ವಿಜಯಪುರ | ಕೈಗಾರಿಕೆ ಸ್ಥಾಪನೆಗೆ ಬಿ.ಎಲ್. ಅಗ್ರೋ, ಲೂಲೂ ಸಂಸ್ಥೆಗಳ ಒಪ್ಪಿಗೆ

Date:

Advertisements

ಆಹಾರ ಸಂಸ್ಕರಣಾ ಕಂಪನಿಗಳಾದ ಬಿ.ಎಲ್. ಅಗ್ರೋ, ಲೂಲೂ ಸಂಸ್ಥೆಗಳು ವಿಜಯಪುರದಲ್ಲಿ ತಮ್ಮ ಉದ್ಯಮ ವಲಯವನ್ನು ಸ್ಥಾಪಿಸಲು ಒಪ್ಪಿಗೆ ನೀಡಿವೆ ಎಂದು ವರದಿಯಾಗಿದೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಇಕೋನಾಮಿಕ್ ಫೋರಂನಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಭಾಗವಹಿಸಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಅವರು ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಕುರಿತು ಅನೇಕ ದಿಗ್ಗಜ ಉದ್ಯಮಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಈ ಎರಡು ಕಂಪನಿಗಳು ವಿಜಯಪುರದಲ್ಲಿ ಕೈಗಾರಿಕೆ ಸ್ಥಾಪನೆಗೆ ಒಪ್ಪಿಗೆ ನೀಡಿವೆ.

ಸ್ವೀಟ್ಜರಲೆಂಡ್‌ನ ದಾವೋಸನಿಂದ ಈ ಸುದ್ದಿಯನ್ನು ಸಚಿವ ಡಾ.ಎಂ.ಬಿ. ಪಾಟೀಲ ಹಂಚಿಕೊಂಡಿದ್ದು, ವಿಶ್ವ ಆರ್ಥಿಕ ವೇದಿಕೆ 2024ರಲ್ಲಿ ಲುಲು ಗ್ರೂಪ್ ಮತ್ತು ಬಿ.ಎಲ್. ಆಗ್ರೋ ಕಂಪನಿಗಳು ಆಹಾರ ಸಂಸ್ಕರಣೆ ವಲಯದಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಳ್ಳಲು ಸನ್ನದ್ಧವಾಗಿವೆ, ಉತ್ತರ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿರುವ ಬಿ.ಎಲ್. ಆಗ್ರೋ ಕಂಪೆನಿ ಇದೇ ಪ್ರಥಮವಾಗಿ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದು, ವಿಜಯಪುರವನ್ನೇ ಆಯ್ಕೆಮಾಡಿಕೊಂಡಿರುವುದು ಹೊಸ ಆಶಾಭಾವ ಮೂಡಿಸಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Advertisements

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಕಾರ್ಯಗತವಾಗುತ್ತಿವೆ. ಇದರ ಜೊತೆಗೆ ಕೈಗಾರಿಕೆಗಳು ಸ್ಥಾಪನೆಯಾದರೆ ಉದ್ಯೋಗ ಸೃಷ್ಟಿ, ಆರ್ಥಿಕತೆ ವೃದ್ಧಿಯಾಗಲು ಸಾಧ್ಯ, ಹೀಗಾಗಿ ಜನತೆಯ ಆಶಾಭಾವನೆ ಕೂಡಾ ಇತ್ತು, ಈಗ ಉದ್ಯಮಿಗಳು ವಿಜಯಪುರವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಡಾ.ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಡಾ.ಎಂ.ಬಿ. ಪಾಟೀಲರು ಕೈಗಾರಿಕಾ ಸಚಿವರಾದ ದಿನವೇ ಕೈಗಾರಿಕೆಯ ನಿರೀಕ್ಷೆಯನ್ನು ಹೊತ್ತಿದ್ದ ಜನರಿಗೆ ಕೊನೆಗೂ ಸಿಹಿ ಸುದ್ದಿ ದೊರಕಿದಂತಾಗಿದೆ. ಈ ಎರಡು ಪ್ರತಿಷ್ಠಿತ ಕಂಪನಿಗಳು ವಿಜಯಪುರಕ್ಕೆ ಕಾಲಿಟ್ಟರೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗಗಳು ಸೃಷ್ಟಿಯ ಆಶಾಭಾವನೆ ಮೂಡಿದೆ.

ವಿದೇಶದಲ್ಲಿ ದಿಗ್ಗಜ ಉದ್ಯಮಿಗಳ ಮನವೊಲಿಸಿ ಆಹಾರ ಸಂಸ್ಕರಣಾ ಕ್ಷೇತ್ರದ ಉದ್ಯಮಗಳನ್ನು ವಿಜಯಪುರಕ್ಕೆ ತರುವಲ್ಲಿ ಯಶಸ್ವಿಯಾಗಿರುವುದು ಪ್ರತಿಯೊಬ್ಬರು ಸಂತಸಪಡುವಂತಾಗಿದೆ. ಈ ಎರಡು ಕಂಪನಿಗಳು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಿದರೆ ನಮ್ಮಂತಹ ಅನೇಕರಿಗೆ ಉದ್ಯೋಗ ದೊರಕಲಿದೆ ಎಂದು ಉದ್ಯೋಗಾಕಾಂಕ್ಷಿ ಮೊಹ್ಮದ ಐಕಾಮ್ ಕರಜಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಉಪಯೋಗ ಹೇಗೆ

  • ವಿಜಯಪುರದಲ್ಲಿ ದ್ರಾಕ್ಷಿ ಸಹಿತ ಹಲವಾರು ಆಹಾರೋತ್ಪನ್ನಗಳನ್ನು ಬೆಳೆಯಲಾಗುತ್ತದೆ. ಇದರಿಂದ ಇಲ್ಲಿಯೇ ಸಂಸ್ಕರಣೆಗೆ ನೆರವಾಗಲಿದೆ. ದ್ರಾಕ್ಷಿಯಂತೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದ ವೈನ್‌ ಸಹಿತ ಇತರೆ ಘಟಕಗಳೂ ಹೆಚ್ಚಬಹುದು.
  • ವಿಜಯಪುರದ ಭಾಗದಲ್ಲಿ ದಾಳಿಂಬೆಯೂ ಜನಪ್ರಿಯ. ಇದನ್ನೂ ಸಂಸ್ಕರಣೆ ಮಾಡಲು ಸಹಕಾರಿಯಾಗಲಿದೆ.
  • ವಿಜಯಪುರದ ಇಂಡಿ ಲಿಂಬೆ ಕೂಡ ಜಿಐ ಮಾನ್ಯತೆ ಪಡೆದ ಸ್ಥಳೀಯ ರುಚಿಕರ ಬೆಳೆ. ಇದರ ಸಂಸ್ಕರಣೆಗೂ ಅವಕಾಶವಿದೆ.
  • ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಭಾಗದಲ್ಲಿ ಬೆಳೆಯುವ ಹಲವಾರು ಉತ್ಪನ್ನಗಳ ಸಂಸ್ಕರಣೆಯನ್ನೂ ಇಲ್ಲಿಯೇ ಮಾಡಬಹುದು.
  • ಹತ್ತಿಯನ್ನೂ ಇಲ್ಲಿ ಬೆಳೆಯುವುದರಿಂದ ಸಿದ್ದ ಉಡುಪು ಉತ್ಪನ್ನ ಘಟಕಗಳಿಗೂ ಮುಂದೆ ದಾರಿಯಾಗಲಿದೆ.
  • ವಿಜಯಪುರ ಶೇಂಗಾ ಬೆಳೆಗೂ ಖ್ಯಾತಿ ಪಡೆದಿದೆ. ಇಲ್ಲಿ ಬೆಳೆದ ಶೆಂಗಾ ರುಚಿಕರ. ಅದರ ಉಪ ಉತ್ಪನ್ನಗಳ ಘಟಕಗಳನ್ನೂ ಹೆಚ್ಚಿಸಬಹುದು.
  • ಈಗಾಗಲೇ ಹೆಚ್ಚಿನ ನೀರಾವರಿ ಪ್ರದೇಶ ರೂಪುಗೊಂಡ ನಂತರ ವಿಜಯಪುರ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಹಿಗ್ಗಿದೆ. ಇಲ್ಲಿ ಆಗ್ರೋ ಚಟುವಟಿಕೆಗಳು ಹಿಗ್ಗಲಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X