ಬ್ಯಾನರ್ ಕಟ್ಟಬೇಡಿ: ಸಾವನ್ನಪ್ಪಿದ ಅಭಿಮಾನಿಗಳ ಕುಟುಂಬ ಸದಸ್ಯರನ್ನು ಸಂತೈಸಿದ ನಟ ಯಶ್

Date:

Advertisements

“ಯಾರೂ ದಯವಿಟ್ಟು ಇನ್ನು ಮುಂದೆ ಬ್ಯಾನರ್ ಕಟ್ಟಬೇಡಿ. ನನಗೆ ನನ್ನ ಹುಟ್ಟುಹಬ್ಬದ ದಿನ ಬಂತೆಂದರೆ ಭಯ ಶುರುವಾಗಿಬಿಟ್ಟಿದೆ” ಎಂದು ಕನ್ನಡದ ಸ್ಟಾರ್ ನಟ ಯಶ್ ಅವರು ತಿಳಿಸಿದ್ದಾರೆ.

ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಟೌಟ್​​​​​ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಗದಗ ಜಿಲ್ಲೆಯ ಸೂರಣಗಿಯ ಹನಮಂತು, ನವೀನ್ ಮತ್ತು ಮುರಳಿಯವರ ಕುಟುಂಬಗಳನ್ನು ಭೇಟಿಯಾಗಿ, ಸಾಂತ್ವನ ನೀಡಿದರು.

ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯಶ್, “ಯಾವುದೇ ಕಾರಣಕ್ಕೂ ನಾನು ಈ ಥರದ ಅಭಿಮಾನಿ ವ್ಯಕ್ತಪಡಿಸಿ ಎಂದು ಬಯಸುವವಲ್ಲ. ಪ್ರತಿವರ್ಷ ನನ್ನ ಹುಟ್ಟಿದ ದಿನ ಬಂದಾಗ ಈಥರ ಘಟನೆ ನಡೆದಾಗ, ನನಗೆ ಬರ್ತ್‌ಡೇ ಅಂದರೇನೇ ಒಂಥರಾ ಭಯ ಬಂದುಬಿಟ್ಟಿದೆ. ನಿಜ ಹೇಳಬೇಕೆಂದರೆ ನನಗೇನೇ ಅಸಹ್ಯ ಆಗಿಬಿಟ್ಟಿದೆ. ಅಭಿಮಾನಿಗಳು ಎಲ್ಲಿದ್ದಾರೋ ಅಲ್ಲಿಂದಲೇ ನಮಗೆ ಹರಸಿದರೆ ಸಾಕು, ಅದುವೇ ನಿಜವಾದ ಬರ್ತ್‌ಡೇ” ಎಂದು ತಿಳಿಸಿದರು.

Advertisements

ಇದನ್ನು ಓದಿದ್ದೀರಾ? ಯಶ್ ಅಭಿಮಾನಿಗಳ ದುರಂತ ಸಾವು | ಮೃತರ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

“ಈ ವರ್ಷ ಬರ್ತ್‌ಡೇ ಮಾಡದಿರುವುದಕ್ಕೆ ಕಾರಣಾನೇ ಮಾಧ್ಯಮಗಳು. ಯಾಕೆಂದರೆ ಕಳೆದ 10-15ದಿನಗಳ ಹಿಂದೆಯೇ ಶುರುವಿಟ್ಟುಕೊಂಡಿದ್ದಕ್ಕೆ ಯಾರಿಗೂ ನನ್ನ ಬರ್ತ್‌ಡೇಯಿಂದ ಯಾರಿಗೂ ತೊಂದರೆಯಾಗದಿರಲಿ ಎಂಬುವುದೇ ನನ್ನ ಉದ್ದೇಶ” ಎಂದು ಯಶ್ ಸ್ಪಷ್ಟಪಡಿಸಿದರು.

“ದುಡ್ಡು ಸಹಾಯ ಯಾರೂ ಬೇಕಾದರೂ ಮಾಡಬಹುದು. ಮನೆಗೆ ಮಗ ಬರುತ್ತಾನಾ?” ಎಂದು ಕೇಳಿದ ನಟ, “ಮನೆಯಲ್ಲಿ ಮಕ್ಕಳನ್ನು ಕಳಕೊಂಡವರು ಏನ್ ಹೇಳಕ್ಕೆ ಸಾಧ್ಯ. ಅಭಿಮಾನ ತೋರಿಸುವುದಾದರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ. ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ನೀವು ಖುಷಿಯಾಗಿರಿ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇದೆಲ್ಲಾ ಬಿಟ್ಟುಬಿಡಿ ಎಂದು ಯಶ್‌ ಹೇಳಿದರು.

yash in gadag

“ಈಗ ನಾನು ಬರುವಾಗಲೂ ಬೈಕ್​ನಲ್ಲಿ ಚೇಸ್ ಮಾಡ್ತಿದ್ರು, ಇದು ನಿಜಕ್ಕೂ ಬೇಜಾರಾಗುತ್ತೆ. ಕಟೌಟ್ ಕಟ್ಟಬೇಡಿ ಅಂದ್ರೆ ಬೇಜಾರು ಮಾಡಿಕೊಳ್ತೀರಿ. ಈ ರೀತಿ ಆದಾಗ ನಮ್ಮ ಮನಸ್ಸಿಗೆ ನೋವಾಗುತ್ತದೆ” ಎಂದು ಕೆಜಿಎಫ್ ನಟ ಬೇಸರ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X