ಧಾರವಾಡ | ‘ಸದನದಲ್ಲಿ ಎಚ್.ಕೆ ಪಾಟೀಲ್’; ಜ.13ರಂದು ಐದು ಸಂಪುಟಗಳ ಲೋಕಾರ್ಪಣೆ

Date:

Advertisements

ಆರಿಸಿ ಕಳುಹಿಸಿದ ಜನಸಮೂಹದ ಧ್ವನಿಯಾಗಿ ಅವರ ಬೇಕು-ಬೇಡಿಕೆಗಳಿಗೆ ಸ್ಪಂದಿಸಿ ಪಡೆದ ಮತಕ್ಕೆ ಹಿತಾನುಭವ ಅನುಭವಿಸುವವರೇ ನಿಜವಾದ ರಾಜಕಾರಣಿ. ಇಂತಹ ಅಪರೂಪದ ರಾಜಕಾರಣಿಗಳಲ್ಲಿ ಸಚಿವ ಎಚ್ ಕೆ ಪಾಟೀಲರು ಪ್ರಮುಖರು. ಈ ಕಾರಣದಿಂದ ಅವರ ರಾಜಕಾರಣದ ಆರಂಭದ ದಿನದಿಂದ ಈವರೆಗಿನ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿನ ಚರ್ಚೆ, ಮಂಡನೆ, ಭಾಷಣಗಳ ಮತ್ತು ವಿಚಾರ-ವಿಮರ್ಶೆಗಳ 15 ಸಂಪುಟಗಳಲ್ಲಿ ಐದು ಸಂಪುಟಗಳು ಜನವರಿ 13ರಂದು ಬಿಡುಗಡೆಗೊಳ್ಳುತ್ತಿವೆ ಎಂದು ಆಂಧ್ರಪ್ರದೇಶ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ. ತೇಜಸ್ವಿ ವಿ ಕಟ್ಟಿಮನಿ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಟಿ ನಡೆಸಿ ಹೇಳಿರುವ ಇವರು, “ರಾಜಕಾರಣ ಒಂದು ಪವಿತ್ರ ಕಾಯಕ, ಜನಸೇವೆ ಮಾಡುವುದೇ ಒಂದು ಸೌಭಾಗ್ಯ. ಜನರ ಧ್ವನಿಯಾಗಿ ಸದನದ ಗಮನಸೆಳೆದು ಅಭಿವೃದ್ಧಿಪರ ಚಿಂತನೆ ಮಾಡಬೇಕಾದುದು ರಾಜಕಾರಣಿಗಳಲ್ಲಿರಬೇಕಾದ ಬಹು ಮುಖ್ಯ ಗುಣ. ಈ ಸಾಲಿನಲ್ಲಿ ಇಂದು ನಮಗೆ ಕಾಣುವ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ಎಚ್‌ ಕೆ ಪಾಟೀಲ್‌ ಒಬ್ಬ ಉತ್ತಮ ಸಂಸದೀಯ ಪಟು ಎನ್ನುವುದರಲ್ಲಿ ಎರಡು ಮಾತಿಲ್ಲ” ಎಂದರು.

“ಕರ್ನಾಟಕದ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಬೆಳಿಗ್ಗೆ ಕಾರ್ಯಕ್ರಮ ಆರಂಭವಾಗಲಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಫರೀದ್‌ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ” ಎಂದು ತಿಳಿಸಿದರು.

Advertisements

“ಮುಖ್ಯ ಅತಿಥಿಗಳಾಗಿ ವಿಶ್ರಾಂತ ಸಭಾಪತಿಗಳಾದ ಡಾ. ಬಿ ಎಲ್ ಶಂಕರ್, ವಿ ಆರ್ ಸುದರ್ಶನ್, ವೀರಣ್ಣ ಮತ್ತೀಕಟ್ಟಿ ಹಾಗೂ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಆಗಮಿಸಲಿದ್ದಾರೆ. ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್ ಕೆ ಪಾಟೀಲ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ ಬಿ ಗುಡಸಿ ಹಾಗೂ ಕರ್ನಾಟಕ ಕೃಷಿ ವಿವಿಯ ಕುಲಪತಿ ಡಾ.ಪಿ.ಎಲ್. ಪಾಟೀಲ್ ಆಗಮಿಸಲಿದ್ದಾರೆ” ಎಂದರು.

“ಪ್ರಸ್ತುತ ರಾಜಕಾರಣದ ಕಾಲಘಟ್ಟದಲ್ಲಿ ಸಚಿವ ಎಚ್ ಕೆ ಪಾಟೀಲರಂತಹ ಒಬ್ಬ ಮುತ್ಸದ್ಧಿ, ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರು. ಈ ನಿಟ್ಟಿನಲ್ಲಿ ಅವರು ವಿಧಾನ ಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಶಾಸಕರಾಗಿ, ಸಚಿವರಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿನ ಚರ್ಚೆ, ಮಂಡನೆ, ಭಾಷಣಗಳ ಮತ್ತು ವಿಚಾರ ವಿಮರ್ಶೆಗಳನ್ನು ಸಂಪುಟಗಳಲ್ಲಿ ನೀಡಲಾಗುತ್ತಿದೆ. ಈ ಮೂಲಕ ಈ ಸಂಪುಟಗಳು ಮಾರ್ಗದರ್ಶಿಯಾಗಲಿ ಎನ್ನುವ ಉದ್ದೇಶದಿಂದ ಕರ್ನಾಟಕ ಸಂಶೋಧಕರ ಒಕ್ಕೂಟ ಸಂಪುಟಗಳನ್ನು ಪ್ರಕಾಶನ ಮಾಡಿ ಲೋಕಾರ್ಪಣೆಗೆ ಅಣಿ ಮಾಡಿದೆ” ಎಂದರು.

“ಒಂದೆಡೆ ಎಚ್ ಕೆ ಪಾಟೀಲ್ ಅವರಲ್ಲಿನ ವಿವೇಚನೆ, ಯೋಚನೆ, ಯೋಜನೆ ಜೊತೆಗೆ ಅವರಲ್ಲಿನ ದೂರದೃಷ್ಟಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಪ್ರಬುದ್ಧ ರಾಜಕಾರಣಿಯಲ್ಲಿರಬೇಕಾದ ಅಧ್ಯಯನಶೀಲತೆ ಹಾಗೂ ಸೃಜನಶೀಲತೆ ಇವರ ಗುಣಸ್ವಭಾವ. ಯಾವುದೇ ಒಂದು ವಿಷಯ ಮಂಡನೆ ಮಾಡುವಾಗ ಅದರ ಆಳಕ್ಕಿಳಿದು ಅಧ್ಯಯನಮಾಡಿ, ಒಂದು ವೇಳೆ ತಮಗೆ ಗೊತ್ತಿರದ ವಿಷಯವಿದ್ದರೂ ತಜ್ಞರೊಂದಿಗೆ ಚರ್ಚಿಸಿ, ಸಲಹೆ ಪಡೆದುಕೊಳ್ಳುವ ಗುಣ ಸ್ವಭಾವ ಎಚ್‌ ಕೆ ಪಾಟೀಲರದ್ದು. ಈ ಕಾರಣದಿಂದಲೇ ಅವರು ಆಡುವ ಮಾತಿಗೊಂದು ಮೌಲ್ಯವಿದೆ. ತೂಕವಿದೆ ಜೊತೆಗೆ ಮಹತ್ವವೂ ಇದೆ” ಎಂದರು.

“ಸಂಪುಟಗಳಲ್ಲಿಯ ಅವರ ಚರ್ಚೆ, ವಿಚಾರ ವಿವಾದ ವಿಮರ್ಶೆ, ವಿಧೇಯಕಗಳ ಕುರಿತು ಓದಿದವರಿಗೆ ಎಚ್.ಕೆ. ಪಾಟೀಲರಲ್ಲಿನ ಕಾಳಜಿ ಹಾಗೂ ಬದ್ಧತೆ, ವ್ಯಕ್ತಿತ್ವದ ದರ್ಶನವಾಗುತ್ತದೆ. ಈ ಕಾರಣದಿಂದಲೇ ಎಚ್.ಕೆ. ಪಾಟೀಲರ ಭಾಷಣಗಳ ಒಟ್ಟು 16 ಸಂಪುಟಗಳನ್ನು ಸಂಪಾದಿಸಲಾಗಿದ್ದು, ಅದರಲ್ಲಿ ಐದು ಸಂಪುಟಗಳು ಇದೀಗ ಬಿಡುಗಡೆಗೊಳಿಸಲಾಗುತ್ತಿದೆ. ಈ ಸಂಪುಟಗಳು ದಾಖಲೆಯಾಗಿ ಉಳಿಯಬೇಕು, ಯುವಕರಿಗೆ ಮಾರ್ಗದರ್ಶಿಯಾಗಬೇಕು. ಈ ಮೂಲಕ ಒಬ್ಬ ಸೃಜನಶೀಲ ಪ್ರಬುದ್ಧ ರಾಜಕಾರಣಿಯ ವ್ಯಕ್ತಿತ್ವದ ದರ್ಶನ ಪ್ರತಿಯೊಬ್ಬರಿಗೂ ಆಗಬೇಕು ಎನ್ನುವ ಉದ್ದೇಶದಿಂದ ಕರ್ನಾಟಕ ಸಂಶೋಧಕರ ಒಕ್ಕೂಟ ಸಂಪುಟಗಳ ಪ್ರಕಾಶನಕ್ಕೆ ಮುಂದಾಯಿತು.

“ಕೃಷಿ, ನೀರಾವರಿ, ಕಾನೂನು, ಸಹಕಾರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಅಭಿವೃದ್ಧಿಪರ ಕನಸು ಕಾಣುವ ಜೊತೆಗೆ ನನಸಾಗಿಸುವ ನಿಟ್ಟಿನಲ್ಲಿ ಬಹುತೇಕ ಪ್ರಯತ್ನಶೀಲರಾಗಿರುವವರು ಎಚ್.ಕೆ. ಪಾಟೀಲರು. ಪಶ್ಚಿಮ ಪದವಿಧರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಸದನ ಪ್ರವೇಶ ಮಾಡಿದರು. ಪ್ರಬುದ್ಧ ಮತದಾರರ ಕ್ಷೇತ್ರದಿಂದ ಆಯ್ಕೆಯಾದ ಪ್ರಬುದ್ಧ ರಾಜಕೀಯ ಚಿಂತಕ, 1984ರಿಂದ 2008ರವರೆಗೆ 4 ಬಾರಿ ಶಾಸಕರಾಗಿ ಆಯ್ಕೆಯಾದರು. ಸಚಿವರಾಗಿ, ಸಭಾನಾಯಕರಾಗಿ, ವಿರೋಧ ಪಕ್ಷದ ನಾಯಕರಾಗಿ ನಿರ್ವಹಿಸಿದ ಕಾರ್ಯ ಮಾದರಿಯಾಗಿದೆ. ಕಾಲು ಶತಮಾನಗಳ ಕಾಲ ಮೇಲ್ಮನೆಯ ಘನತೆಗೆ ಎಂದು ಚ್ಯುತಿ ಬಾರದಂತೆ ಸದನದ ಕಾರ್ಯವಿಧಾನದ ಚೌಕಟ್ಟಿಗೆ ಒಳಪಟ್ಟು ಕಾರ್ಯನಿರ್ವಹಿಸಿದ್ದಾರೆ” ಎಂದು ಹೇಳಿದರು.

“ಜವಳಿ, ಬೃಹತ್ ನಿರಾವರಿ, ಕಾನೂನು ಮತ್ತು ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸೇರಿದಂತೆ ಮುಂತಾದ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ಮೇಲ್ಮನೆಯಲ್ಲಿ ಸಭಾನಾಯಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ ಸಂಸ್ಥೆಗಳು ಇವರ ದೂರದೃಷ್ಟಿಗೆ ಸಾಕ್ಷಿಯಾಗಿವೆ. ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ಆಯೋಗ, ಕರ್ನಾಟಕ ಮಾನವ ಹಕ್ಕುಗಳ ಆಯೋಗ ಮತ್ತು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯಂತಹ ಉತ್ತಮ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದವರು” ಎಂದು ಹೇಳಿದರು.

“ಕರ್ನಾಟಕದ ಕಾನೂನುಗಳನ್ನು ಸಂಪುಟಗಳಲ್ಲಿ ಸಮಗ್ರವಾಗಿ ಪ್ರಕಟಿಸಿ ಇತಿಹಾಸ ಸೃಷ್ಠಿಸಿದವರು. ಧಾರವಾಡ ಹಾಗೂ ಕಲಬುರಗಿಯಲ್ಲಿ ಉಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಲ್ಲಿ ಇವರದ್ದು ಅಪಾರ ಕೊಡುಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ, ರಾಜ್ಯದಲ್ಲಿ ನೂತನ ಗ್ರಾಮ ಪಂಚಾಯತಿಗಳ ಸೃಜನೆ, ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಇತ್ಯಾದಿಗಳು ಎಚ್ ಕೆ ಪಾಟೀಲರ ಬಹುಮುಖ್ಯ ಕೊಡುಗೆಗಳು” ಎಂದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ಒಂದೇ ವರ್ಷದಲ್ಲಿ 800 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲು; ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ

“ಹುಲಕೋಟಿ ಎಂಬ ಗ್ರಾಮದಿಂದ ರಾಷ್ಟ್ರದ ರಾಜಧಾನಿ ದಿಲ್ಲಿಯವರೆಗೆ ಸಹಕಾರಿ ಹೆಜ್ಜೆಗಳನ್ನು ಮೂಡಿಸಿ ಶ್ರೇಷ್ಠ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಎಚ್ ಕೆ ಪಾಟೀಲರು ನಮ್ಮ ಕಣ್ಮುಂದಿನ ಹೆಮ್ಮೆಯ ಸಾಧಕರು. ಅವರು ಮೇಲ್ಮನೆಯಲ್ಲಿ ಮಾತನಾಡುತ್ತಿದ್ದ ವೈಖರಿ ಹಾಗೂ ಸಚಿವರಾಗಿದ್ದ ಸಂದರ್ಭದಲ್ಲಿ ಕೆಳಮನೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಎಂತಹವರಿಗೂ ಆದರ್ಶನೀಯ. ಇವರ ಈ ಭಾಷಣಗಳ ಸಂಪುಟಗಳು ಅಧ್ಯಯನಕಾರರಿಗೆ, ಶಾಸಕರಿಗೆ, ಆಸಕ್ತರಿಗೆ, ಸಂಶೋಧಕರಿಗೆ, ಅಭಿಮಾನಿಗಳಿಗೆ ದಾರಿದೀಪವಾಗಬಲ್ಲವು” ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಸಂಶೋಧಕರ ಒಕ್ಕೂಟ ಅಧ್ಯಕ್ಷ ಕಾ ತ ಚಿಕ್ಕಣ್ಣ, ಪತ್ರಕರ್ತ ನೂರಅಹ್ಮದ್ ಅ. ಮಕಾನದಾರ, ಸಂಪುಟಗಳ ಸಂಪಾದಕ ಡಾ. ರೇವಯ್ಯ ಒಡೆಯರ್ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X