ಸರ್ಕಾರಿ ಶಾಲೆಯ ಗೋಡೆ ಕಲ್ಲು ಕುಸಿದು ವಿಧ್ಯಾರ್ಥಿನಿಯರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ವಿಜಯಪುರ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 1ರಲ್ಲಿ ನಡೆದಿದೆ.
ವಿಜಯಪುರ ನಗರದ ಬಾಂಗಿ ಆಸ್ಪತ್ರೆ ಎದುರಿಗಿರುವ ಸರ್ಕಾರಿ ಉರ್ದು ಶಾಲೆಯ ಹಳೆಯ ತರಗತಿಯಲ್ಲಿದ್ದ ಕೈತೊಳೊಯೋ ತೊಟ್ಟಿಯ ಬಳಿ ಗೋಡೆ ಕಲ್ಲು ಕುಸಿದು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ತಲೆ ಮೇಲೆ ಬಿದ್ದ ಪರಿಣಾಮ ವಿದ್ಯಾರ್ಥಿನಿಯರಿಗೆ ಗಂಭೀರವಾಗಿ ಗಾಯಗಳಾಗಿವೆ.
ಇನ್ನು ಎಂಟನೆ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಾದ ಜುನೇರಾ ಚೋಪದಾರ್ ಹಾಗೂ ಹುಷ್ದಾ ಫತೇಪೂರ ಎಂಬ ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಜುನೇರಾ ತಲೆಗೆ ಗಾಯಗಳಾಗಿ ಎಂಟು ಹೊಲಿಗೆ ಹಾಕಲಾಗಿದೆ.
ಇನ್ನು ಹಳೆಯ ಗೋಡೆ ಶಿಥಿಲವಾಗಿದ್ದೆ ಈ ಅವಘಡಕ್ಕೆ ಕಾರಣ ಎನ್ನುತ್ತಿರುವ ಪಾಲಕರು, ಮಕ್ಕಳನ್ನು ಹೇಗೆ ಇಲ್ಲಿ ಕಳಿಸುವುದು ಎಂದು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ.