ಮಧ್ಯ ಪ್ರದೇಶ: ಅಕ್ರಮ ವಿದ್ಯಾರ್ಥಿನಿಯರ ನಿಲಯದಿಂದ ವಿವಿಧ ರಾಜ್ಯಗಳ 26 ಬಾಲಕಿಯರು ನಾಪತ್ತೆ

Date:

Advertisements

ಅಕ್ರಮವಾಗಿ ನಡೆಸಲಾಗುತ್ತಿದ್ದ ವಿದ್ಯಾರ್ಥಿನಿಯರ ನಿಲಯದಿಂದ ಗುಜರಾತ್, ಜಾರ್ಖಂಡ್, ರಾಜಸ್ಥಾನ ಹಾಗೂ ಮಧ್ಯ ಪ್ರದೇಶ ಒಳಗೊಂಡ ರಾಜ್ಯಗಳಿಗೆ ಸೇರಿದ 26 ಬಾಲಕಿಯರು ನಾಪತ್ತೆಯಾದ ಘಟನೆ ಮಧ್ಯ ಪ್ರದೇಶದ ಭೋಪಾಲ ನಗರದ ಹೊರವಲಯ ಪ್ರದೇಶದಲ್ಲಿ ನಡೆದಿದೆ.

ಭೋಪಾಲದ ಪಾರಿವಾಲಿಯ ಪ್ರದೇಶದ ಅಂಚಲ್‌ ವಿದ್ಯಾರ್ಥಿನಿಯರ ನಿಲಯದಿಂದ ಈ ಘಟನೆ ಬೆಳಕಿಗೆ ಬಂದ ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸುರಕ್ಷತಾ ಆಯೋಗದ ಅಧ್ಯಕ್ಷರಾದ ಪ್ರಿಯಾಂಕ್‌ ಕನೂನ್‌ಗೊ ಅವರು ದಿಢೀರ್ ಭೇಟಿ ನೀಡಿದರು. ನೋಂದಣಿ ಪುಸ್ತಕವನ್ನು ಪರಿಶೀಲಿಸಿದಾಗ 68 ವಿದ್ಯಾರ್ಥಿನಿಯರಲ್ಲಿ 26 ಮಂದಿ ನಾಪತ್ತೆಯಾಗಿದ್ದರು.

ನಾಪತ್ತೆಯ ಬಗ್ಗೆ ಬಾಲಕಿಯರ ಬಗ್ಗೆ ವಿದ್ಯಾರ್ಥಿನಿಯರ ನಿಲಯದ ನಿರ್ದೇಶಕರಾದ ಅನಿಲ್‌ ಮ್ಯಾಥ್ಯೋ ಅವರನ್ನು ಪ್ರಶ್ನಿಸಿದಾಗ ಅವರು ತೃಪ್ತಿಕರವಾದ ಉತ್ತರ ನೀಡಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Advertisements

ನಾಪತ್ತೆಯಾದ ಬಾಲಕಿಯರಲ್ಲಿ ಗುಜರಾತ್‌, ಜಾರ್ಖಂಡ್ ಹಾಗೂ ರಾಜಸ್ಥಾನದವರು ಸೇರಿದ್ದಾರೆ. ಕೆಲವರು ಮಧ್ಯ ಪ್ರದೇಶ ರಾಜ್ಯದ ವಿವಿಧ ನಗರಗಳಿಗೂ ಸೇರಿದವರಾಗಿದ್ದರು.

ಎಫ್‌ಐಆರ್‌ ಪ್ರಕಾರ ಅಕ್ರಮವಾಗಿ ನಡೆಯುತ್ತಿದ್ದ ಈ ವಿದ್ಯಾರ್ಥಿನಿಯರ ನಿಲಯದಲ್ಲಿ ಹಲವು ಅಕ್ರಮಗಳು ಪತ್ತೆಯಾಗಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್‌ʼ ಮಕ್ಕಳೇ ಕೊಡುವಂತಾಗಬೇಕು

ಮಕ್ಕಳ ಮನೆಯೊಂದನ್ನು ನಿರ್ವಹಿಸುತ್ತಿದ್ದ ಸಂಸ್ಥೆಯೊಂದು ಪರವಾನಗಿ ಪಡೆಯದೆ ನಡೆಸಲಾಗುತ್ತಿದ್ದ ಈ ವಿದ್ಯಾರ್ಥಿನಿಯರ ನಿಲಯದಲ್ಲಿ ಬೀದಿಯಿಂದ ರಕ್ಷಿಸಲ್ಪಟ್ಟ ಕೆಲವು ಬಾಲಕಿಯರು ಸೇರಿದ್ದರು. ರಕ್ಷಿಸಲಾಗಿದ್ದ ಕೆಲವು ಬಾಲಕಿಯರನ್ನು ಗುಪ್ತವಾಗಿ ಈ ನಿಲಯಕ್ಕೆ ಬಿಡಲಾಗುತ್ತಿತ್ತು. ನಾಪತ್ತೆಯಾದವರಲ್ಲಿ 6 ರಿಂದ 18 ವರ್ಷದವರಿದ್ದಾರೆ ಎಂದು ಪ್ರಿಯಾಂಕ್‌ ಕನೂನ್‌ಗೊ ತಿಳಿಸಿದ್ದಾರೆ.

“ದುರದೃಷ್ಟವಶಾತ್, ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇಂತಹ ಎನ್‌ಜಿಒಗಳಿಂದ ಒಪ್ಪಂದದ ಮೇರೆಗೆ ಮಕ್ಕಳ ಸಹಾಯವಾಣಿಯನ್ನು ನಡೆಸಲು ಬಯಸುತ್ತಾರೆ” ಎಂದು ಪ್ರಿಯಾಂಕ್‌ ಕನೂನ್‌ಗೊ ತಿಳಿಸಿದ್ದಾರೆ.

ಬಾಲಕಿಯರ ನಾಪತ್ತೆಯ ಬಗ್ಗೆ ವಿಪಕ್ಷ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರದ ದುರಾಡಳಿತದಿಂದ ಮಾನವ ಕಳ್ಳಸಾಗಣಿಕೆ ನಡೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X