ರೈತ ಸೇನಾ ಕರ್ನಾಟಕ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯದ ಪದಾಧಿಕಾರಿಗಳು ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಅಡ್ಡ ಅಡೆತಡೆಗಳ ನಿವಾರಣೆ ಮಾಡಲು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮನವಿ ಮಾಡಿದ್ದಾರೆ.
ಧಾರವಾಡ ಅರಣ್ಯ ಇಲಾಖೆ, ಬೆಳಗಾವ್ ರಾಷ್ಟ್ರೀಯ ಹುಲಿಯ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಅಧಿಕಾರಿಗಳು ಹಾಗೂ ವಿಜ್ಞಾನಿ ಡಾ. ಕೌಶಿಕ್ ಮತ್ತು ಹರಣಿ ವೇಣುಗೋಪಾಲ್ ಬೆಂಗಳೂರು ಹಾಗೂ ನೀರಾವರಿ ಸಿಬ್ಬಂದಿ ವರ್ಗದ ಅಧಿಕಾರಿಗಳು ಮತ್ತು ಫಾರೆಸ್ಟ್ ಇಲಾಖೆಯ ಅಧಿಕಾರಿಗಳ ಬೆಳಗಾವಿ ವೃತ್ತದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಎಲ್ಲಾ ಅಧಿಕಾರಿಗಳನ್ನು ಸ್ವಾಗತಿಸಿದ ರೈತ ವೀರೇಶ್ ಸೊಬರದ ಮಠ ಹಾಗೂ ರಾಜ್ಯ ವಕ್ತಾರರು ಗುರು ರಾಯಣ್ಣ ಗೌಡ, ಉತ್ತರ ಕರ್ನಾಟಕದ ಸಂಚಾಲಕರಾದ ನಂದೀಶ್ ಮಠದ ಮತ್ತು ಮಹೇಶ್ ನಾವಳ್ಳಿ ಇವರ ಸಮ್ಮುಖದಲ್ಲಿ ರೈತರು ನಮ್ಮ ಬೇಡಿಕೆ ಬೇಗನೆ ಈಡೇರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.