ತಳಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದವರು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ. ಸಮಾಜದಿಂದ ಧೂಷಣೆ, ಬೈಗುಳ, ಮೈಮೇಲೆ ಸಗಣಿ ಎರಚಿದರೂ ಜಗಗ್ಗದೆ ಮುನ್ನಡೆದ ಧೀರ ಹೋರಾಟಗರ್ತಿ ಫುಲೆ ಅವರು ಎಂದು ಶಿಕ್ಷಕಿ ಲಕ್ಷ್ಮೀ ದ್ರಾವಿಡ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದ ಸಾವಿತ್ರಿಬಾಯಿ ಫುಲೆ ಕಲಿಕಾ ಕೇಂದ್ರದಲ್ಲಿ ನಡೆದ ಸಾವಿತ್ರಿ ಬಾಯಿ ಫುಲೆ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಮೇಲಿನ ಶೋಷಣೆ, ದಬ್ಬಾಳಿಕೆ, ಅನ್ಯಾಯ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು.
ಬಾಲವಿಧವೆಯರ ಸಂಕಷ್ಟ ಅರಿತು, ಬಾಲ್ಯ ವಿವಾಹದ ವಿರುದ್ಧವೂ ದನಿ ಎತ್ತಿದರು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಬಲಾದ ಗ್ರಾಮ ಪಂಚಾಯತಿ ಸದಸ್ಯೆ ಶಾಂತಾಬಾಯಿ ನಾಟಿಕಾರ, ರಮಾಬಾಯಿ, ಬಾಯಿಜಾಬಾಯಿ ಹರಿಜನ, ಸುರೇಖಾ ಬನಸೋಡೆ, ಯಲಬಾಯಿ ಬನಸೋಡೆ, ಯಲಬಾಯಿ ಹರಿಜನ, ಮಹಾದೇವಿ ಶಿವಶರಣ, ರೇಣುಕಾ ದಶವಂತ ಹಾಗೂ ಭೌರಮ್ಮ ದಯವ್ವ ಸಿಂಗೆ ಇದ್ದರು.