ಭ್ರೂಣಹತ್ಯೆ ಮಹಾ ಅಪರಾಧ, ಭ್ರೂಣಹತ್ಯೆ ನಿಲ್ಲಿಸಿ ಎಂದು ಸೀಮಂತ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ದಂಪತಿ ಜಾಗೃತಿ ಮೂಡಿಸಿದ್ದಾರೆ.
ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧವಿದ್ದರೂ ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಗರ್ಭಪಾತ ಮಾಡಿಸುತ್ತಿದ್ದ ದೊಡ್ಡ ಜಾಲವೇ ಪತ್ತೆಯಾಗಿತ್ತು. ಈ ದುರುಳರು ಅದೆಷ್ಟೋ ಭ್ರೂಣಗಳನ್ನು ಹತ್ಯೆ ಮಾಡಿದ್ದು, ಇದೀಗ ಕಂಬಿ ಎಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿ ಜಾಗೃತಿ ಮೂಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರಿನಲ್ಲಿ ಅನೈತಿಕ ಪೊಲೀಸ್‌ಗಿರಿ | ಯುವತಿಗೆ ಚಾಕ್ಲೆಟ್ ಕೊಟ್ಟದ್ದಕ್ಕೆ ಯುವಕನ ಮೇಲೆ ಹಲ್ಲೆ: ನಾಲ್ವರ ಬಂಧನ
ನಿಂಗಪ್ಪ ಜಿಗೇರಿ ಅವರ ಪತ್ನಿ ರೇಖಾ ಜೀಗೇರಿ ಅವರು ತಮ್ಮ ಸೀಮಂತ ಕಾರ್ಯಕ್ರಮಕ್ಕೆ ಬಂದ ಸಂಬಂಧಿಗಳಿಗೆ, ಗ್ರಾಮದ ಜನರಿಗೆ ದಂಪತಿ ಭ್ರೂಣಹತ್ಯೆ ಮಹಾ ಅಪರಾಧ, ಭ್ರೂಣಹತ್ಯೆ ನಿಲ್ಲಿಸಿ ಎಂಬ ಪೋಸ್ಟರ್ ಹಿಡಿದು ಜಾಗೃತಿ ಮೂಡಿಸಿದ್ದಾರೆ. ದಂಪತಿಯ ಇಂತಹ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.