ಗದಗ ಬೆಟಗೇರಿ ಅವಳಿ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಮತ್ತು ಅಪರಾಧ ಪತ್ತೆ ಮಾಡಲು ಗದಗ ಜಿಲ್ಲಾಡಳಿತ ಮತ್ತು ಗದಗ ಜಿಲ್ಲಾ ಪೊಲೀಸ ಇಲಾಖೆ ವತಿಯಿಂದ ಥರ್ಡ್ ಐ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಅನ್ನು ಪ್ರಾರಂಭಿಸಿದೆ.
ಶುಕ್ರವಾರದಂದು (ಜ.5) ಗದಗ ನಗರದಾದ್ಯಂತ ಜಿಲ್ಲಾ ಪೊಲೀಸ ಇಲಾಖೆ ವತಿಯಿಂದ ಒಟ್ಟು 5 ಜನ ಪೊಲೀಸ ನಿರೀಕ್ಷಕರು, 9 ಜನ ಪೊಲೀಸ ಉಪನಿರೀಕ್ಷಕರು, ಸಿಬ್ಬಂದಿ ಹಾಗೂ ಗದಗ ಸಂಚಾರ ಪೊಲೀಸ ಠಾಣೆ ವತಿಯಿಂದ ಥರ್ಡ್ ಐ ಸೆಂಟರ್‌ನ ಸಿಸಿ ಕ್ಯಾಮರಾಗಳಿಂದ ದಂಡ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಡಿಫೆಕ್ಟಿವ್ ನಂಬರ್ ಪ್ಲೇಟ್ ಹೊಂದಿದ ಮತ್ತು ನಂಬರ್ ಪ್ಲೇಟ್ ಹೊಂದಿರದ, ನಕಲಿ ನಂಬರ್ ಪ್ಲೇಟ್ ಹೊಂದಿದ ವಾಹನಗಳನ್ನು ಗದಗ ಶಹರದ ಮುಳಗುಂದ ನಾಕಾ, ಲದ್ವಾ ಸರ್ಕಲ್, ಭೂಮರಡ್ಡಿ ಸರ್ಕಲ್, ಮಹಾತ್ಮಾ ಗಾಂಧಿ ಸರ್ಕಲ್, ಹಾತಲಗೇರಿ ಆಕಾದ ಹತ್ತಿರ ಹಾಗೂ ಇತರೆ ಸ್ಥಳಗಳಲ್ಲಿ ಒಟ್ಟು 145 ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸುವ ಮೂಲಕ ಹಾಗೂ ಕಠಿಣ ಕಾನೂನು ಕ್ರಮ ಕೈಗೊಂಡಿದೆ.
ಗದಗ ಜಿಲ್ಲೆಯಾದ್ಯಂತ ಸುಗಮ ಸಂಚಾರ ವ್ಯವಸ್ಥೆ ರೂಪಿಸಲು 2023ರಲ್ಲಿ ಥರ್ಡ್ ಐ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್‌ನ ಮೂಲಕ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಹಾಗೂ ಕಣ್ಣು ತಪ್ಪಿಸಿಕೊಳ್ಳುತ್ತಿರುವ ವಾಹನಗಳ ಚಾಲಕರ ಮೇಲೆ ಪ್ರಸ್ತುತ ಹಾಗೂ ಮುಂದಿನ ದಿನಮಾನಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ದಂಡ ವಿಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾ ಪೊಲೀಸ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.