ಪುರಸಭೆ ಸದಸ್ಯರು ಮತ್ತು ಅವರ ಬೆಂಬಲಿಗರು ಕೋಲು, ದೊಣ್ಣೆಗಳಿಂದ ಹೊಡೆದಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಆ ವೈಷಮ್ಯ ಮುಂದುವರೆದಿತ್ತು. ಇದೀಗ, ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರಕ್ಕೆ ಪುರಸಭೆ ಸದಸ್ಯ ಕೆ.ಸಿ ರಮೇಶ್ ಮತ್ತು ಸುಧಾ ಬಸವರಾಜ್ ಅವರ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.
ಪಟ್ಟಣದ ಗೃಹಮಂಡಳಿ ಲೇಔಟ್ನಲ್ಲಿ ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರಕ್ಕೆ ಗಲಾಟೆ ನಡೆಸಿದೆ. ಗಲಾಟೆಯಲ್ಲಿ ಉಭಯ ಸದಸ್ಯರ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹಮಂಡಳಿ ಲೇಔಟ್ನಲ್ಲಿರುವ ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ. ಸ್ಥಳದಲ್ಲಿ ತಹಶೀಲ್ದಾರ್ ಮತ್ತು ಪುರಸಭೆ ಅಧಿಕಾರಿಗಳು ಇರುವುದನ್ನೂ ಲೆಕ್ಕಿಸದೆ ಹೊಡೆದಾಡಿಕೊಂಡಿದ್ದಾರೆ.
ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಇಬ್ಬರು ಸದಸ್ಯರು ಎದುರಾಗಿ ಗುಂಪುಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಕೆ.ಸಿ.ರಮೇಶ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಪುರಸಭೆಗೆ ಆಯ್ಕೆಯಾಗಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಇದರಿಂದಾಗಿ, ಬಿಜೆಪಿ ಸದಸ್ಯ ದುಧಾ ಬಸವರಾಜ್ ಮತ್ತು ರಮೇಶ್ ಬಡುವೆ ಅಸಮಾಧಾನವಿತ್ತು. ಅದು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗಿದೆ.