1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಆರೋಪಿ, ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಿಡುಗಡೆಗೆ ಒತ್ತಾಯಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಗುರುವಾರ, ಬಿಜೆಪಿ ನಾಯಕರು ‘ನಾನೂ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಪೋಸ್ಟರ್ ಹಿಡಿದು ಪ್ರತಿಭಟನಾ ಅಭಿಯಾನ ನಡೆಸಿದ್ದಾರೆ. ಬಿಜೆಪಿಗರ ಪ್ರತಿಭಟನೆಗೆ ಕುಹಕವಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ಮೇಲಿರುವ ಆರೋಪಿಗಳನ್ನು ಪೋಸ್ಟರ್‌ನಲ್ಲಿ ಎಡಿಟ್ ಮಾಡಿ ಹಂಚಿಕೊಂಡಿದೆ.
ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿಗರೆಲ್ಲರೂ ‘ನನ್ನನ್ನೂ ಬಂಧಿಸಿ’ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ” ಎಂದು ಹೇಳಿದೆ. ವಿಜಯೇಂದ್ರ ಅವರು ಹಿಡಿದಿದ್ದ ಪೋಸ್ಟರ್ ಅನ್ನು ಎಡಿಟ್ ಮಾಡಿ, “ನಾನು ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿ ರೂ. ಅಕ್ರಮದಲ್ಲಿ ಪಾಲುದಾರ, ನನ್ನನ್ನು ಬಂಧಿಸಿ” ಎಂದು ಬರೆದಿದೆ.
,@BJP4Karnataka ಅಧ್ಯಕ್ಷರಾದ @BYVijayendra ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ.
ಬಿಜೆಪಿಗರೆಲ್ಲರೂ “ನನ್ನನ್ನೂ ಬಂಧಿಸಿ“ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? pic.twitter.com/iE4nqOTZrW
— Karnataka Congress (@INCKarnataka) January 5, 2024
ಈಶ್ವರಪ್ಪ ಅವರ ಪೋಸ್ಟರ್‌ಅನ್ನು ‘ನಾನು 40 ಪರ್ಸೆಂಟ್ ಕಮಿಷನ್ ನುಂಗಿ ಸಂತೋಷ್ ಪಾಟೀಲ್ ಸಾವಿಗೆ ಕಾರಣನಾಗಿದ್ದೇನೆ. ನನ್ನನ್ನು ಬಂಧಿಸಿ’ ಎಂದು ಎಡಿಟ್ ಮಾಡಲಾಗಿದ್ದು, “ಈಶ್ವರಪ್ಪ ಅವರು ಹಿಡಿಯಬೇಕಾದ ಪೋಸ್ಟರ್ ಇದು! ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ!” ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ?: ಬಾಬಾಬುಡನ್‌ಗಿರಿ ಗೋರಿ ಧ್ವಂಸ ಕೇಸ್ ರೀ ಓಪನ್ ಆಗಿಲ್ಲ | ದೃಶ್ಯ ಮಾಧ್ಯಮಗಳ ವರದಿ ಸುಳ್ಳು: ಸಿಎಂ ಕಚೇರಿ ಸ್ಪಷ್ಟನೆ
ಮಾಜಿ ಸಚಿವ ಸುನೀಲ್ ಕುಮಾರ್ ಅವರ ಪೋಸ್ಟರ್‌ಅನ್ನು, ‘ಪರಶುರಾಮ ಮೂರ್ತಿಯ ಕಂಚನ್ನು ಕದ್ದಿದ್ದೇನೆ. ಸರ್ಕಾರಿ ಸಿಮೆಂಟ್ ಕದ್ದಿದ್ದೇನೆ. ನನ್ನನ್ನೂ ಬಂಧಿಸಿ’ ಎಂದು ಎಡಿಟ್ ಮಾಡಿದ್ದು, “ನನ್ನನ್ನೂ ಬಂಧಿಸಿ ಎನ್ನುತ್ತಿರುವ ಸುನಿಲ್ ಕುಮಾರ್ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ?” ಎಂದು ಟೀಕಿಸಿದೆ.
ನನ್ನನ್ನೂ ಬಂಧಿಸಿ ಎನ್ನುತ್ತಿರುವ @karkalasunil ಅವರೇ,
ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ?
ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ? pic.twitter.com/bgTdrd22ZF
— Karnataka Congress (@INCKarnataka) January 5, 2024
ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಪೋಸ್ಟ್‌ಅನ್ನು ‘ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ, ನನ್ನನ್ನೂ ಬಂಧಿಸಿ’ ಎಂದು ಎಡಿಟ್ ಮಾಡಿರುವ ಕಾಂಗ್ರೆಸ್, “ರಾಜ್ಯ ಬಿಜೆಪಿ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು. ಸಿಟಿ ರವಿ ಅವರೇ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ?” ಎಂದು ವ್ಯಂಗ್ಯವಾಡಿದೆ.
ಸಂಸದ ಪ್ರತಾಪ್ ಸಿಂಹ ಅವರ ಪೋಸ್ಟರ್‌ಅನ್ನು, ‘ನಾನು ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟು ಸಹಕರಿಸಿದ್ದೇನೆ, ನನ್ನನ್ನೂ ಬಂಧಿಸಿ’ ಎಂದು ಎಡಿಟ್ ಮಾಡಿರುವ ಕಾಂಗ್ರೆಸ್, “ಪ್ರತಾಪ್ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ!” ಎಂದು ಕುಟುಕಿದೆ.
,@mepratap ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ,
ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ! pic.twitter.com/qD4pO11CUL
— Karnataka Congress (@INCKarnataka) January 5, 2024
ಹಾವಿನಪುರದ ಬಾಸ್ ನನ್ನು ಮೆಚ್ಚಿಸಲು,,, ಬುದ್ಧಿ ಉಪಯೋಗಿಸದೇ ಪೆದ್ದು ಪೆದ್ದಾಗಿ ವರ್ತಿಸಿ ಇದ್ದ ಕಾಸಿನ ಕಿಮ್ಮತ್ತು ಕಳೆದುಕೊಳ್ಳುವರು,,, ಕೊನೆಗೆ ನೋಟು ಎಣಿಸುವ ಮೆಷೀನ್ ಈಶ್ವರಪ್ಪ,,ಎತ್ತಿನಾಳ, ಸದಾಆನಂದ ಗೌಡರು,,ತರಹ ಮೂಲೆಯಲ್ಲಿ ಕೂಡಿಸಿ ತಮ್ಮ ಕೈಗೊಂಬೆಯಾಗಿ ಕುಣಿಯುವ ಕೋಮುದ್ವೇಷಿ ಪಡ್ಟಿಡೆಗೆ ಟಿಕೆಟ್ ಕೊಟ್ಟು,,ಮಂಗ ಮಾಡುವರು,,,
Definitely true