ಭ್ರಷ್ಟರ ಮೇಲೆ ಲೋಕಾಯುಕ್ತ ದಾಳಿ; ಕೋಟಿ ಕೋಟಿ ಸಂಪತ್ತು ವಶ, ಇಲ್ಲಿದೆ ಪೂರ್ಣ ವಿವರ

Date:

Advertisements

ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಆರು ಅಧಿಕಾರಿಗಳ ಮೇಲೆ 35 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಶೋಧನಾ ಸಮಯದಲ್ಲಿ ಸಿಕ್ಕ ಅಕ್ರಮ ಆಸ್ತಿ ವಿವರವನ್ನು ಪತ್ರಿಕಾ ಪ್ರಕಟಣೆ ಮೂಲಕ ಲೋಕಾಯುಕ್ತ ಕಚೇರಿ ಹಂಚಿಕೊಂಡಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 06 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಆರು ಪ್ರಕರಣಗಳು ದಾಖಲಾಗಿದ್ದವು.

ಅಧಿಕಾರಿ ಎಂ ಎಲ್ ನಾಗರಾಜ್

Advertisements

ಬೆಸ್ಕಾಂನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ ಎಲ್ ನಾಗರಾಜ್ ಅವರ ಮೇಲೆ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಆರೋಪಿ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು ಏಳು ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದ್ದು, ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 13 ನಿವೇಶನಗಳು, 2 ವಾಸದ ಮನೆಗಳು, ಕೃಷಿ ಜಮೀನು- ಎಲ್ಲ ಸೇರಿ ಒಟ್ಟು ಮೌಲ್ಯ 5.35 ಕೋಟಿ ರೂ. ಆಗಿದೆ.

ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ 6,77,200 ನಗದು, 16,44,000 ರೂ. ಬೆಲೆ ಬಾಳುವ ಚಿನ್ನಾಭರಣಗಳು, 13,50,000 ರೂ. ಬೆಲೆ ಬಾಳುವ ವಾಹನಗಳು, 11,19,206 ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲ ಸೇರಿ ಒಟ್ಟು ಮೌಲ್ಯ 63, 66, 804 ರೂ ಆಗಿದೆ. ಇವರ ಒಟ್ಟು ಆಸ್ತಿ ಮೌಲ್ಯ 6,37,12,926 ಆಗಿದೆ.

ಅಧಿಕಾರಿ ಡಿ ಎಮ್ ಪದ್ಮನಾಭ

ಡಿ ಎಮ್ ಪದ್ಮನಾಭ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಜಿಲ್ಲೆ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ- 1 ಕೈಗಾರಿಕಾ ನಿವೇಶನ, 2 ವಾಸದ ಮನೆಗಳು. 8.18 ಎಕರೆ ಕೃಷಿ ಜಮೀನು ಮತ್ತು ಒಂದು ಫಾರ್ಮ್ ಹೌಸ್. ಎಲ್ಲ ಸೇರಿ ಒಟ್ಟು ಮೌಲ್ಯ 5.35 ಕೋಟಿ ರೂ. ಆಗಿದೆ.

ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ ರೂ. 2,62,500 ನಗದು, ರೂ.17,24,304 ಬೆಲೆಬಾಳುವ ಚಿನ್ನಾಭರಣಗಳು, ರೂ.28,75,000 ಬೆಲೆಬಾಳುವ ವಾಹನಗಳು ಮತ್ತು ರೂ. 15,00,000 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲ ಸೇರಿ ಒಟ್ಟು ಮೌಲ್ಯ 63,66,804. ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೌಲ್ಯ 5,98,66,804 ಆಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಡುದ್ವೇಷದ ಕತ್ತಲ ಯುಗದಲ್ಲಿ ಬೆಳ್ಳಂಬೆಳಕಿನ ತೀರ್ಪು

ಅಧಿಕಾರಿ ಎನ್ ಸತೀಶ್ ಬಾಬು

ಎನ್ ಸತೀಶ್ ಬಾಬು, ಅಧೀಕ್ಷಕ ಅಭಿಯಂತರರು, ಬಿಲ್ಡಿಂಗ್ ಸರ್ಕಲ್, ಲೋಕೋಪಯೋಗಿ ಇಲಾಖೆ, ಕೆ. ಆರ್. ಸರ್ಕಲ್, ಬೆಂಗಳೂರು.

ಆರೋಪಿ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 2 ವಾಸದ ಮನೆಗಳು. 15 ಎಕರೆ ಕೃಷಿ ಜಮೀನು- ಎಲ್ಲ ಸೇರಿ ಒಟ್ಟು ಮೌಲ್ಯ 3,70,20,000 ಆಗಿದೆ.

ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ- ರೂ. 9,00,000 ನಗದು, ರೂ. 64,62,400 ಬೆಲೆಬಾಳುವ ಚಿನ್ನಾಭರಣಗಳು, ರೂ.8,70,000 ಬೆಲೆಬಾಳುವ ವಾಹನಗಳು- ಎಲ್ಲ ಸೇರಿ ಒಟ್ಟು ಮೌಲ್ಯ 82,32,400 ಆಗಿದೆ. ಸ್ಥಿರ ಮತ್ತು ಚರಾಸ್ತಿಯ ಒಟು ಮೌಲ್ಯ- ರೂ. 4,52,52,400 ಆಗಿದೆ.

ಸೈಯದ್ ಮುನೀರ್ ಅಹಮದ್

ಸೈಯದ್ ಮುನೀರ್ ಅಹಮದ್, ಸಹಾಯಕ ಕಾರ್ಯಪಾಲಕ ಅಭಿಯಂತರರು (ಎ.ಇ.ಇ), ಕೆ.ಆರ್.ಐ.ಡಿ.ಎಲ್, ಪ್ರಭಾರ ಇ.ಇ., ಕೆ.ಆರ್.ಐ.ಡಿ.ಎಲ್ ಕಚೇರಿ, ರಾಮನಗರ ಜಿಲ್ಲೆ.

ಆರೋಪಿ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, ಒಟ್ಟು 7 ವಾಸದ ಮನೆಗಳು, ಕೃಷಿ ಜಮೀನು. ಎಲ್ಲ ಸೇರಿ ಒಟ್ಟು ಮೌಲ್ಯ- 4,10,58,968 ಆಗಿದೆ.

ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ- ರೂ. 8,54,600 ನಗದು, ರೂ 73,47,330 ಬೆಲೆಬಾಳುವ ಚಿನ್ನಾಭರಣಗಳು, ರೂ.21,00,000 ಬೆಲೆ ಬಾಳುವ ವಾಹನಗಳು ಹಾಗೂ ರೂ. 35,00,000 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲ ಸೇರಿ ಒಟ್ಟು ಮೌಲ್ಯ 1,38,01,930 ಆಗಿದೆ. ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೌಲ್ಯ 5,48,60,898 ಆಗಿದೆ.

ಅಧಿಕಾರಿ ಹೆಚ್ ಎಸ್ ಸುರೇಶ್

ಕರ್ನಾಟಕ ಲೋಕಾಯುಕ್ತ, ರಾಮನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತವೆ. ಹೆಚ್. ಎಸ್. ಸುರೇಶ್, ಸದಸ್ಯರು, ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ, ತಾವರೆಕೆರೆ ಹೋಬಳಿ,
ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಜಿಲ್ಲೆ.

ಆರೋಪಿ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ- 16 ನಿವೇಶನಗಳು, 1 ವಾಸದ ಮನೆ. 7.6 ಎಕರೆ ಕೃಷಿ ಜಮೀನು. ಎಲ್ಲ ಸೇರಿ ಒಟ್ಟು ಮೌಲ್ಯ ರೂ. 21,27,70,150 ಆಗಿದೆ.

ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ 11,97,610 ಆಗಿದೆ. ರೂ.2,11,26,250 ಬೆಲೆ ಬಾಳುವ ಚಿನ್ನಾಭರಣಗಳು, ರೂ 2,07,25.000 ಬೆಲೆಬಾಳುವ ವಾಹನಗಳು. ಎಲ್ಲ ಸೇರಿ ಒಟ್ಟು ಮೌಲ್ಯ ರೂ.4,30,48,860 ಆಗಿದೆ. ಇವರ ಒಟ್ಟು ಆಸ್ತಿ ಮೌಲ್ಯ ರೂ.25,58,19,010 ಆಗಿದೆ.

ಅಧಿಕಾರಿ ಮಂಜೇಶ್. ಬಿ

ಮಂಜೇಶ್. ಬಿ, ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕರು, ನಗರ ಮತ್ತು ಯೋಜನೆ, ಆನೇಕಲ್ ಯೋಜನಾ ಪ್ರಾಧೀಕಾರ, ಆನೇಕಲ್, ಬೆಂಗಳೂರು ಜಿಲ್ಲೆ.

ಆರೋಪಿ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ 11 ನಿವೇಶನಗಳು, 1 ವಾಸದ ಮನೆ. ಎಲ್ಲ ಸೇರಿ ರೂ. 1,20,00,000 ಆಗಿದೆ.

ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ- ರೂ. 5,07,920 ನಗದು, ರೂ.35,97,000 ಬೆಲೆಬಾಳುವ ಚಿನ್ನಾಭರಣಗಳು, ರೂ. 77,16,000 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ಎಲ್ಲ ಸೇರಿ ಒಟ್ಟು ಮೌಲ್ಯ ರೂ.1,98,20,920 ಆಗಿದ್ದು, ಇವರ ಒಟ್ಟು ಮೌಲ್ಯ ರೂ.3,18,20,920 ಆಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X