- ಎರಡು ಮರಿ ಆನೆಗಳು ಸೇರಿ ನಾಲ್ಕು ಆನೆಗಳ ರಕ್ಷಣೆ
- ರಾತ್ರಿ ವೇಳೆ ಕೆರೆಗೆ ಇಳಿದು ಅಲ್ಲಿಯೇ ಸಿಲುಕಿಕೊಂಡಿದ್ದ ಆನೆಗಳು
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಅಜ್ಜಾವರದಲ್ಲಿ ರೈತರೊಬ್ಬರ ಕೆರೆಯಲ್ಲಿ ಸಿಲುಕಿದ್ದ ನಾಲ್ಕು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಗುರುವಾರ ರಕ್ಷಣೆ ಮಾಡಿದ್ದಾರೆ.
ಅಜ್ಜಾವರಕ್ಕೆ ಬಂದ ಕಾಡಾನೆಗಳ ಹಿಂಡೊಂದು ಸಂತೋಷ್ ಎಂಬುವರ ತೋಟದೊಳಗೆ ನುಗ್ಗಿವೆ. ಆನೆಗಳ ಹಿಂಡಿನಲ್ಲಿದ್ದ ಎರಡು ದೊಡ್ಡ ಆನೆಗಳು ಮತ್ತು ಎರಡು ಮರಿ ಆನೆಗಳು ತೋಟದಲ್ಲಿದ್ದ ಕೆರೆಗೆ ಇಳಿದಿದ್ದು, ಮೇಲೆ ಬರಲಾಗದೆ ಅಲ್ಲೇ ಸಿಲುಕಿಕೊಂಡಿದ್ದವು.
ಅರಣ್ಯ ಅಧಿಕಾರಿಗೆ ಸ್ಥಳಕ್ಕೆ ಧಾವಿಸಿ, ಕೆರೆಯ ಅಂಚಿನ ಒಂದು ಬದಿಯಲ್ಲಿ ಮಣ್ಣು ಅಗೆದು ದಾರಿ ಮಾಡಿಕೊಟ್ಟು ಕಾಡಾನೆಗಳಿಗೆ ನಡೆದಾಡಲು ಸಹಕಾರಿಯಾಗುವಂತೆ ಮರಳು, ಕಲ್ಲುಗಳನ್ನು ಸುರಿಸಿದ್ದಾರೆ. ಬಳಿಕ, ಆ ದಾರಿಯ ಮೂಲಕ ಮೂರು ಕಾಡಾನೆ ಮೇಲೆ ಬಂದರೆ, ಮರಿ ಆನೆಗೆ ಕಷ್ಟವಾಗಿತ್ತು. ಅವುಗಳನ್ನು ಬಳ್ಳಿ ಸಹಾಯದಿಂದ ದೂಡಿ ಮೇಲಕ್ಕೆ ತರಲಾಗಿದೆ. ಮೇಲೆ ಬಂದ ಕಾಡಾನೆಗಳು ಕಾಡಿನತ್ತ ತೆರಳಿವೆ.
ಈ ಸುದ್ದಿ ಓದಿದ್ದೀರಾ? ದೇವೇಗೌಡರ ʼಮಾನಸ ಪುತ್ರʼ ವೈ ಎಸ್ ವಿ ದತ್ತ ಮರಳಿ ಜೆಡಿಎಸ್ ಗೂಡಿಗೆ
ನಾಲ್ಕೂ ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಪಅರಣ್ಯ ಸಂರಕ್ಷಾಣಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ, ಸಿಬ್ಬಂದಿಗಳ ಜತೆಗೆ ಸ್ಥಳೀಯರು ಕಾರ್ಯಾಚರಣೆ ಯಲ್ಲಿ ಸಹಕರಿಸಿದ್ದರು. ಘಟನೆ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.