75ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಬೃಹತ್ ಬಹಿರಂಗ ಸಮಾವೇಶವನ್ನು ಜನವರಿ 26ರಂದು ಬೀದರ್ ನಗರದ ಡಾ.ಬಾಬಾ ಅಂಬೇಡ್ಕರ್ ವೃತ್ತದ ಎದುರುಗಡೆ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಕರಪತ್ರವನ್ನು ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಎದುರುಗಡೆ ಬಿಡುಗಡೆ ಮಾಡಲಾಯಿತು.
“ಸಂವಿಧಾನ ಸಂರಕ್ಷಣಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿವರ್ಷದಂತೆ ಈ ವರ್ಷವೂ ಆಯೋಜಿಸಿದ ಪ್ರಜಾಪ್ರಭುತ್ವದ ಉಳಿವಿಗಾಗಿ ಬೃಹತ್ ಬಹಿರಂಗ ಸಮಾವೇಶಕ್ಕೆ ವಿಚಾರವಾದಿಗಳಾದ ಕನ್ಹಯ್ಯಾಕುಮಾರ, ಅಮೂಲ ಮಿಠಕರಿ ಮತ್ತು ರಾಜ್ಯದ ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಹೆಚ್.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ, ಸಂತೋಷ ಲಾಡ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ರಹೀಂ ಖಾನ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ” ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮವು ಜನವರಿ 26 ರಂದು ಸಂಜೆ 5 ಗಂಟೆಗೆ ಡಾ.ಬಾಬಾ ಅಂಬೇಡ್ಕರ್ ವೃತ್ತದ ಎದುರುಗಡೆ ನಡೆಯಲಿದೆ. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಪದಾಧಿಕಾರಿಗಳು ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ನಟ ಯಶ್ ಜನ್ಮದಿನದ ಬ್ಯಾನರ್ ಹಾಕುವಾಗ ವಿದ್ಯುತ್ ಸ್ಪರ್ಶ ; ಮೂವರು ಸಾವು
ಈ ಸಂದರ್ಭದಲ್ಲಿ ಸಲಹೆಗಾರರಾದ ಅಮೃತರಾವ ಚಿಮಕೋಡೆ, ಬಸವರಾಜ ಮಾಳಗೆ, ಅಬ್ದುಲ್ ಮನ್ನಾನ್ ಸೇಠ್, ಸುಮಂತ ಕಟ್ಟಿಮನಿ, ಶಿವಾಜಿರಾವ ಪಾಟೀಲ ಮುಂಗನಾಳ, ವಿಠಲರಾವ ಪ್ಯಾಗೆ ಹಾಗೂ ಕಾರ್ಯಕ್ರಮದ ಅಧ್ಯಕ್ಷ ನ್ಯಾಯವಾದಿ ನಾರಾಯಣ ಗಣೇಶ್, ಗೌರವ ಅಧ್ಯಕ್ಷ ಗೋರ‍್ಧನ್ ರಾಥೋಡ್, ಕಾರ್ಯಾಧ್ಯಕ್ಷ ಬಾಬು ಪಾಸ್ವಾನ್, ಪ್ರಧಾನ ಕಾರ್ಯದರ್ಶಿ ಜಾನ ವೆಸ್ಲಿ, ಸಂಚಾಲಕ ಅನಿಲಕುಮಾರ ಬೆಲ್ದಾರ್, ಖಜಾಂಚಿ ಶ್ರೀಪತರಾವ ದೀನೆ, ಉಪಾಧ್ಯಕ್ಷ ಶಿವಕುಮಾರ ನೀಲಿಕಟ್ಟಿ ಸೇರಿದಂತೆ ಪ್ರಮುಖರಾದ ಅಶೋಕಕುಮಾರ ಮಾಳಗೆ ಅವಿನಾಶ ದೀನೆ, ಮಾರುತಿ ಕಂಠಿ, ಸಂದೀಪ ಕಾಂಟೆ, ಶಾಲಿವಾನ ಬಡಿಗೇರ, ಬಾಬುರಾವ ಮಿಠಾರೆ, ವೈಜಿನಾಥ ನಿಡೋದಾ, ರಾಜಕುಮಾರ ಶೇರಿಕಾರ, ಮಲ್ಲಿಕಾರ್ಜುನ ಮೊಳಕೆರೆ, ವಿನೋದ ಬಂದಗೆ, ಗುಣವಂತ ಶಿಂಧೆ, ಮೋಹನ ಡಾಂಗೆ, ಮುಕೇಶ ರಾಯ, ಮೌಲಪ್ಪ ಮಾಳಗೆ, ವಿನೋದ ಸಿಂದೆ, ಸುನೀಲ ಕಡ್ಡೆ ಇದ್ದರು.