ವಿಜಯಪುರ ಜಿಲ್ಲೆ ಕೊಲ್ದಾರ ತಾಲೂಕಿನ ನಾಗರದಿನ್ನಿ ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಜರಗಿತು.
ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಬರುವ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾ ಗಾಂಧಿ ವೃದ್ಯಾಪ ವೇತನ, ಮನಸ್ವಿನಿ ಮೈತ್ರಿ ವಿಧವಾ ವೇತನ ಯೋಜನೆ, ಅಂಗವಿಕಲರ ಪಿಂಚಣಿ ಯೋಜನೆಗಳ ಬಗ್ಗೆ ತಹಶೀಲ್ದಾರ್ ಎಸ್ ಎಸ್ ನಾಯಕಲ ಮಠ ಅವರು ವಿಸ್ತಾರವಾಗಿ ತಿಳಿಸಿದರು. ಬಳಿಕ ಸ್ಥಳದಲ್ಲಿಯೇ 18 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, “ಕೊಲ್ದಾರ ತಾಲೂಕಿನ ಎಲ್ಲ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಬಂದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ದು, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದ್ದಾರೆ. ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇದು ಒಂದು ಮಹತ್ವದ ಕಾರ್ಯಕ್ರಮ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೆಣ್ಣು ಸಂಕುಲ ಸತ್ತರೆ ಇಡೀ ಮನುಷ್ಯ ಸಂಕುಲ ಸತ್ತಂತೆ: ಲೇಖಕಿ ರೂಪ ಹಾಸನ
ಈ ಸಂದರ್ಭದಲ್ಲಿ ಹೊಸದಾಗಿ ಹಲವು ಪಿಂಚಣಿಗೆ ಸಂಬಂಧಪಟ್ಟ 25 ಅರ್ಜಿಗಳು ಸಲ್ಲಿಕೆಯಾದವು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ಗಣಿ, ಮಹೇಶ್ ತೋಟಗಾರ, ಅಲ್ಲಾಭಕ್ಷಿ ಕಲ್ಲಾಗೋರಿ, ಲಾಲಾ ಬಿ ಬಾಗನವರ್, ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಊರಿನ ಪ್ರಮುಖರು ಇದ್ದರು.