ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
“ರಾಹುಲ್ ಗಾಂಧಿ ಸಾಗುತ್ತಿದ್ದ ಬಸ್ ಅಡ್ಡಗಟ್ಟಿ, ಅವರ ಮೇಲೆ ದಾಳಿ ನಡೆಸಲು ಬಿಜೆಪಿಗರು ಮುಂದಾಗಿದ್ದಾರೆ. ಯಾತ್ರೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
“ಅಸ್ಸಾಂನ ಶಂಕರ ದೇವಾಲಯಕ್ಕೆ ರಾಹುಲ್ ಗಾಂಧಿಗೆ ಪ್ರವೇಶ ನಿರಾಕರಿಸಲಾಗಿದೆ. ನಮ್ಮ ನ್ಯಾಯ ಯಾತ್ರೆಯ ಉದ್ದಕ್ಕೂ ಅಸ್ಸಾಂ ಮುಖ್ಯಮಂತ್ರಿ ತಮ್ಮ ಗೂಂಡಾಗಳ ಮೂಲಕ ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಶಾಂತಿಯುತ ಯಾತ್ರೆಗೆ ಅಡ್ಡಿಪಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್, “ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಎದುರಿಸುತ್ತಿದ್ದು, ಹತಾಶ ಮನೋಭಾವದಿಂದ ದ್ವೇಷ ರಾಜಕಾರಣ ಮಾಡಲು ಹೊರಟಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸಿ ಮನೆಗೆ ಕಳುಹಿಸುವುದು ಶತಸಿದ್ಧವಾಗಿದೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿಯ ಗೊಡ್ಡು ಬೆದರಿಕೆಗೆ ಅಂಜುವುದಿಲ್ಲ” ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಡಾ.ಗಂಗಾಧರ ಸಂಬಣ್ಣಿ, ಆಜಾದ ಪಟೇಲ, ವಿದ್ಯಾವತಿ ಅಂಕಲಗಿ, ಬಲರಾಮ ನಾಯಕ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ, ಚಾಂದಸಾಬ ಗಡಗಲಾವ, ಡಾ.ರವಿ ಬಿರಾದಾರ, ವಸಂತ ಹೊನಮೊಡೆ, ಹೊನಮಲ್ಲ ಸಾರವಾಡ, ಅಶ್ಫಾಕ ಮನಗೂಳಿ, ಬಿ.ಸಿ. ಸಾವುಕಾರ, ಶರಣಪ್ಪ ಯಕ್ಕುಂಡಿ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಅಬುಬಕರ ಬಿಜಾಪುರ, ಅಂಗ ಘಟಕಗಳ ಅಧ್ಯಕ್ಷರಾದ ವಿದ್ಯಾರಾಣಿ ತುಂಗಳ, ನಿಂಗಪ್ಪಾ ಸಂಗಾಪೂರ, ಲಾಲಸಾಬ ಕೊರಬು, ಬೀರಪ್ಪ ಜುಮನಾಳ, ಎಸ್.ವ್ಹಿ. ಹಜೇರಿ, ರಾಜೇಶ್ವರಿ ಚೋಳಕೆ, ಪಯಾಜ ಕಲಾದಗಿ, ಫಿರೋಜ ಶೇಖ, ಮಹಾನಗರಪಾಲಿಕೆ ಸದಸ್ಯರಾದ ಅಪ್ಪು ಪೂಜಾರಿ, ಸದ್ದಾಂ ನಾಡೆವಾಲೆ, ಶಫೀಕ ಮನಗೂಳಿ, ಬಂದೆನವಾಜ ಬೀಳಗಿ, ಅಬ್ದುಲ್‌ಪೀರಾ ಜಮಖಂಡಿ, ಅಂಬಣ್ಣ ಕಲಮನಿ, ಇಕ್ಲಾಸ್ ಸುನ್ನೆವಾಲೆ, ಶಕೀಲ ಸುತಾರ, ಸುಂದರಪಾಲ ರಾಠೋಡ, ಈರಪ್ಪ ಜಕ್ಕನ್ನವರ, ಸೈಫನಸಾಬ ಡಾಂಗೆ, ಸಂತೋಷ ಬಾಲಗಾಂವಿ, ಮಹ್ಮದ ಮುಲ್ಲಾ, ಸಲೀಮ್ ಕಲಾದಗಿ, ಅಕ್ರಂ ಮಾಶಾಳಕರ, ಕೆ.ಬಿ. ಲೋಣಿ, ರಜಾಕಸಾಬ ಕಾಖಂಡಕಿ, ಅಕ್ಬರ ಗೋಕಾವಿ, ಧನರಾಜ ಎ., ಗುಲಾಬ ಭಂಡಾರಿ, ಕೆ.ಸಿ. ಪಾರಶೆಟ್ಟಿ, ಎಂ.ಎ. ಬಕ್ಷಿ, ತುಳಸಿ ಪಂಡಿತ್ ಹರಿಜನ, ಮಂಜುನಾಥ ನಿಡೋಣಿ, ಆಸ್ಮಾ ಕಾಲೆಬಾಗ, ಸವಿತಾ ಧನರಾಜ, ವರ್ಷಾ ಭೋವಿ, ಹಮೀದಾ ಪಟೇಲ, ನಾಗಮ್ಮಾ ಪಾಟೀಲ, ಜಯಶ್ರೀ ಭಾರತೆ, ಗಂಗೂಬಾಯಿ ಧುಮಾಳೆ, ರುಬೀನಾ ಹಳ್ಳೂರ, ಎಂ.ಎA. ನಾವಿ, ಪ್ರದೀಪ ಸೂರ್ಯವಂಶಿ, ಮುತ್ತಣ್ಣ ಭೋವಿ, ಈರಪ್ಪ ಕುಂಬಾರ, ಅಬುಬಕರ ಕಂಬಾಗಿ, ಮಹೇಶ ಶಹಾಪೂರ, ಮಹೆಬೂಬ ಚೌಧರಿ, ಚನ್ನಬಸಪ್ಪ ಹರಿಜನ, ಪಿ.ಜಿ. ಕ್ಯಾತನ್, ಸರಫರಾಜ ಮಿರ್ದೆ, ಪ್ರಸಾದ ಚವ್ಹಾಣ, ನಬಿಲಾಲ ಮುಲ್ಲಾ, ಸಿದ್ದುಕುಮಾರ ಮುನ್ನಾಗೋಳ, ಅರ್ಜುನ ಪಟೇಲ್, ಸನಿ ಗವಿಮಠ, ಪ್ರತಾಪ ಚಿಕ್ಕಲಕಿ, ಮಹೇಶ ತಳಕೇರಿ, ರಮೇಶ ಮಂಗಳೂರ, ಷಣ್ಮುಖ ನಡುವಿನಕೇರಿ, ಮಹ್ಮದಯಾಸೀನ್ ಇನಾಮದಾರ, ಅನಿಲ ಸುರಗಿಹಳ್ಳಿ, ಶಾಕಿರ ಖಾಜಿ ಮುಂತಾದವರು ಉಪಸ್ಥಿತರಿದ್ದರು.