ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಳಿಕೋಟೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ.
ಕಲಕೇರಿ ಗ್ರಾಮಕ್ಕೆ ಸುತ್ತ ಮುತ್ತಲಿನ ಎಲ್ಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ಬಸವೇಶ್ವರ, ಆದರ್ಶ, ಅಂಜುಮನ್, ಎಸ್‌ಜೆಜೆಪಿಎಸ್ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೇದು ಬರುತ್ತಾರೆ. ಆದರೆ, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಪರದಾಡುವಂತಾಗಿದೆ.
ಈಗಾಗಲೇ ಹಲಗೂರು ಮತ್ತು ಹುಣಶ್ಯಾಳ ಗ್ರಾಮಗಳಿಂದ ಕಲ್ಕೇರಿಗೆ ಬರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿ ಹೆಚ್ಚುವರಿ ಬಸ್ ಒದಗಿಸಿ, ಅಲಗೂರ್ ಹುಣಸಿಹಾಳ ಮಾರ್ಗವಾಗಿ ಬೆಳಿಗ್ಗೆ 9:00ಗಂಟೆಗೆ ಮತ್ತು ಮಧ್ಯಾಹ್ನ 2:00ಗಂಟೆಗೆ ಕಲಕೇರಿ ಇಂದ ಹುಣಸಿಹಾಳ ಅಲಗುರ್ ಮಾರ್ಗವಾಗಿ ಬಸ್ ಸಂಚರಿಸುವ ಕುರಿತು ದಿ.10/08/2023ರಂದು ಮಾತ್ರ ಬಸ್ ವ್ಯವಸ್ಥೆಯಾಗಿತ್ತು.
ಆದರೆ, ಮಧ್ಯಾಹ್ನ ಬಸ್ ಬರದ ಕಾರಣ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಹಾಗಾಗಿ ದಯವಿಟ್ಟ ನಾಳೆ ಅಂದರೆ 09/01/2024ರಿಂದಲೇ ಬೆಳಿಗ್ಗೆ ಮತ್ತು ಮಧ್ಯಾಹ್ನ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆಮಾಡಿಕೊಡಬೇಕು.
ಸಂಜೆ 05:15 ಘಂಟೆಗೆ ವಿಜಯಪುರದಿಂದ ಕಲಕೇರಿಗೆ ಬಂದು ಬೇಕಿನಾಳ್, ಬನ್ನಿಹಟ್ಟೆ, ಫಲಪುರ, ಅಫ್ರಿ ಮಾರ್ಗವಾಗಿ ಹೋಗುವ ಬಸ್ಸು ಇತ್ತೀಚೆಗೆ ರಾತ್ರಿ 7:30-06:00ಗಂಟೆವರೆಗೆ ಬರುತ್ತಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಪರದಾಡುವಂತಾಗಿದೆ ಹಾಗಾಗಿ ದಯವಿಟ್ಟು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ದೇವರಾಹಿಪ್ಪರಗಿ ತಾಲೂಕು ಸಹ ಸಂಚಾಲಕ ಕಾಶೀನಾಥ ತಾಳಿಕೋಟಿ, ಪ್ರಮೋದ ಛಲವಾದಿ, ಅಂಬರೀಶ ದುರ್ಗಮುರ್ಗಿ, ಶಶಿಕಾಂತ ನಡುವಿನಮನಿ, ಆನಂದ ತೋಟದ ಮತ್ತು ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಸ್ಥಿತರಿದ್ದರು. ವ್ಯವಸ್ಥಾಪಕರ ಅನುಪಸ್ಥಿತಿಯಲ್ಲಿ ಸಹ ಸಿಬ್ಬಂದಿ ನಿಂಗನಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.