ಭಾರತದ ರಾಯಭಾರಿ ನವದೆಹಲಿಯಲ್ಲಿರುವ ಮಾಲ್ಡೀವ್ಸ್ ವಿದೇಶಾಂಗ ಇಲಾಖೆ ಸಿಬ್ಬಂದಿಗೆ ಸಮನ್ಸ್ ನೀಡಿದ ನಂತರ ದ್ವೀಪ ರಾಷ್ಟ್ರದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ.
ಭಾರತ ಸಮನ್ಸ್ ನೀಡಿದ ಕೆಲವೆ ಗಂಟೆಗಳಲ್ಲಿ ಮಾಲ್ಡೀವ್ಸ್ ಸರ್ಕಾರ ಕೂಡ ತನ್ನ ದೇಶದ ಭಾರತದ ರಾಯಬಾರಿಗೆ ಸಮನ್ಸ್ ನೀಡಿದೆ. ಇವೆಲ್ಲ ಬೆಳವಣಿಗೆಗಳು ವಿವಾದಾತ್ಮಕ ಹೇಳಿಕೆ ನೀಡಿದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದ ನಂತರ ತೀವ್ರಗೊಂಡಿದೆ.
ಭಾರತದ ಮಾಲ್ಡೀವ್ಸ್‌ನ ರಾಯಭಾರಿಯಾಗಿರುವ ಇಬ್ರಾಹಿಂ ಶಾಹೀಬ್ ಅವರನ್ನು ನವದೆಹಲಿಯ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಕರೆಸಿಕೊಂಡು ಸಂಪೂರ್ಣ ಆಕ್ಷೇಪಾರ್ಹ ನಡವಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹವಾಗಿ ಪೋಸ್ಟ್ ಮಾಡಿ ಚೀನಾಕ್ಕೆ ಆರ್ಥಿಕ ನೆರವು ಕೋರಿದ್ದ ಮಾಲ್ಡೀವ್ಸ್ ಮೂವರು ಸಚಿವರನ್ನು ಅಧ್ಯಕ್ಷ ಮೊಹಮದ್ ಮುಯಿಜು ಅಮಾನತುಗೊಳಿಸಿದ್ದರು. ಅಲ್ಲದೆ ಸರ್ಕಾರವು ವಿವಾದಾತ್ಮಕ ಹೇಳಿಕೆಯಿಂದ ಅಂತರ ಕಾಯ್ದುಕೊಂಡು, ಪೋಸ್ಟ್‌ಗಳು ವೈಯಕ್ತಿಕ ಹೇಳಿಕೆ ಎಂದು ಪ್ರಕಟಣೆ ಹೊರಡಿಸಿತ್ತು.
ಮೂವರು ಸಚಿವರು ಆಕ್ಷೇಪಾರ್ಹ ಟ್ವೀಟ್ ಪೋಸ್ಟ್ ಪ್ರಕಟಿಸಿದ ನಂತರ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸ್ವತಃ ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಚಿವರು ಹೇಳಿಕೆಯನ್ನು ಖಂಡಿಸಿದ್ದರು.
ಮಾಲ್ಡೀವ್ಸ್‌ನ ಪ್ರವಾಸವನ್ನು ಬಹಿಷ್ಕರಿಸಿ ಎಂದು ಭಾರತದ ವಿವಿಧ ಕ್ಷೇತ್ರದ ಪ್ರಖ್ಯಾತರಾದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಸಾಹೀದ್ ಕಪೂರ್, ಹಾರ್ದಿಕ್ ಪಾಂಡ್ಯ, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.