ರಾಯಚೂರು ಜಿಲ್ಲೆ ಯಕ್ಲಾಸಪೂರು ಸೀಮಾಂತರದ 2ಎಕರೆ 7 ಗುಂಟೆ ಜಮೀನನ್ನು ಪರಿಶಿಷ್ಟ ಜಾತಿ ಮಾದಿಗ ಜನಾಂಗದ ಸ್ಮಶಾನ ಉಪಯೋಗಕ್ಕಾಗಿ ನೀಡುವಂತೆ ಒತ್ತಾಯಿಸಿ ಮಾದಿಗ ದಂಡೋರ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಗಾಯರಾಣ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿಡುವಂತೆ ಹಲವಾರು ಭಾರೀ ಮನವಿ ಸಲ್ಲಿಸಿದರೂ ಯಾರೂ ಸ್ಪಂಧಿಸಿಲ್ಲ. ಈಗಿರುವ ಸ್ಮಶಾನ ಭೂಮಿ ಕೇವಲ ಒಂದು ಎಕರೆ 30ಗುಂಟೆ ಇದೆ. ಸಿಯಾತಲಾಬ್, ಯಕ್ಲಾಸಪೂರು, ಕುಲಸುಂಬಿ ಕಾಲೋನಿ, ಡ್ಯಾಡಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ ಸೇರಿದಂತೆ ಸುಮಾರು 25ಸಾವಿರ ಜನಸಂಖ್ಯೆಗೆ ಒಂದೇ ಸ್ಮಶಾನ ಭೂಮಿ ಇದೆ. ಸರ್ವೆ ನಂ.73/2ರಲ್ಲಿ ಮಾದಿಗ ಸಮುದಾಯಕ್ಕೆ ಸರ್ವೆ ನಂ.73/2ರಲ್ಲಿರುವ 7ಎಕರೆ 24ಗುಂಟೆ ಪೈಕಿ, 2ಎಕರೆ 7ಗುಂಟೆ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹೇಮರಾಜ ಅಸ್ಕಿಹಾಳ, ಜಿಲ್ಲಾಧ್ಯಕ್ಷ ಜಿ.ನರಸಿಂಹಲು ಮರ್ಚೆಟ್ಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉರುಕುಂದಿ ಸಿಯಾತಲಾಬ್, ನರಸಿಂಹಲು ಪೋತಗಲ್, ಉರುಕುಂದಪ್ಪ ಜಗ್ಲಿ, ಪ್ರಭುರಾಜ ಮರ್ಚೆಟ್ಹಾಳ, ತಾಯಣ್ಣ ಗಧಾರ, ನರಸಿಂಹಲು ಪೋತಗಲ್, ಲಕ್ಷ್ಮಣ್ ಕಲ್ಲೂರು ಸೇರಿದಂತೆ ಅನೇಕರಿದ್ದರು.