ಮರುಘಾ ಮಠದ ಹಣ, ಆಸ್ತಿ ದುಬರ್ಳಕೆ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ ಬಸವರಾಜನ್ ವಿರುದ್ಧದ ಪ್ರಕರಣದಲ್ಲಿ ಅತ್ಯಾಚಾರ ಆರೋಪಿ ಮುರುಘಾ ಶಿವಮೂರ್ತಿ ಅವರೂ ಸಾಕ್ಷಿಯಾಗಿದ್ದಾರೆ.
2007ರಲ್ಲಿ ಬಿಪಿಎ ಪಡೆದು ಮಠದ ಹಣದಿಂದ ಬಸವರಾಜನ್ ಅವರು ಜಮೀನು ಖರೀದಿಸಿ, ತನ್ನ ಹೆಸರಿಗೆ ಕ್ರಯಪತ್ರ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಶಿವಮೂರ್ತಿ ಅವರು 12ನೇ ಸಾಕ್ಷಿಯಾಗಿದ್ದು, ಬಸವರಾಜನ್ ಆಸ್ತಿ ಖರೀದಿಸುವಾಗ ತಮಗೂ ತಿಳಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
“ಮಠಕ್ಕೆ ಮೋಸವಾಗಿರುವುದು ಗೊತ್ತಾದಾಗ ಅವರ ವಿರುದ್ಧ ಕ್ರಮ ಕೊಳ್ಳುವಂತೆ ಮನವಿ ಸಲ್ಲಿಸಿದ್ದೆ. ದಾನವಾಗಿ ಬಂದ ಆಸ್ತಿಯನ್ನು ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.