ಸಂಕ್ರಾಂತಿ ಹಬ್ಬದ ಹಿನ್ನೆಲೆ, ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವ ಜನರಿಗೆ ಅನುಕೂಲವಾಗಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೆಚ್ಚುವರಿಯಾಗಿ 400 ಬಸ್‌ಗಳ ವ್ಯವಸ್ಥೆ ಮಾಡಿದೆ ಎಂದು ತಿಳಿದುಬಂದಿದೆ.
ಹಬ್ಬದ ಹಿನ್ನೆಲೆ, ಸಂಭ್ರಮಾಚರಣೆ ಮಾಡಲು ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಜನ ಕಾಯುತ್ತಿದ್ದಾರೆ. ಅಲ್ಲದೇ ಕೆಲವು ಊರುಗಳಿಗೆ ತೆರಳುವ ಬಸ್‌ಗಳು ಕೂಡ ತುಂಬಿದ್ದು, ಜನರು ಆರಾಮವಾಗಿ ಪ್ರಯಾಣ ಬೆಳೆಸಲು ತೊಂದರೆ ಉಂಟಾಗಿದೆ.
ಕೆಎಸ್‌ಆರ್‌ಟಿಸಿ ಶಿವಮೊಗ್ಗ, ಬೆಂಗಳೂರು, ಉಡುಪಿ, ಬಳ್ಳಾರಿ, ಬೆಳಗಾವಿ ಕಡೆಗೆ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದು, ಬಸ್ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ಬಸ್‌ಗಳ ದುಪ್ಪಟ್ಟು ದರ
ಹಬ್ಬ-ಹರಿದಿನ ಹಾಗೂ ರಜಾ ದಿನಗಳನ್ನು ಬಂಡವಾಳ ಮಾಡಿಕೊಂಡ ಖಾಸಗಿ ಬಸ್‌ಗಳು ದುಪ್ಪಟ್ಟು ದರ ನಿಗದಿ ಮಾಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ.
ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಜನವರಿ 15ರಂದು ರಜೆ ಇದೆ. ಜನವರಿ 14 ರಂದು ರವಿವಾರ ರಜೆಯಿದೆ. ಇನ್ನು ಜನವರಿ 13ರಂದು ತಾರೀಕು ಎರಡನೇ ಶನಿವಾರದ ಹಿನ್ನೆಲೆ ರಜೆಯಿದೆ. ಮೂರು ದಿನ ರಜೆ ಸಿಕ್ಕ ಹಿನ್ನೆಲೆ, ಜನರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.
ಆದರೆ, ಖಾಸಗಿ ಬಸ್‌ಗಳ ದರ ದುಪ್ಪಟ್ಟಿದ್ದು, ಇದರಿಂದ ಜನರು ಪರದಾಡುವಂತಾಗಿದೆ. ಸಾಮಾನ್ಯ ದಿನಗಳಲ್ಲಿ ₹400 ರಿಂದ ₹700 ವರೆಗೂ ಇರುವ ಖಾಸಗಿ ಬಸ್ ಟಿಕೆಟ್ ದರ ಹಬ್ಬ ಹರಿದಿನ ಅಥವಾ ರಜಾದಿನ ಬಂದರೆ ₹1500 ರಿಂದ ₹3000ವರೆಗೂ ದರ ಇದೆ.
ಈ ಸುದ್ದಿ ಓದಿದ್ದೀರಾ? ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕಿ ಪ್ರಭಾ ಅತ್ರೆ ನಿಧನ
ಬೆಂಗಳೂರು-ಶಿವಮೊಗ್ಗ ಖಾಸಗಿ ಬಸ್ ದರ ₹1,000-₹1,250 ಇದೆ. ಬೆಂಗಳೂರು-ಹುಬ್ಬಳಿ ₹1,700-₹2,500, ಬೆಂಗಳೂರು-ಮಂಗಳೂರು ₹1,300-₹2,000, ಬೆಂಗಳೂರು-ಕಲಬುರುಗಿ ₹1,600-₹2200, ಬೆಂಗಳೂರು-ಮಡಿಕೇರಿ ₹1,150-₹1,600, ಬೆಂಗಳೂರು-ಧಾರವಾಡ ₹1,200-₹1,550, ಬೆಂಗಳೂರು-ಬೆಳಗಾವಿ ₹1,300-₹1,800, ಬೆಂಗಳೂರು–ಚಿಕ್ಕಮಗಳೂರು ₹1,100-₹1,300, ಬೆಂಗಳೂರು–ಬೀದರ್ ₹1,600-₹2,000 ದರ ಇದೆ.