ವಿಜಯಪುರ ನಗರದ ಕೆಸಿಪಿ ಕಾಲೇಜು ಸಮೀಪದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿವೇಕಾನಂದ ಜಯಂತಿ ಆಚರಿಸಿತು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, “ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ ಕರೆ ಸರ್ವ ಕಾಲಕ್ಕೂ ಉತ್ತೇಜಕ ಶಕ್ತಿಯಾಗಿದೆ. ಒಳ್ಳೆಯ ಕೆಲಸಗಳನ್ನು ಮಾಡಲು ಯುವಕರನ್ನು ಬಡಿದೆಚ್ಚರಿಸುವ ವಾಕ್ಯವಾಗಿದೆ. ಅವರಿಂದ ಸದಾಕಾಲ ಸ್ಫೂರ್ತಿ ಪಡೆಯಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ ಬೋರಗಿ, ಅಮಿತ್ ಕಾಂಬಳೆ, ಶಿವಾನಂದ ಮೂಡಲಗಿ ಶಿವಕುಮಾರ ಮೋರೆ, ಚೇತನಕುಮಾರ, ಅರುಣ ರೂಗಿ, ಪ್ರಶಾಂತ ತೊರವಿ, ಪವನಕುಮಾರ ಮೇಲಿನಕೇರಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್. ಡಿ.ಮನಗೂಳಿ, ಶ್ರೀಧರ ರತ್ನಾಕರ ಉಪಸ್ಥಿತರಿದ್ದರು.