ಕಲಬುರಗಿಯ ಕೊಟನೂರು ಮತ್ತು ಯಾದಗಿರಿಯ ತಡಿಬಿಡಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯಾದಗಿರಿಯಲ್ಲಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಶರಣು ಎಸ್. ನಟೇಕರ, “ದೇಶಕ್ಕೆ ಸಂವಿಧಾನ ಕೊಟ್ಟ ಜ್ಞಾನಿಗೆ ಇಲ್ಲಿನ ಅಜ್ಞಾನಿಗಳು ಅವಮಾನ ಮಾಡಿದ್ದಾರೆ. ಘಟನೆಯ ಅಕ್ಷಮ್ಯವಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಅಪಮಾನ ಮಾಡಿರುವ ದುಷ್ಕರ್ಮಿಗಳನ್ನು ಗಡಿಪಾರು ಮಾಡಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಘಟನೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಬೇಕು” ಎಂದು ಇತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಭೀಮರಾಯ ಸಿಂಧಿಗೇರಿ, ಶಿವಶಂಕರ ವಾಡಿ, ಶಿವಶಂಕರ ಕಲ್ಬುರ್ಗಿ, ಭೀಮರಾಯ ಕರಣೆಗಿ, ಮಲ್ಲಪ್ಪ ಲಂಡನಕರ್,ಶರಣು ಆಲಳ್ಳಿ, ಸಿದ್ದರಾಮ ನಾಯ್ಕಲ್, ಮಲ್ಲಿಕಾರ್ಜುನ ತಾಳವಾರಗೇರಿ, ಪ್ರಭು ಕಚಕನೂರ,ಶರಣಪ್ಪ ಯರಗೋಳ, ಸೈಬಣ್ಣ ಯಂಪಾಡ, ಸಲಿಮ್ ಅಹ್ಮದ್, ಮೌನೇಶ ಮ್ಯಾಗೇರಿ, ಬಸವರಾಜ, ಬಸವರಾಜ ಕೆಂಭಾವಿ, ರಾಜು ಕೊಂಕಲ್, ನಿರ್ಮಲಾ ಅರಿಕೇರಿ, ಸುಶೀಲಮ್ಮ ಯಲ್ಲತ್ತಿ, ಚಂದಮ್ಮ, ದೇವಮ್ಮ,ನಿರ್ಮಲಾ ಎಸ್. ನಾಟೇಕರ್, ಹುಲುಗಮ್ಮ,ಭೀಮಾಶಂಕರ ಈಟೆ, ಆಂಜನೇಯ ಬುಡ್ಗಜಂಗಮ, ನಿರ್ಮಲಾ ಇನ್ನಿತರರು ಉಪಸ್ಥಿತರಿದ್ದರು..