ಉಡುಪಿ | ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

Date:

Advertisements

ಭೀಮಾ ಕೋರೆಗಾಂವ್ ಯುದ್ಧದ 206ನೇ ವಿಜಯೋತ್ಸವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪಡುಬಿದ್ರಿಯಲ್ಲಿ ಆಚರಿಸಿದೆ.

ಪಡುಬಿದ್ರಿ ಪಂಚಾಯತ್ ಬಳಿಯಿಂದ ಬಸ್‌ಟ್ಯಾಂಡ್ ವರೆಗೂ ಮೊಂಬತ್ತಿ ಮೆರವಣಿಗೆ ನಡೆಸಿ, ಅಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಸುಂದರ ಮಾಸ್ತರ್ ಚಾಲನೆ ನೀಡಿದರು. ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಇರುವ ಕೋಮುವಾದಿ ಸರಕಾರದ ಕೆಲವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ, ಒಂದುವೇಳೆ ಅವರು ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ನಾವೆಲ್ಲರೂ ಇನ್ನೊಂದು ಭೀಮಾ ಕೋರೆಗಾಂವ್ ಯುದ್ಧಕ್ಕೆ ರೆಡಿಯಾಗಬೇಕು ಎಂದರು.

ಬ್ರಾಹ್ಮಣ ಪೇಶ್ವೆಗಳ ಮನುವಾದಿ ಸಂವಿಧಾನದ ಆಡಳಿತದ ವಿರುದ್ಧ ಸಿಡಿದೆದ್ದ ಮಹರ್ ಸೈನಿಕರು ಪೇಶ್ವೆ ಸೈನಿಕರನ್ನು ಸದೆಬಡಿದು ಪೇಶ್ವೆ ಆಡಳಿತವನ್ನೇ ಕೊನೆಗಾಣಿಸಿದಂತೇ ನಾವೂ ಸಹ ಕೋಮುವಾದಿ ಸರಕಾರವನ್ನು ಕಿತ್ತೊಗೆಯಬೇಕಿದೇ ಎಂದರು.

Advertisements

ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, 1818ರಲ್ಲಿ ನಡೆದ ಭೀಮಾಕೋರೇಗಾಂವ್ ಯುದ್ಧದ ವಿಜಯೋತ್ಸವ ಅದು ಭಾರತದ ಮೂಲನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ. ಅದು ಮೂಲನಿವಾಸಿಗಳ ಅಸ್ಮಿತೆಯ ವಿಜಯೋತ್ಸವ ಎಂದರು. ಜಾತಿ ತಾರತಮ್ಯವನ್ನೇ ಕಾನೂನು ಮಾಡಿ ಆಡಳಿತ ನಡೆಸುತ್ತಿದ್ದ ಬ್ರಾಹ್ಮಣ ಪೇಶ್ವೆಗಳ ಮರಾಠ 28000 ಸೈನಿಕರನ್ನು ಕೇವಲ 500ಮಹರ್ ಸೈನಿಕರು ಸಿದ್ಧ ನಾಕನ ನೇತೃತ್ವದಲ್ಲಿ ಕೇವಲ 12 ಘಂಟೆಯ ಯುಧ್ಧದಲ್ಲಿ ಸೋಲಿಸಿ ಜಾತಿ ತಾರತಮ್ಯದ ವಿರುದ್ಧ ಸೇಡುತೀರಿಸಿಕೊಂಡ ಉದಾಹರಣೆ ಬೇರೆಲ್ಲೂ ಕಾಣಸಿಗುವುದಿಲ್ಲ.

ಅದರಲ್ಲೂ ಈ ನೈಜ ಘಟನೆಯ ಬಗ್ಗೆ ಯಾವುದೇ ಭಾರತದ ಇತಿಹಾಸಕಾರರು ಪ್ರಸ್ತಾಪವಿದೆ. ಇರುವುದು ಮನುವಾದಿ ಮನಸ್ಸಿನ ಪ್ರತಿಬಿಂಬವಾಗಿದೆ. ಬಾಬಾಸಾಹೇಬರು ಲಂಡನ್‌ನಲ್ಲಿ ಸಂಶೋಧನೆ ಮಾಡುವಾಗ ತಿಳಿದು ಬಂದ ಇತಿಹಾಸವನ್ನು ಭಾರತಕ್ಕೆ ಬಂದು ತಮ್ಮ ಪುಸ್ತಕದಲ್ಲಿ ನಮೂದಿಸಿದಾಗ  ಮಾತ್ರ ಇದು ಬಯಲಾಯಿತು. ಆ ಕೋರೆಗಾಂವ್ ವಿಜಯೋತ್ಸವದ ವಿಜಯ ಸ್ಥಂಭ ಇವತ್ತಿಗೂ ಮಹಾರಾಷ್ಟ್ರದ ಭೀಮಾ ನದಿ ತೀರದ ಕೋರೆಗಾಂವ್ ನಲ್ಲಿ ಈಗಲೂ ಇದೆ. ಅಂಬೇಡ್ಕರ್‌ರವರು ಪ್ರತೀ ವರ್ಷ ಜನವರಿ 1ರಂದು ತಮ್ಮ ಕುಟುಂಬ ಸಮೇತ ತಪ್ಪದೇ ಇಲ್ಲಿಗೆ ಭೇಟಿಕೊಡುತ್ತಿದ್ದರು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು, ಭಾಸ್ಕರ ಮಾಸ್ಟರ್ , ಶ್ರೀಧರ ಕುಂಜಿಬೆಟ್ಟು, ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಅಶೋಕ ಕೊಂಚಾಡಿ, ಶಿವಾನಂದ ಬಿರ್ತಿ, ಸುಕೇಶ್ ಪಡುಬಿದ್ರಿ, ವಿಠಲ  ಉಚ್ಚಿಲ, ಹರೀಶ್ಚಂದ್ರ ಕೆ.ಡಿ, ಪ್ರಶಾಂತ್ ಬಿರ್ತಿ  ಭಾಗವಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X