ದೇವಾಲಯಕ್ಕೆ ತೆರಳುವಾಗ ಕಾರು-ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಕೃಷಿ ಇಲಾಖೆ ನೌಕರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ತಿರುಮಲ ಡಾಬಾ ಬಳಿ ನಡೆದಿದೆ.
ಚಿತ್ರದುರ್ಗ ಮುನ್ಸಿಪಲ್ ಕಾಲೋನಿಯ 5ನೇ ಕ್ರಾಸ್ ನಿವಾಸಿ ವಿಶಾಲ್ (28) ಮೃತ ದುರ್ದೈವಿ. ಇವರು ಹೊಳಲ್ಕೆರೆಯ ಕೃಷಿ ಇಲಾಖೆಯಲ್ಲಿ ಟೆಕ್ನಿಕಲ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭಾನುವಾರ ಇವರ ಎಂಗೇಜ್ಮೆಂಟ್ ಕಾರ್ಯವಿತ್ತು. ಇಂದು ಶನಿವಾರದ ನಿಮಿತ್ತ ಹೊಳಲ್ಕೆರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಚಿತ್ರದುರ್ಗದ ತಿರುಮಲ ಡಾಬಾದ ಬಳಿ ಬರುತ್ತಿದ್ದಂತೆ ಕಾರು ಮತ್ತು ಲಾರಿ ಮಧ್ಯೆ ಭೀಕರವಾದ ಅಪಘಾತ ಸಂಭವಿಸಿದೆ. ಪರಿಣಾಮ ವಿಶಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಜ 25ರವರೆಗೆ ರೂಟ್ ಮಾರ್ಚ್
ಅಪಘಾತದಿಂದ ಲಾರಿ ನೆಲಕ್ಕೆ ಉರುಳಿ ಬಿದ್ದಿದ್ದರೇ, ಕಾರು ಕೆಲಸಕ್ಕೆ ಬಾರದ ರೀತಿ ಫುಲ್ ಜಖಂ ಆಗಿದೆ. ವಿಶಾಲ್ಗೆ ಶಿವಮೊಗ್ಗದ ಸಾಗರ ಮೂಲದ ಯುವತಿಯೊಂದಿಗೆ ನಾಳೆ ಎಂಗೇಜ್ಮೆಂಟ್ ನಡೆಯಬೇಕಿತ್ತು. ಖುಷಿಯಲ್ಲಿ ಇರುವಾಗಲೇ ದುರ್ಘಟನೆ ಸಂಭವಿಸಿದೆ. ಇದು ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.