ಕೋಲಾರದ ಮೆಕ್ಕೆ ಸರ್ಕಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ʼಭಾರತಿʼ ಎಂಬ ಹೆಸರಿನ ಖಾಸಗಿ ಬಸ್ ಹರಿದು ನಾಯಕನಹಳ್ಳಿಯ ರಾಮಕ್ಕ ಎಂಬ ಮಹಿಳೆ ಮೃತಪಟ್ಟಿದ್ದಾರೆ.
ನಗರದ ಖಾಸಗಿ ಬಸ್ ನಿಲ್ಲಾಣದ ಸಮೀಪ ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ವಿಕೋಟದಿಂದ ಚಿಕ್ಕಬಳ್ಳಾಪುರದತ್ತ ಹೊರಟಿದ್ದ ಖಾಸಗಿ ಬಸ್ ಹರಿದ ಪರಿಣಾಮ ಬಂಗಾರಪೇಟೆ ತಾಲೂಕಿನ ನಾಯಕನ ಹಳ್ಳಿಯ ರಾಮಕ್ಕ (58) ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ಜತೆಯಲ್ಲಿಯೇ ಇದ್ದ ಪತಿ ಶ್ರೀನಿವಾಸ(65) ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇವರು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮಕ್ಕ ಹಾಗೂ ಶ್ರೀನಿವಾಸ ದಂಪತಿ ನಗರದ ಹಳೇ ಬಸ್ ನಿಲ್ಲಾಣದ ಸಮೀಪದ ಗಂಗಮ್ಮನ ದೇವಾಲಯಕ್ಕೆ ಹೋಗಲು ಮೆಕ್ಕೆ ಸರ್ಕಲ್ ತಿರುವಿಗೆ ಬರುತ್ತಿದ್ದಂತೆ ಅತಿ ವೇಗವಾಗಿ ಬಂದ ಭಾರತಿ ಖಾಸಗಿ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ; ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು
ಭಾರತಿ ಖಾಸಗಿ ಬಸ್ ಸನಿಹದಲ್ಲೇ ಬರುತ್ತಿದ್ದ ಸರ್ಕಾರಿ ಬಸ್‌ಗೆ ಓವರ್ ಟೇಕ್ ಮಾಡಲು ಹೊರಟಾಗ ಈ ದುರ್ಘಟನೆ ನಡೆಯಿತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮೃತ ಮಹಿಳೆಯ ಮೃತದೇಹವನ್ನು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಚಿತಾಗಾರದಲ್ಲಿ ಇಟ್ಟಿದ್ದಾರೆ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.