ಕರ ಸೇವಕರಿಗೆ ತೊಂದರೆ ಕೊಟ್ಟರೆ ಬಿಡೋ ಪ್ರಶ್ನೆ ಇಲ್ಲ. ನಾನೂ ಕೂಡ ಹೋರಾಟದಲ್ಲಿ ಭಾಗಿಯಾಗಿದ್ದೆ, ನನ್ನನ್ನು ಬಂಧಿಸಲಿ. ಬೇಕಂತಲೇ ಸುಮಾರು 35 ವರ್ಷಗಳ ಕೇಸನ್ನು ಈಗ ಓಪನ್ ಮಾಡಿದ್ದಾರೆ. ನಮ್ಮ ಕರ ಸೇವಕರನ್ನು ಮುಟ್ಟಲಿ ನೋಡೋಣ ಎಂದು ಸರ್ಕಾರಕ್ಕೆ ಈಶ್ವರಪ್ಪ ಸವಾಲು ಹಾಕಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಭಸ್ಮ ಆಗುವ ತನಕ ಕರ ಸೇವಕರು ಬಿಡೋದಿಲ್ಲ. ಹುಬ್ಬಳ್ಳಿಯಲ್ಲಿ ಅದೊಂದೆ ಫೈಲ್ ಯಾಕೆ ಓಪನ್ ಮಾಡಿದ್ರು. ಇಡೀ ದೇಶ ದೀಪಾವಳಿ ಮಾಡುತ್ತಿದೆ. ರಾಮಭಕ್ತರನ್ನ ಈ ಸಂದರ್ಭದಲ್ಲಿ ಅರೆಸ್ಟ್ ಮಾಡಬೇಕಿತ್ತಾ” ಎಂದು ಪ್ರಶ್ನಿಸಿದರು.
ಕರಸೇವಕರಿಗೆ ತೊಂದರೆ ಮಾಡಿ ರಾಜಕಾರಣ ಮಾಡಬೇಡಿ. ಒಂದು ವೇಳೆ ತೊಂದರೆ ಕೊಟ್ಟರೆ ಕಾಂಗ್ರೆಸ್ ರಾಮ ಭಕ್ತರ ಸಿಟ್ಟಿಗೆ ಒಳಗಾಗಬೇಕು ಎಂದು ಈಶ್ಬರಪ್ಪ ಎಚ್ಚರಿಸಿದರು. ಅದೊಂದೆ ಫೈಲ್ ಯಾಕೆ ಓಪನ್ ಮಾಡಿದ್ರಿ, ಯಾರು ಯಾರು ಭಾಗೀಯಾಗಿದ್ರು ಎಲ್ಲರನ್ನೂ ಅರೆಸ್ಟ್ ಮಾಡಿ.
ನಮ್ಮನ್ನೇಲ್ಲ ಅರೆಸ್ಟ್ ಮಾಡಿ ನೋಡೋಣ, ಎಂದು ಸವಾಲ್ ಹಾಕಿದರು. ಸಿದ್ದರಾಮಯ್ಯ ಬೇಡ ಅಂದ್ರೂ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಕೋರ್ಟ್‌ನಲ್ಲಿ ಸಮವಸ್ತ್ರ ಹಾಕಿಕೊಂಡು ಹೋಗಬೇಕೆಂದು ಎಂದು ಆದೇಶ ಇತ್ತು. ಆದರೆ, ಇದ್ದಕ್ಕಿದ್ದಂತೆ ಹಿಜಾಬ್ ಓಪನ್ ಅಂದು ಸಿದ್ದರಾಮಯ್ಯ ಕೋಮು ಗಲಭೆ ಹಚ್ಚಿಸಿದ್ರು. ಅಭಿವೃದ್ದಿ ಮೇಲೆ ಚುನಾವಣೆಗೆ ಹೋಗೋಣ ಎಂದರೂ ಓಕೆ. ಹಿಂದುತ್ವದ ಮೇಲೆ ಚುನಾವಣೆ ಅಂದರೆ ಅದುಕ್ಕೂ ನಾವು ತಯಾರು. ಸುಮ್ಮನೆ ಇದ್ದ ಹುಬ್ಬಳಿಗೆ ಗಲಭೆ ಹಚ್ಚಿದ್ದೀರಿ ಎಂದು ಈಶ್ವರಪ್ಪ ಹರಿಹಾಯ್ದರು.
ಸಿದ್ದರಾಮಯ್ಯ ಅಯೋಧ್ಯೆಗೆ ಪೂಜೆ ಮಾಡಲ್ಲ ಅಂತಾರೆ. ಮುಲಾಯಂ ಸಿಂಗ್ ಒಂದು ಅಯೋಧ್ಯೆ ಗೆ ಒಂದು ಹಕ್ಕಿ ಹೋಗೋಕೆ ಬಿಡಲ್ಲ ಅಂದಿದ್ರು. ಆದರೆ ರಾಜೀವ ಗಾಂಧಿ, ನರಸಿಂಹರಾವ್ ಸಹಕಾರ ಕೊಟ್ಟಿದ್ದರು ಎಂದು ನೆನಪಿಸಿದರು.
ಹಿಂದುತ್ವ ಜೀವನದ ಪದ್ಧತಿ. ನನ್ನ ಪೂಜೆ ಪದ್ಧತಿಗೆ ಅಡ್ಡ ಬಂದರೆ ಬಿಡಲ್ಲ. ನಾವು ಪೂಜೆ ಮಾಡಿದರೆ ಇವರಿಗ್ಯಾಕೆ ಸಿಟ್ಟು, ಇವರೇನು ಬಾಬರ್ ವಂಶಸ್ಥರಾ ಎಂದು ವ್ಯಂಗವಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಜನಹಳ್ಳಿ ಶಿವಕುಮಾರ್, ಜಯಮ್ಮ ಸೇರಿದಂತೆ ಇತರರು ಹಾಜರಿದ್ದರು.