವಾಣಿ ಅವರನ್ನು ಬಚಾವ್ ಮಾಡಿರುವುದು ಯಾವ ಒತ್ತಡಕ್ಕೆ ಮಣಿದು, ಯಾವ ರಾಜಕಾರಣಿಯ ಪ್ರಭಾವ ಇದರ ಹಿಂದೆ ಇದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಬಸವರಾಜ ಕೊರವರ ಅಸಮಾಧಾನ ವ್ಯಕ್ತಪಡಿಸಿದರು. ಈ ಹಗರಣಕ್ಕೆ ಪ್ರಮುಖವಾಗಿ ಆಧಾರ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಬಾಂಡ್ ಪೇಪರ್ ಯಾರು ತಂದರು, ಹೇಗೆ ತಯಾರಿಸಿದರು? ಇದರ ಕಿಂಗ್ ಪಿನ್ ಗಳನ್ನು ಇವರೆಗೂ ಯಾಕೆ ಬಂಧಿಸಿಲ್ಲ ಎಂಬುದು ಸಿಐಡಿ ತನಿಖೆಯಲ್ಲಿ ನಿಗೂಢವಾಗಿದೆ ಎಂದು ಕಿಡಿಕಾರಿದರು.

ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ 2012ರಲ್ಲಿ ಪ್ರಕರಣ ರಾಜಿ ಸಂಧಾನ ಆದಾಗ ಮಡಿವಾಳಪ್ಪ ಗುಗ್ಗರಿ ವಕೀಲರು ಇದ್ದರು ಎಂಬುದು ದಾಖಲೆಗಳಿವೆ. ಆದರೂ ಸಿಐಡಿ ಅಧಿಕಾರಿಗಳು ಈ ಪ್ರಕರಣದ ಸಮಗ್ರವಾದ ತನಿಖೆ ನಡೆಸದೆ ಇಂತಹ ಹತ್ತು ಹಲವು ಯಡವಟ್ಟು ಮಾಡಿರುವುದು ಚಾರ್ಜ್ ಶೀಟ್ ನಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ.

ಹೀಗಾಗಿ ಹಲವು ಅನುಮಾನಗಳು ಕಂಡು ಬಂದ ಹಿನ್ನಲೆಯಲ್ಲಿ ಈ ಕುರಿತು ಸಿಎಂ, ಕೈಗಾರಿಕಾ ಸಚಿವರು ಹಾಗೂ ಸಿಐಡಿ ಡಿಜಿಪಿ ಅವರಿಗೆ ಪತ್ರ ಬರೆಯಲಾಗಿದೆ. ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಸುವಂತೆ ಈಗಾಗಲೇ ದೂರು ಮಾಡಲಾಗಿದೆ. ಇದರ ಜೊತೆಗೆ ಮೆಹಬೂಬ್ ಸುಬಾನಿ ಶಿರೂರ ಅವರಿಗೆ 30-04-2022ರಂದು ಆರ್ ಟಿ ಜಿ ಎಸ್ ಮಾಡಿದ ಎರಡು ದಿನದ ನಂತರ ಇ ಸ್ಟಾಂಪ್ ಪೇಪರ್ ತಂದು ಹಾಕುತ್ತಾರೆ. ಆದರೂ ಅದರ ವಿಚಾರಣೆ ನಡೆಸಿಲ್ಲ.

ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ಗಳಾದ ಅಶ್ವಕ್ ದುಂಡಸಿ, ವೀರನಗೌಡ ಪಾಟೀಲ, ಬಸನಗೌಡ ಪಾಟೀಲ, ಶ್ರೀಕಾಂತ್ ಪಾಟೀಲ ಹಾಗೂ ರವಿ ಕುರಬೆಟ್ಟ ಇವರು 2022ರಲ್ಲಿ ಧಾರವಾಡ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಖರೀದಿಸಿದ ಒಟ್ಟು ಆಸ್ತಿ ಕುರಿತು ಸಮಗ್ರವಾಗಿ ಮಾಹಿತಿ ಸಂಗ್ರಹಿಸಿಲ್ಲ. ಮತ್ತು ಅವರ ಅಸ್ತಿ ಮುಟ್ಟು ಗೋಲು ಹಾಕಿಕೊಂಡು ಸರಕಾರದ ನಷ್ಟ ಭರಿಸುವ ಕುರಿತು ಯಾವುದೇ ರೀತಿಯ ಪ್ರಸ್ತಾಪ ಚಾರ್ಜ್ ಶೀಟ್ ನಲ್ಲಿ ನಮೂದಿಸದಿರುವುದು ಯಾಕೆ ಎಂಬ ಯಕ್ಷಪ್ರಶ್ನೆ ಧಾರವಾಡದ ಜನತೆಗೆ ಕಾಡುತ್ತಿದೆ ಎಂದು ಬಸವರಾಜ ಕೊರವರ ವಿವರಿಸಿದರು. ಇದಕ್ಕೆ ಸಹಕಾರ ನೀಡಿದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ನನ್ನು ಕೂಡ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಸಂಜಯ ಅಪ್ಪಾಸಾಬ ದೇಸಾಯಿ ಬ್ಯಾಂಕ್ ಖಾತೆಗೆ ಬಸವರಾಜ ಕೋರಿ ನಾಮಿನಿ ಆಗಿದ್ದರೆ, ಶಿವನಗೌಡ ವೆಂಕನಗೌಡ ಪಾಟೀಲ ಬ್ಯಾಂಕ್ ಖಾತೆಗೆ ಶ್ರೀಕಾಂತಗೌಡ ಪಾಟೀಲ ನಾಮಿನಿ ಆಗಿದ್ದಾರೆ. ಬಸವರಾಜ ಕೋರಿಯನ್ನು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ನಕಲಿ ಆಧಾರ್ ಕಾರ್ಡ್ ಪ್ರಕರಣದಲ್ಲಿ ಬಂಧನ ಆಗಿದ್ದಾನೆ. ಆದರೆ ಸಿಐಡಿ ತನಿಖೆಯಲ್ಲಿ ಬಚಾವ್ ಆಗಿರುವುದು ಹೇಗೆ ಮತ್ತು ಶ್ರೀಕಾಂತಗೌಡ ಪಾಟೀಲ ಸಿಐಡಿ ತನಿಖೆಯಲ್ಲಿ ಪಂಚನಾಗಿರುವುದು ನೋಡಿದರೆ ಸಿಐಡಿ ತನಿಖಾಧಿಕಾರಿ ಎಲ್.ಆರ್. ಅಗ್ನಿ ಸಂಪೂರ್ಣವಾಗಿ ದಾರಿ ತಪ್ಪಿರುವುದು ಮೇಲ್ನೋಟಕ್ಕೆ ತೋರಿಸುತ್ತದೆ ಎಂದು ಬಸವರಾಜ ಕೊರವರ ಆರೋಪಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X