ಮೈಸೂರು | ಹಲವು ಧರ್ಮಗಳ ಜನರಿಂದ ಸೌಹಾರ್ದ ಸಂಕ್ರಾಂತಿ ಆಚರಣೆ

Date:

Advertisements

ರಾಜಕೀಯ ಕಾರಣಗಳಿಗಾಗಿ ಜನರು ಧಾರ್ಮಿಕ ಮತ್ತು ಜಾತಿ ಆಧಾರದ ಮೇಲೆ ವಿಭಜಿತರಾಗಿದ್ದಾರೆ. ಸಮಾಜವನ್ನು ಒಗ್ಗೂಡಿಸಲು ಎಲ್ಲ ಧರ್ಮಗಳ ಜನರನ್ನು ಒಳಗೊಳ್ಳುವ ಮೂಲಕ ಎಲ್ಲ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುವ ಅಗತ್ಯವಿದೆ ಎಂದು ರಂಗಕರ್ಮಿ ಸಿ ಬಸವಲಿಂಗಯ್ಯ ಒತ್ತಿ ಹೇಳಿದರು.

ಮೈಸೂರಿನ ಉದಯಗಿರಿ ವೃತ್ತದಲ್ಲಿ ಸೌಹಾರ್ದ ಕರ್ನಾಟಕ ವೇದಿಕೆ ಸಮಾಜದಲ್ಲಿ ಸಾಮರಸ್ಯವನ್ನು ಉತ್ತೇಜಿಸಲು ಹಮ್ಮಿಕೊಂಡಿದ್ದ ಸೌಹಾರ್ದ ಸಂಕ್ರಾಂತಿ ಹಬ್ಬದಲ್ಲಿ ಮಾತನಾಡಿದರು.

“ಹಲವು ಧರ್ಮಗಳ ಜನರು ಅನಾದಿ ಕಾಲದಿಂದಲೂ ಸಾಮರಸ್ಯದಿಂದ ಬದುಕುತ್ತಿದ್ದರು. ಹಬ್ಬಗಳನ್ನು ಒಟ್ಟಿಗೇ ಆಚರಿಸುತ್ತಿದ್ದರು. ಈಗ ಅಂತಹ ಅಭ್ಯಾಸವನ್ನು ನಿಲ್ಲಿಸಲಾಗಿದೆ. ರಾಷ್ಟ್ರದ ಏಕತೆಗಾಗಿ ಅಂತಹ ಸೌಹಾರ್ದವನ್ನು ಪುನರಾರಂಭಿಸುವ ಅಗತ್ಯವಿದೆ” ಎಂದು ಹೇಳಿದರು.

Advertisements

“ಸಮಾಜವು ಧಾರ್ಮಿಕ ಪಕ್ಷಗಳನ್ನು ಮೀರಿ ಹಬ್ಬಗಳನ್ನು ಆಚರಿಸಬೇಕು” ಎಂದು ಮಾಜಿ ಉಪಕುಲಪತಿ ಮತ್ತು ಲೇಖಕಿ ಸಬಿಹಾ ಭೂಮಿಗೌಡ ಹೇಳಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ ಸೀಮೆಯ ಮಕರ ಸಂಕ್ರಾಂತಿ ಆಚರಣೆ

ಈ ವೇಳೆ ಹಲವು ಧರ್ಮಗಳ ಜನರು ಸಂಭ್ರಮದಿಂದ ಮಕರ ಸಂಕ್ರಾಂತಿ ಆಚರಿಸಿದರು. ಭಾಗವಹಿಸಿದವರು ಶುಭಾಶಷಯ ತಿಳಿಸಿ, ‘ಎಳ್ಳು-ಬೆಲ್ಲ’ (ಎಳ್ಳು ಮತ್ತು ಬೆಲ್ಲ) ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹೋರಾಟಗಾರ ರತಿರಾವ್, ನೂರ್ ಮರ್ಚೆಂಟ್, ಕೆ ಎಸ್ ಶಿವರಾಮು, ಸೌಹಾರ್ದ ಕರ್ನಾಟಕ ಮೈಸೂರು ಅಧ್ಯಕ್ಷ ಜಗದೀಶ್ ಸೂರ್ಯ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X