ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಖಂಡಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಶಿವಮೊಗ್ಗದ ಕಾಂಗ್ರೆಸ್ ಭವನದಿಂದ ಮಹಾವೀರ ವೃತ್ತವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾವೀರ ವೃತ್ತದಲ್ಲಿ ಅನಂತಕುಮಾರ್ ಹೆಗಡೆ ಪ್ರತಿಕೃತಿ ದಹಿಸುವಮೂಲಕ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಬಿಜೆಪಿಯವರು ಎಲೆಕ್ಷನ್ ಸನಿಹ ಇದ್ದಾಗ ಮಾನಸಿಕ ಸ್ತೀಮಿತ ಕಳೆದುಕೊಳ್ಳುತ್ತಾರೆ. ಹಾಗೇ ಸಂಸದ ಅನಂತಕುಮಾರ್, 4ವರ್ಷಗಳಿಂದ ಇಲ್ಲದವರು ಇವಾಗ ಮುಖ್ಯಮಂತ್ರಿಗಳ ವಿರುದ್ಧ ಏಕವಚನದಲ್ಲಿ ಅವಹೇಳನಕರಿಯಾಗಿ ಮಾತನಾಡಿದ್ದಾರೆ. ಇವರನ್ನು ಬಂಧಿಸಬೇಕು ಎಂದರು.
ಸಂಸದ ಅನಂತ ಕುಮಾರ್ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಏಕ ವಚನ ಬಳಸಿ ಗೊಂದಲ ಸೃಷ್ಠಿಸಲು ಯತ್ನಿಸಿದ್ದಾರೆ. ಕೋಮು ಗಲಭೆ ಸೃಷ್ಠಿಸಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ ಎಂದು ದೂರಿದ ಅವರು, ನಾವೆಲ್ಲರೂ ರಾಮನ ಭಕ್ತರು. ಬಿಜೆಪಿ ರೀತಿ ಡೋಂಗಿ ಭಕ್ತರಲ್ಲ ಎಂದು ಗರಂ ಆದರು.
ನಾವೆಲ್ಲರೂ ರಾಮನ ಪೂಜಿಸುತ್ತೇವೆ. ಬಿಜೆಪಿಯವರು ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡೋದು ಬಿಡಬೇಕು ಮತ್ತು ರಾಜೀವ್ ಗಾಂಧಿ ಕಾಲದಲ್ಲಿ ಅಯೋಧ್ಯ ರಾಮ ಮಂದಿರ ತೆರೆಸಿದ್ದು ಕಾಂಗ್ರೆಸ್ ಪಕ್ಷ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಾಕ್ತರರಾದ ರಮೇಶ್ ಹೆಗಡೆ, ಕಲೀಮ್ ಪಾಶ, ಸೌಗಂಧಿಕಾ ರಘುನಾಥ್, ಚೇತನ್, ರಮೇಶ್, ಚಂದ್ರಭೂಪಲ, ಕಾಶಿ ವಿಶ್ವನಾಥ್, ಕೆ.ರಂಗನಾಥ್, ಗಿರೀಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.