ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಅತ್ತೆಯ ಮನೆಯಲ್ಲಿ ಕಳ್ಳತನವಾಗಿದ್ದು, ಈ ಬಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸ್ತೂರಿ ಶೆಟ್ಟಿ ಗುರುಕಿರಣ್ ಅವರ ಅತ್ತೆ. ಇವರು 2023ರ ಡಿಸೆಂಬರ್ 31ರ ಮಧ್ಯಾಹ್ನ ತಮ್ಮ ರೂಮ್ ಬೀರುವಿನಲ್ಲಿ 2.05 ಲಕ್ಷ ಹಣ ಇಟ್ಟಿದ್ದರು. ಆದರೆ, ಜನವರಿ 5ರಂದು ರೂಮ್ ಬೀರುವಿನಲ್ಲಿ ಹಣ ಇಲ್ಲದಿದ್ದನ್ನು ಕಂಡಾಗ ಗಾಬರಿಗೊಂಡು ಸತತ ಎರಡು ದಿನ ಮನೆ ಪೂರ್ತಿ ಹಣ ಹುಡುಕಾಡಿದ್ದಾರೆ.
ಎಷ್ಟು ಹುಡುಕಾಡಿದರೂ ಹಣ ಸಿಗದೇ ಇದ್ದಾಗ ಜನವರಿ 7ರಂದು ಚಂದ್ರಲೇಔಟ್ ಪೊಲೀಸ್ ಠಾಣೆಗೆ ಕಸ್ತೂರಿ ಅವರು ದೂರು ನೀಡಿದ್ದಾರೆ.
ಕಳೆದ ಆರು ತಿಂಗಳಿಂದ ರತ್ನಮ್ಮ ಎಂಬುವರು ಮನೆ ಕೆಲಸಕ್ಕೆ ಬರುತ್ತಿದ್ದಾರೆ. ರೂಮ್ಗೆ ರತ್ನಮ್ಮ ಬಿಟ್ಟು ಬೇರೆ ಯಾರೂ ಕೂಡ ಬಂದಿಲ್ಲ ಮನೆ ಕೆಲಸದಾಕೆ ರತ್ನಮ್ಮಳೇ ಹಣ ಕದ್ದಿರಬಹುದು ಎಂದು ಕಸ್ತೂರಿ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾರು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನ; ಮೂವರ ಬಂಧನ
ಮನೆ ಕೆಲಸದಾಕೆ ಮೇಲೆ ಅನುಮಾನಗೊಂಡು ಕಸ್ತೂರಿ ಶೆಟ್ಟಿ ಅವರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮನೆ ಕೆಲಸದಾಕೆ ರತ್ನಮ್ಮ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.