ಗದಗ | ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಬೇಕು; ರೈತ, ಕೃಷಿ ಕೂಲಿಕಾರರ ಆಗ್ರಹ

Date:

Advertisements

ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಆಗ್ರಹಿಸಿ ಗದಗ ಜಿಲ್ಲೆ  ಗಜೇಂದ್ರಗಡ ತಹಶೀಲ್ದಾರ್ ಕಚೇರಿ ಎದುರು ರೈತ ಕೃಷಿಕೂಲಿಕಾರರು ಕರ್ನಾಟಕ ಪ್ರಾಂತ್ಯ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘ ತಾಲೂಕು ಸಮಿತಿಗಳ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ರೈತ ಮುಖಂಡ ಎಂ ಎಸ್ ಹಡಪದ ಮಾತನಾಡಿ, “ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತಲೂ ಅತಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಬರ ಪರಸ್ಥಿತಿ ಉಂಟಾಗಿದೆ. ಸಾಲ ಸೂಲ ಮಾಡಿ ಬೀಜ, ರಸಗೊಬ್ಬರ ತಂದು ಬಿತ್ತನೆ ಮಾಡಿದ ರೈತನಿಗೆ ಬೆಳೆ ಬಾರದೇ ಇದ್ದುದ್ದರಿಂದ ರೈತರು ತೀವ್ರ ಸಾಲದ ಸುಳಿಗೆ ಸಿಲುಕಿದ್ದಾರೆ. ಪರಿಣಾಮ ದಿನದಿಂದ ದಿನಕ್ಕೆ ರೈತರ ಆತ್ಮಹತ್ಯೆಗಳು ಹೆಚ್ಚುತ್ತಲೇ ಇವೆ” ಎಂದು ಹೇಳಿದರು.

“ಕೃಷಿ ಕೂಲಿಕಾರರಿಗೆ ಕೆಲಸ ಸಿಗದಂತಾಗಿ ವಲಸೆ ಹೋಗುತ್ತಿದ್ದಾರೆ. ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿ ಜನ ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮತ್ತೊಂದಡೆ ಕೊಳವೆ ಬಾವಿಗಳು ಬತ್ತಿವೆ. ಮತ್ತೊಂದು ಕಡೆ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಈಗಾಗಲೇ ಖಾಲಿಯಾಗುವ ಸ್ಥಿತಿಯಲ್ಲಿವೆ. ಈ ಭೀಕರ ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.

Advertisements

“ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಗಾಲದ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ಬರಗಾಲ ಪರಿಹಾರ ನಿಧಿಯನ್ನು ನೀಡಬೇಕಾದ ಅವಶ್ಯಕತೆಯಿದೆ. ಇಂತಹ ಗಂಭೀರ ಸ್ಥಿತಿಯಲ್ಲಿ ರಾಜ್ಯದ 25 ಮಂದಿ ಬಿಜೆಪಿ ಸಂಸದರು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಮೊತ್ತ ತರುವಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಅವರು ರಾಜ್ಯದಲ್ಲಿನ ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕಾರಣ ಮಾಡುತ್ತ, ರಾಮ ಮಂದಿರ ನಿರ್ಮಾಣದ ವಿಷಯವನ್ನೇ ಪ್ರಧಾನವಾಗಿ ಮಾಡಿಕೊಂಡು ಕಾಲಕಳೆಯುತ್ತಿದ್ದಾರೆ” ಎಂದು ಆರೋಪಿಸಿದರು.

“ರಾಜ್ಯದ ಬರ ನಿರ್ವಹಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವಲ್ಲಿ ರಾಜ್ಯ ರೈತರಿಗೆ ತೀವ್ರ ಅನ್ಯಾಯ ಮಾಡುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಸ್ಥಳೀಯವಾಗಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.

“ಬರಗಾಲದ ನಿಮಿತ್ತ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ವರ್ಷದಲ್ಲಿ 100 ದಿನಗಳ ಬದಲಿಗೆ 200 ದಿನಗಳ ಕೆಲಸ ನೀಡಬೇಕು. ಬರಗಾಲದಲ್ಲಿ ಕೂಲಿಕಾರರ ಕನಿಷ್ಟ ದಿನಗೂಲಿಯನ್ನು ದಿನಕ್ಕೆ ₹600ಕ್ಕೆ ಕೂಲಿ ಹೆಚ್ಚಿಸಬೇಕು. “ರೈತರು ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಮೈಕ್ರೊ ಪೈನಾನ್ಸ್‌ ಮೂಲಕ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ವಲಸೆ ಕಾರ್ಮಿಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬರಗಾಲದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ಗಜೇಂದ್ರಗಡ-ರೋಣ ತಾಲೂಕುಗಳ ಬಗರ್ ಹುಕುಂ ಸಾಗುವಳಿದಾರ ರೈತರ ಅರ್ಜಿಗಳನ್ನು ಪರಿಶಿಲನೆ ಮಾಡಲು ಶಾಸಕರ ನೇತೃತ್ವದಲ್ಲಿ ಬಗರ್ ಹುಕುಂ ಸಮಿತಿ ಕೂಡಲೇ ರಚಿಸಬೇಕು. ಭೂಮಿ ಹಂಚಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಪ್ಪಳ ಏತ ನೀರಾವರಿ 3ನೇ ಹಂತದ ಕೃಷ್ಣಾ ಬಿ ಸ್ಕೀಂನಲ್ಲಿ ಗಜೇಂದ್ರಗಡ ತಾಲೂಕಿನ ನಾಗರಸಕೊಪ್ಪ, ಬೆಣಸಮಟ್ಟಿ, ಗೋಗೇರಿ, ಮಾಟರಂಗಿ ಹಾಗೂ ಉಣಚಗೇರಿ ಸೇರಿದಂತೆ ಹಲವು ಕೆರೆಗಳನ್ನು ತುಂಬಿಸಲು ರೋಣ ವಿಧಾನಸಭಾ ಮತಕ್ಷೇತ್ರದ ಶಾಸಕರು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದರು.

ಹೋರಾಟದ ಸ್ಥಳಕ್ಕೆ‌ ಗಜೇಂದ್ರಗಡ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹ‌ಣಾಧಿಕಾರಿಗಳು ಬಂದು ಮನವಿ ಸ್ವೀಕರಿಸಿ ಸ್ಥಳೀಯ ಬೇಡಿಕೆಗಳು ಕುರಿತು ಚರ್ಚೆ ಮಾಡಲು ಎಲ್ಲರೂ ಒಳಗೊಂಡ ಒಂದು ಸಭೆಯನ್ನು ಕರೆಯುತ್ತೇವೆಂದು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಸಿಪಿಐ ಪ್ರತಿಭಟನೆ

ಗಣೇಶ ರಾಠೋಡ್, ಪೀರು ರಾಠೋಡ್, ಸಂಗಪ್ಪ ಅಡವಿ, ರೂಪಲೇಶ ಮಾಳೋತ್ತರ, ಚೆನ್ನಪ್ಪ ಗುಗಲೊತ್ತರ್, ಮೋಹನ ರಾಠೋಡ್, ಕುಮಾರ ರಾಠೋಡ್, ವಿ ಆರ್ ಮಾಳತ್ತೋರ್, ಪಿರಪ್ಪ, ಮಂಜು, ಪಿರೇಶ್, ಶಿವಾಜಿ ಇಂಗಳೆ, ಶಿವಾಜಿ ಕಲ್ಲುಡಿ, ಈರಪ್ಪ, ಹನುಮಂತ, ಎಚ್ ಪಿ ಕಸುವಿ, ಕೆ ಪಿ ಕಸುವಿ, ಹನಮಪ್ಪ ಹಡಪದ, ವಿ ಎಚ್ ನಾಗವರ, ಲಕ್ಷ್ಮಣ ಮಗಿ, ಬಮ್ಮಪ್ಪ, ಎಸ್ ಎಲ್ ಗೊಜಲಿ, ಶಿವವ್ವ, ಸೊಮವ್ವ, ರೇಣವ್ವ, ಗೋಂವಿದಪ್ಪ, ಶರಣಪ್ಪ, ಮಲ್ಲೇಶಪ್ಪ, ಕಳಕಪ್ಪ, ಕಲ್ಲಪ್ಪ, ಶಿವಪ್ಪ, ಆನಂದ, ಯು ಟಿ ಮಾಳೋತ್ತರ್, ಆರ್ ಎಚ್ ಹೊಸಮನಿ, ದೇವರಾಜ್, ದುರಗಪ್ಪ, ಬಬ್ರುವಾಹನ್, ಮಾರುತಿ, ಬಿ ಎಸ್ ಕಲ್ಲಗುಡಿ, ರಮೇಶ್ ಪಮ್ಮಾರ್, ಸಂಗಪ್ಪ, ಪ್ರಕಾಶ, ಮೊಹಲಿ, ಹೊಗಪ್ಪ, ಜನಕಪ್ಪ ಹಾಗೂ ನೂರಾರು ರೈತ ಕೃಷಿ ಕೂಲಿಕಾರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್ ವಿಭಾಗದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ

ಬೆಂಗಳೂರು ನಿಮ್ಹಾನ್ಸ್ ಟೆಲಿ-ಮನಸ್ ಅಪೆಕ್ಸ್ ತಂಡದಿಂದ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್...

ಕಲಬುರಗಿ | ಶಾಲಾ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ; ಗ್ರಾಮಸ್ಥರಿಂದ ಪ್ರತಿಭಟನೆ

ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ...

ಗದಗ | ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ, ಸ್ಪಂದಿಸದ ಆಡಳಿತ: ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿ

"ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ...

ಕೊಪ್ಪಳ | ಅಕ್ರಮ ಗಾಂಜಾ ಮಾರಾಟ : ಒಂದೇ ಕುಟುಂಬದ 3 ಸೇರಿ ನಾಲ್ವರ ಬಂಧನ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ...

Download Eedina App Android / iOS

X