ವಿಜಯಪುರದಲ್ಲಿರುವ ಲೊಯೋಲಾ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಕಲಬುರಗಿಯ ಕ್ರೈಸ್ತ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಂದಾ ಅವರು ಉದ್ಘಾಟಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಂಗಮೇಶ್ ಬಬಲೇಶ್ವರ, ಡೈನೇಶಿಯಸ್ ವಾಸ್.ಎಸ್ ಜೆ, ಫ್ರಾನ್ಸಿಸ್ ಮಿನಿಜೆಸ್ ಎಸ್.ಜೆ, ರೊನಾಲ್ಡ್ ಸೆರಾವೋ ಎಸ್.ಜೆ, ಶ್ರೀಶೈಲ್ ರತ್ನಾಕರ್, ರಂಜಾನ್ ಬಿ ಪಿಂಜಾರ್ ಹಾಗೂ ಯುವರಾಜ್ ಮತ್ತು ಅಕ್ಷತಾ ದೇವನಗಾಂವ್ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ನಿರ್ದೇಶಕ ಫಾದರ್ ರೊನಾಲ್ಡ್ ಸೆರವೊ ಎಸ್.ಜೆ. ಸ್ವಾಗತಿಸಿದರು. ಫಾದರ್ ಜೋಸೆಫ್ ಕಿರಣ್ ಎಸ್.ಜೆ ವಂದಿಸಿದರು. ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಪ್ರೇಮಾ ಶೆಟ್ಟರ್ ನಿರೂಪಣೆ ಮಾಡಿದರು.