ಶಿವಸೇನೆ ಶಾಸಕರ ಅನರ್ಹತೆ ಪ್ರಕರಣದಲ್ಲಿ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಪರವಾಗಿ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನರ್ವೇಕರ್ ತೀರ್ಪು ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ತೀರ್ಪನ್ನು ಪ್ರಕಟಿಸಿದ ಸ್ಪೀಕರ್ ರಾಹುಲ್ ನರ್ವೇಕರ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೆ ನಿಜವಾದ ಶಿವಸೇನೆಯಾಗಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಉಚ್ಚಾಟಿಸಲು ಉದ್ದವ್ ಠಾಕ್ರೆ ಅವರಿಗೆ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.
ಶಿವಸೇ ನಾದ ಎರಡೂ ಬಣಗಳು ಚುನಾವಣಾ ಆಯೋ ಗಕ್ಕೆ ಸಲ್ಲಿಸಿರುವ ತಮ್ಮ ಸಂಘಟನೆಯ ವಿಧಾನದಲ್ಲಿ
ಯಾವುದೇ ಒಮ್ಮತವಿಲ್ಲ. ನಾಯಕತ್ವ ರಚನೆಯ ಬಗ್ಗೆ ಎರಡು ಪಕ್ಷಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂ ದಿವೆ. ಪರಿಗಣಿಸಬೇ ಕಾದ ಏಕೈ ಕ ಅಂ ಶವೆಂ ದರೆ ಶಾಸಕಾಂಗ ಪಕ್ಷದ ಬಹುಮತ ಎಂ ದು ನಾರ್ವೇ ಕರ್ ತೀ ರ್ಪಿ ನಲ್ಲಿ ಹೇಳಿದ್ದಾರೆ.
ಶಾಸಕ ಭರತ್ ಸೇಠ್ ಗೋಗ್‌ವಾಲೆ ಅವರು ನಿಜವಾದ ವಿಪ್ ಅಧಿಕಾರ ಹೊಂದಿದ್ದು, ಉದ್ಧವ್ ಬಣದ ಸುನಿಲ್ ಪ್ರಭು ಅವರಿಗೆ ಸಭೆ ಕರೆಯುವ ಯಾವುದೇ ಅಧಿಕಾರವಿಲ್ಲ ಎಂದು ರಾಹುಲ್ ನರ್ವೇಕರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನ ಅಂಧಾಭಿಮಾನವಾಗದಿರಲಿ; ಬಡವರ ಮಕ್ಕಳು ಬಲಿಯಾಗದಿರಲಿ
ಜೂನ್ 2022ರಲ್ಲಿ ಏಕ್‌ನಾಥ್ ಶಿಂಧೆ ನೇತೃತ್ವದಲ್ಲಿ 35ಕ್ಕೂ ಹೆಚ್ಚು ಶಿವಸೇವೆ ಶಾಸಕರು ಆಗಿನ ಮುಖ್ಯಮಂತ್ರಿಯಾಗಿದ್ದ ಉದ್ದವ್ ಠಾಕ್ರೆ ವಿರುದ್ಧ ಬಂಡೆದ್ದು ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ್ದರು.
ತಮ್ಮದು ನಿಜವಾದ ಶಿವಸೇನೆ ಎಂದು ಘೋಷಿಸಿ 40 ಶಾಸಕರನ್ನು ಅನರ್ಹಗೊಳಿಸಬೇಕೆಂದು ಉದ್ದವ್ ಠಾಕ್ರೆ ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎರಡೂ ಕಡೆಯೂ ಏಕ್‌ನಾಥ್ ಶಿಂಧೆ ಪರ ತೀರ್ಪು ಬಂದಿತ್ತು. ಮೂಲ ಚಿಹ್ನೆಯನ್ನು ಕೂಡ ಏಕ್‌ನಾಥ್ ಬಣಕ್ಕೆ ನೀಡಲಾಗಿತ್ತು.
ಒಟ್ಟು 34 ಅರ್ಜಿಗಳಿಗೆ ಸಂಬಂಧಿಸಿ ಸ್ಪೀಕರ್ 6 ವಿಭಾಗಗಳಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಪ್ರತಿ ಭಾಗವೂ ತಲಾ 200 ಪುಟಗಳನ್ನು ಹೊಂದಿದ್ದು, ಒಟ್ಟು ತೀರ್ಪು 1,200 ಪುಟಗಳನ್ನು ಒಳಗೊಂಡಿದೆ.
ತೀರ್ಪಿನ ವಿರುದ್ಧ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅವಕಾಶವೂ ಎರಡೂ ಕಡೆಯವರಿಗೆ ಇರುತ್ತದೆ. ಈ ಹಿಂದೆಯೇ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲು ಸ್ಪೀಕರ್‌ಗೆ ಜ.10ರ ಗಡುವು ವಿಧಿಸಿತ್ತು.