ಸರ್ಕಾರದ ಆದೇಶದಂತೆ ಪ್ರತಿಯೊಂದು ಶಾಲೆಯಲ್ಲಿ ‘ಮಕ್ಕಳ ರಕ್ಷಣಾ ಸಮಿತಿ’ಯನ್ನು ರಚನೆ ಮಾಡಿ, ಅದರಲ್ಲಿ 8ನೇ ತರಗತಿ ಅಥವಾ ಅದಕ್ಕಿಂತ ಉನ್ನತ ತರಗತಿಯಲ್ಲಿರುವ ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಹಾಸನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹೇಳಿದೆ.
ಹಾಸನದಲ್ಲಿ ಪ್ರಾಧಿಕಾರದ ನೇತೃತ್ವದಲ್ಲಿ ನಾನಾ ಇಲಾಖೆಗಳ ಸಹಯೋಗದಲ್ಲಿ ಪೋಕ್ಸೋ ಜಾಗೃತಿ ಜಾಥಾ, ತೆರೆದಮನೆ ಹಾಗೂ ಕರ್ನಾಟಕ ಮಕ್ಕಳ ರಕ್ಷಣಾ ನೀತಿ ಜಾರಿ ಮತ್ತು ಮಕ್ಕಳ ರಕ್ಷಣಾ ಸಮಿತಿ ರಚನೆ ಕುರಿತು ಅರಿವಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಮುಖಂಡರು, “ಈ ಮಕ್ಕಳ ರಕ್ಷಣಾ ಸಮಿತಿ ಪ್ರತಿ ತಿಂಗಳಿಗೆ ಒಂದು ಬಾರಿ ಅಥವಾ ಮಕ್ಕಳ ಸುರಕ್ಷತೆ ಉಲ್ಲಂಘನೆಯಾದಾಗ ಸಮಿತಿ ಕಡ್ಡಾಯವಾಗಿ ಸಭೆ ನಡೆಸಬೇಕು. ಶಾಲೆಯ ಯಾವುದೇ ಮಗುವಿಗೆ ಯಾರೇ ಪರಿಚಿತರು, ಅಪರಿಚಿತರಿಂದ ಯಾವುದೇ ರೀತಿಯ ತೊಂದರೆ ಆಗುತ್ತಿದ್ದರೇ, ತಕ್ಷಣ ಅದನ್ನ ಮುಖ್ಯೋಪಾದ್ಯಾಯರಿಗೆ ಹೇಳಿ ಸಭೆಯಲ್ಲಿ ವಿಚಾರಣೆ ನಡೆಸಬೇಕು” ಎಂದು ತಿಳಿಸಿದರು.
“ಮಕ್ಕಳೇ ನೀವು ಯಾವುದಾದರೂ ದೊಡ್ಡ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದೀನಿ ಅಂತ ಅನಿಸಿದ್ರೆ ಕೂಡಲೇ ಈ ಬಗ್ಗೆ ನಿಮ್ಮ ಪೋಷಕರು, ಶಿಕ್ಷಕರು ಅಥವಾ ನೀವು ನಂಬಬಹುದಾದ ಯಾವುದೇ ಹಿರಿಯರಿಗೆ ಕೂಡ ತಪ್ಪದೇ ತಿಳಿಸಿ ಅಥವಾ ನೇರವಾಗಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ. ಇಲ್ಲವೇ, ಮಕ್ಕಳ ಸಹಾಯವಾಣಿ 1098 ಇದಕ್ಕೂ ಫೋನ್ ಮಾಡಬಹುದು ಅಥವಾ ನಿಮ್ಮ ಹಿರಿಯರಿಂದಲೂ ಈ ನಂಬರ್‌ಗೆ ಕರೆ ಮಾಡಿಸಬಹುದು” ಎಂದು ಹೇಳಿದರು.
“ನಿಮ್ಮ ಅಕ್ಕಪಕ್ಕದಲ್ಲಿ ಯಾವುದಾದರೂ ಮಕ್ಕಳು ಈ ರೀತಿಯ ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದರೇ, ನೀವು ಈ ನಂಬರ್‌ಗಳಿಗೆ ಫೋನ್ ಮಾಡಿ ವಿಷಯ ತಿಳಿಸಿ, ರಕ್ಷಣೆ ಕೇಳಬಹುದು. ಯಾವುದಕ್ಕೂ ಹೆದರಬೇಡಿ. ನಾವಿದ್ದೀವಿ. ಒಟ್ಟಿನಲ್ಲಿ ನಿಮ್ಮ ಸುರಕ್ಷತೆ, ಸಂತೋಷದಾಯಕ ಭವಿಷ್ಯನೇ ನಮ್ಮ ಗುರಿ. ಎಚ್ಚರಿಕೆಯಿಂದ ಇದ್ದೀರಲ್ವಾ ಮಕೈ? ಹಾಗೇನಾದ್ರೂ ತೊಂದರೆ ಅನ್ನಿದ್ರೆ ತಕ್ಷಣ ನಮ್ಮನ್ನ ಜ್ಞಾಪಿಸ್ಕೊಳ್ಳಿ” ಎಂದು ಹೇಳಿದೆ.
ಮಕ್ಕಳಿಗೆ ಕಿರು ಕಥೆ ಹೇಳಿದ ಪ್ರಾಧಿಕಾರ
ನೀವೊಂದು ವೇಗವಾಗಿ ಹೋಗ್ತಿರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೀರಾ ಅಂತ ಕಲ್ಪಿಸಿಕೊಳ್ಳಿ. ಕೆಳ ಭಾಗದಲ್ಲಿ ಬೆಟ್ಟ ಗುಡ್ಡ ನದಿ… ಹೀಗೆ, ಸುಂದರ ಪ್ರಕೃತಿ ಸೌಂದರ್ಯ ಕಾಣುತ್ತೆ. ತಕ್ಷಣ ನಿಮಗೆ, ನಾನು ಅಲ್ಲಿಗೆ ಹಾರಿ ಹೋಗಿ ಸಂತೋಷವಾಗಿ ಕಾಲ ಕಳೀಬೇಕಪ್ಪ ಅಂತ ಅನ್ನಿಸಿಬಿಡುತ್ತೆ’ ಆಗ ರೈಲಿನ ಬಾಗಿಲ ಹತ್ತಿರ ಹೋಗಿ, ಆ ಸುಂದರ ಪ್ರಕೃತಿಯ ಮದ್ಯಕ್ಕೆ ಹಾರಿ ಬಿಡ್ತೀರ! ಅಲ್ವಾ? ಓ ಹಾರಲ್ವಾ? ಯಾಕೆ? ಅಷ್ಟು ಎತ್ತರದಿಂದ, ಅಷ್ಟು ವೇಗವಾಗಿ ಓಡ್ತಿರೋ ರೈಲಿನಿಂದ ಕೆಳಗೆ ಹಾರಿದರೆ… ಒಂದೋ ಜೀವ ಹೋಗುತ್ತೆ, ಇಲ್ಲಾ ಕೈ, ಕಾಲು, ಬೆನ್ನು ಮೂಳೆ ಮುರಿದು ಶಾಶ್ವತವಾಗಿ ಅಂಗವಿಕಲರಾಗ್ತಿರ! ಜೀವಮಾನವಿಡೀ ನರಳ್ತಾ ಕಳೀಬೇಕಾಗುತ್ತೆ. ಇದು ನಿಮಗೆಲ್ಲರಿಗೂ ಖಂಡಿತ ಗೊತ್ತಿದೆ ಅಲ್ವಾ? ಹೀಗಾಗೇ ನಾನು ನನ್ನ ಗುರಿಯನ್ನ ಕ್ಷೇಮವಾಗಿ ತಲುಪಬೇಕು ಅಂತ ರೈಲಿನ ಪ್ರಯಾಣವನ್ನ ಆರಾಮವಾಗಿ ಮುಂದುವರಿಸ್ತಿರ. ಅಲ್ವಾ?
ಬದುಕು ಅಂದ್ರೂ ಹೀಗೇ ಮಕ್ಕೆ, ನಾವು ಪ್ರತಿಯೊಂದು ಹೆಜ್ಜೆಯನ್ನೂ ಸುರಕ್ಷಿತವಾಗಿ, ಎಚ್ಚರಿಕೆಯಿಂದ ಇಡಬೇಕು. ಯಾರ ಮೋಸದ, ಆಮಿಷದ ಮಾತಿಗೂ ಬೀಳಬಾರ್ದು. ಹಾಗೇನಾದ್ರೂ ಪ್ರೀತಿ, ಪ್ರೇಮದ ಹೆಸರಲ್ಲಿ, ಐಷಾರಾಮಿ ವಸ್ತುಗಳು, ಬಟ್ಟೆಬರೆಗಳು ಸಿಗುತ್ತೆ ಅನ್ನೋ ಆಸೆನಲ್ಲಿ ನೀವು ಮೈಮರೆತು ಭಾವುಕರಾದ್ರೆ, ಜೀವನಪರ್ಯಂತ ನೋವನ್ನ ಅನುಭವಿಸ್ತಾ, ಎಲ್ಲರಿಂದ ಅವಮಾನಕ್ಕೆ ಒಳಗಾಗ್ತಾ, ಯಾವ ಸಾಧನೆಯನ್ನೂ ಮಾಡಲಿಕ್ಕಾಗ್ದೆ ಮೂಲೆಗುಂಪಾಗಿ ಹೋಗ್ತಿರ. ನನಗಂತೂ ನೀವ್ಯಾರೂ ಹಾಗೆ ನಿಮ್ಮ ಬದುಕನ್ನ ಹಾಳು ಮಾಡಿಕೊಳ್ಳೋದು ಚೂರು ಇಷ್ಟ ಇಲ್ಲಪ್ಪ,
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾಜಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ₹8.2 ಲಕ್ಷ ಕಳೆದುಕೊಂಡ ಯುವತಿ
ನಿಮ್ಮ ಸುತ್ತಲ ಪ್ರಪಂಚವನ್ನ ಸ್ವಲ್ಪ ಎಚ್ಚರಿಕೆಯಿಂದ ನೋಡಿ ಮಕ್ಕಳೇ, ಹೀಗೆ ಯಾವುದ್ಯಾವುದೋ ಆಮಿಷಕ್ಕೆ ಬಲಿಯಾಗಿ ಮನೆ ಬಿಟ್ಟು ಓಡಿ ಹೋಗಿರೋ ಮಕ್ಕು ಕಾಣ್ತಾರೆ. ಅವ್ರು ಯಾವ್ಯಾವ್ದೋ ದುಷ್ಟರು, ಕಳ್ಳಕಾಕರ ಕೈಗೆ ಸಿಕ್ಕಿ ಹಾಕಿಕೊಳ್ತಾರೆ. ಅವರು ಹೇಗೆ ಹೇಗೋ ಮಕ್ಕಳ ದೇಹವನ್ನ ಉಪಯೋಗಿಸಿಕೊಂಡು, ಯಾವ್ಯಾವೋ ಕೆಟ್ಟ ಜಾಲಕ್ಕೆ ನೂಕಿಬಿಡ್ತಾರೆ. ಆಮೇಲೆ ಮನೆಗೆ ವಾಪಸ್ ಬರೋದಿಕ್ಕೂ ಆಗದ ಸ್ಥಿತಿ ಬಂದ್ದಿಡುತ್ತೆ, ಇನ್ನೊಂದು ಕಡೆ ವಿದ್ಯಾಭ್ಯಾಸನೂ ಮುಂದುವರಿಸಲಿಕ್ಕೆ ಬಿಡದೇ, ಯಾವುದ್ಯಾವುದೋ ಕೆಲಸಕ್ಕೆ ಮಕ್ಕಳನ್ನ ಹಾಕಿಬಿಡೋದೂ ಇದೆ. ಇದು ಬಾಲಕಾರ್ಮಿಕ ಪದ್ಧತಿ ಅಂತ. ಇದೂ ಅಪರಾಧ.
ಹಾಗೆ, ಯಾರೂ ನಿಮ್ಮ ಓದನ್ನ ಬಿಡಿಸಿ, ಇಂತಹ ಕೆಲಸಕ್ಕೆ ದೂಡದ ಹಾಗೆ ಕೂಡ ಎಚ್ಚರಿಕೆಯಿಂದ ಇರಬೇಕು. ಜತೆಗೆ ಕೆಲ ಪೋಷಕರು ಚಿಕ್ಕ ವಯಸ್ಸಿಗೇ ಮಕ್ಕಳನ್ನ ಮದುವೆ ಮಾಡಿಬಿಡ್ತಾರೆ. ಮಕ್ಳೆ ಬಾಲ್ಯವಿವಾಹ ಅಂದ್ರೆ ಇದೇ. 18 ವರ್ಷದೊಳಗೇ ಮದುವೆ ಆಗೋದು ಅಂತ. ಅಮ್ಮ ಕೂಡ ಎಲ್ಲ ರೀತಿಯಲ್ಲೂ ಅಪರಾಧ ಇಂತಹ ಮದ್ವೆ ಮಾಡಿದವರನ್ನ ಜೈಲಿಗೆ ಹಾಕೋದಷ್ಟೇ ಅಲ್ಲ. ಇದರಿಂದ ಮಗುವಿನ ಬಾಲ್ಯ ಮತ್ತು ಬದುಕು ಎರಡೂ ಹಾಳಾಗಿ ಹೋಗುತ್ತೆ ಮುಂದೆ ಮಗುವನ್ನ ಹೆರಬಾರದ ಚಿಕ್ಕವಯಸ್ಸಿಗೇ ಗರ್ಭಿಣಿ, ಹೆರಿಗೆ ಅಂತೆಲ್ಲಾ ಪಾಡಾಗಿ, ಎಷ್ಟೋ ಮಕ್ಕಳಿಗೆ ಆರೋಗ್ಯ ಸಮಸ್ಯೆ ಆಗಿ ಸತ್ತೇ ಹೋಗ್ತಾರೆ. ಇದೆಲ್ಲಾ ಏನೇನೋ ಭಯಾನಕವಾದ್ದನ್ನ ಹೇಳಿ ನಿಮ್ಮನ್ನ ಹೆದರಿಸ್ತಿದ್ದೀನಿ ಅಂಡ್ಕೊಂಡ್ರಾ ಮಕ್ಳೆ? ಖಂಡಿತ ಇಲ್ಲಾ…
“ನೀವೆಲ್ಲಾ ಯಾರೂ, ಯಾವತ್ತೂ ಹೀಗೆಲ್ಲಾ ನಿಮ್ಮ ಬದುಕನ್ನ ಹಾಳು ಮಾಡಿಕೊಳ್ಳಲೇಬಾರದು. ನಿಮ್ಮನ್ನ ರಕ್ಷಣೆ ಮಾಡೋದಕ್ಕೆ, ಸುರಕ್ಷಿತವಾಗಿ ಇಡೋದಿಕ್ಕೆ ಅಂತ ಈಗ ಬಹಳಷ್ಟು ವ್ಯವಸ್ಥೆಗಳಿವೆ. ಯಾರೂ ಹೆದರಿ ಕೊಳ್ಳಬೇಕಾಗಿಲ್ಲ ಎಂದು ಹಾಸನದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ.