ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಇನ್ನುಮುಂದೆ ಖುರಪುಟದ ಸದ್ದು ಕೇಳಿಸಲಿದೆ. ಹೌದು, ವಾರಾಂತ್ಯದಲ್ಲಿ ನಗರದ ಜನತೆಯ ರಕ್ಷಣೆಗೆ ಪೊಲೀಸರು ಗಸ್ತು ತಿರುಗಲು ಕುದುರೆ ಬಳಕೆ ಮಾಡಲು ಯೋಜನೆ ರೂಪಿಸಿದ್ದಾರೆ.
ಕುದುರೆ ಹತ್ತಿದ ಪೊಲೀಸರು ಕಾರ್ಯಪ್ರವೃತ್ತರಾಗಿ ಕಿಡಿಗೇಡಿಗಳ ಮೇಲೆ ಕಣ್ಣಿಡಲು ವಾರಾಂತ್ಯದಲ್ಲಿ ವಿಧಾನಸೌಧ, ಕಬ್ಬನ್ ಪಾರ್ಕ್, ಮೆಜೆಸ್ಟಿಕ್ ಹಾಗೂ ಎಂಜಿ ರಸ್ತೆಯಂತಹ ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದಾರೆ.
Patrolling important crowded places like Vidhana soudha, Cubbon park, Majestic and MG road during weekends to keep an eye on mischievous elements by our horse mounted policemen in action. #BCPHorsePatrol https://t.co/RWXRpR1yUG
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) January 11, 2024
ರಸ್ತೆಗಳಲ್ಲಿ ಅನುಚಿತವಾಗಿ ವರ್ತನೆ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು, ನಗರದ ಜನಸಂದಣಿ ಇರುವ ಸ್ಥಳಗಳಲ್ಲಿ ಪೊಲೀಸ್ ಕಟ್ಟೆಚ್ಚರದಿಂದ ಭದ್ರತೆಯನ್ನು ಖಾತ್ರಿಪಡಿಸಲು ಕುದುರೆ ಸವಾರಿ ಮಾಡಲಿದೆ. ಜನಸಂದಣಿ ಸ್ಥಳಗಳಲ್ಲಿ ಗಸ್ತು ತಿರುಗಲು ಕುದುರೆ ಬಳಸುವ ಚಿಂತನೆ ನಡೆದಿದೆ. ಈ ಮೂಲಕ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಒತ್ತು ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಜ.10ರಂದು 201 ಜನರಿಗೆ ಕೊರೋನಾ ದೃಢ: ಮೈಸೂರು ಜಿಲ್ಲೆಯಲ್ಲಿ ಓರ್ವ ಸಾವು
ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಟ್ವೀಟ್(ಎಕ್ಸ್) ಮಾಡಿದ್ದು, “ನಮ್ಮ ಕುದುರೆ ಹತ್ತಿದ ಪೊಲೀಸರು ಕಾರ್ಯಪ್ರವೃತ್ತರಾಗಿ ಕಿಡಿಗೇಡಿತನ ನಡೆಸುವವರ ಮೇಲೆ ಕಣ್ಣಿಡಲಿದ್ದಾರೆ. ವಾರಾಂತ್ಯದಲ್ಲಿ ವಿಧಾನಸೌಧ, ಕಬ್ಬನ್ ಪಾರ್ಕ್, ಮೆಜೆಸ್ಟಿಕ್ ಹಾಗೂ ಎಂಜಿ ರಸ್ತೆಯಂತಹ ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದಾರೆ. ಕಿಡಿಗೇಡಿತನ ತೋರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.