ಕೆಲದಿನಗಳ ಹಿಂದೆ ವಿಮಾನ ಪ್ರಯಾಣ ವಿಳಂಬವಾಯಿತೆಂದು ಆಕ್ರೋಶಗೊಂಡ ಪ್ರಯಾಣಿಕನೋರ್ವ ಇಂಡಿಗೋ ವಿಮಾನದ ಪೈಲಟ್ ಮೇಲೆ ಹಲ್ಲೆ ನಡೆಸಿದ ಘಟನೆ ಮಾಸುವ ಮುನ್ನವೇ, ರೈಲ್ವೆ ಪ್ರಯಾಣಿಕನೋರ್ವನಿಗೆ ಮನಬಂದಂತೆ ಟಿಕೆಟ್ ಪರಿಶೀಲನಾ ಅಧಿಕಾರಿ(ಟಿಟಿಇ)ಯೋರ್ವ ಹಲ್ಲೆಗೈದ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ರೈಲ್ವೆ ಗಾಡಿ ಸಂಖ್ಯೆ 15203 ಬರೌನಿ-ಲಕ್ನೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ರಾಜೇಶ್ ಸಾಹು ಎಂಬ ನೆಟ್ಟಿಗ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
वीडियो आज का है। बरौनी-लखनऊ एक्सप्रेस (15203) में टीटी इस तरह से पिटाई कर रहा।
रेल मंत्री @AshwiniVaishnaw जी, बताएं कि क्या इन लोगों को ऐसे पीटने की आजादी है? क्या टीटी के नाम पर गुंडे रखे गए हैं? ये सिस्टम में क्यों है?
वीडियो साफ है, कार्रवाई कीजिए। और हां, जनता को… pic.twitter.com/Cl5XYxl3GC
— Rajesh Sahu (@askrajeshsahu) January 18, 2024
ವಿಡಿಯೋದಲ್ಲಿ ಪ್ರಯಾಣಿಕನಿಗೆ ಮಾತ್ರವಲ್ಲದೇ, ಹಲ್ಲೆ ಮಾಡುತ್ತಿದ್ದ ಬಗ್ಗೆ ವಿಡಿಯೋ ಮಾಡುತ್ತಿದ್ದವನಿಗೂ ಹಲ್ಲೆಗೆ ಯತ್ನಿಸಿರುವುದು ದಾಖಲಾಗಿದೆ.
ವಿಡಿಯೋ ಹಂಚಿಕೊಂಡು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆಗೆ ಟ್ಯಾಗ್ ಮಾಡಿರುವ ರಾಜೇಶ್ ಸಾಹು, “ಪ್ರಯಾಣಿಕರ ಮೇಲೆ ಟಿಟಿಇಯವರಿಗೆ ಹೀಗೆ ಹೊಡೆಯುವ ಸ್ವಾತಂತ್ರ್ಯವಿದೆಯೇ? ಗೂಂಡಾಗಳಿಗೆ ಟಿಟಿ ಎಂಬ ಹೆಸರಿದೆಯೇ? ಇಂತಹ ವ್ಯವಸ್ಥೆಯಲ್ಲಿ ಇಂಥವರು ಯಾಕಿದ್ದಾರೆ?” ಎಂದು ಪ್ರಶ್ನಿಸಿದ್ದು, ”ವಿಡಿಯೋದಲ್ಲಿ ಸ್ಪಷ್ಟವಾದ ದಾಖಲೆ ಇದೆ. ಕ್ರಮ ಕೈಗೊಳ್ಳಿ. ಜನರನ್ನು ಕೀಟಗಳೆಂದು ಪರಿಗಣಿಸುವುದನ್ನು ನಿಲ್ಲಿಸಿ” ಎಂದು ಆಗ್ರಹಿಸಿದ್ದಾರೆ.
ಈ ವಿಡಿಯೋ ಈಗ ವೈರಲಾಗಿದ್ದು, ಟಿಟಿಇಯನ್ನು ಸೇವೆಯಿಂದಲೇ ವಜಾಗೊಳಿಸಿ ಎಂಬ ಆಗ್ರಹ ಕೇಳಿಬಂದಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿಗಳು, “ಪ್ರಯಾಣಿಕನ ಮೇಲೆ ಟಿಟಿಇ ಹಲ್ಲೆಗೈದಿರುವ ಘಟನೆಯ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ತಪ್ಪಿತಸ್ಥ ಅಧಿಕಾರಿಯನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ತನಿಖೆಗೆ ಆದೇಶಿಸಿದ್ದೇವೆ. ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
A few days ago, Indigo passenger slapping a pilot. Now, video surfaces of TTE on Barauni Lucknow express slapping passenger. Does TTE have right to slap passenger (if ticketless travel, throw the law book.. not assault the passenger) . Impunity of power over aam aadmi?… pic.twitter.com/anYbj1Twrx
— Rajdeep Sardesai (@sardesairajdeep) January 18, 2024
ಇನ್ನು ಈ ಘಟನೆಯ ವಿಡಿಯೋವನ್ನು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ, ಆಮ್ ಆದ್ಮಿ ಪಕ್ಷದ ವಕ್ತಾರೆ ಸ್ವಾತಿ ಮಲಿವಾಲ್ ಕೂಡ ಹಂಚಿಕೊಂಡಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿ, ”ದಯವಿಟ್ಟು ವಿಷಯದ ಬಗ್ಗೆ ಗಮನಹರಿಸಿ ಮತ್ತು ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ” ಎಂದು ಒತ್ತಾಯಿಸಿದ್ದಾರೆ.