ಜ್ಞಾನವಾಪಿ ವಿವಾದ | ದೇವಾಲಯದ ಅವಶೇಷದ ಮೇಲೆಯೇ ಮಸೀದಿ ನಿರ್ಮಾಣ: ಅರ್ಜಿದಾರರ ಪರ ವಕೀಲ

Date:

Advertisements

ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಸಮೀಕ್ಷಾ ವರದಿಯನ್ನು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಬಹಿರಂಗಪಡಿಸಿದ್ದು, ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಅವಶೇಷಗಳ ಮೇಲೆಯೇ ಮಸೀದಿ ನಿರ್ಮಿಸಲಾಗಿದೆ ಎಂದು ಅರ್ಜಿದಾರ ಹಿಂದೂ ಮಹಿಳೆಯರ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಗುರುವಾರ ರಾತ್ರಿ ಹೇಳಿಕೆ ನೀಡಿದ್ದಾರೆ.

839 ಪುಟಗಳ ಸಮೀಕ್ಷಾ ವರದಿಯ ಪ್ರತಿಗಳನ್ನು ಗುರುವಾರ ತಡರಾತ್ರಿ ನ್ಯಾಯಾಲಯವು ಸಂಬಂಧಪಟ್ಟ ಕಕ್ಷಿದಾರರಿಗೆ ನೀಡಿದೆ ಎಂದು ವಕೀಲ ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಿಂದೆ ಇದ್ದ ದೇವಸ್ಥಾನವನ್ನು ಕೆಡವಿದ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸಮೀಕ್ಷೆಯ ವರದಿ ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

Advertisements

“ಅಸ್ತಿತ್ವದಲ್ಲಿರುವ ರಚನೆಯನ್ನು ನಿರ್ಮಿಸುವ ಮೊದಲು ಒಂದು ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಎಎಸ್ಐ ಹೇಳಿದ್ದು, ಎಎಸ್ಐನ ನಿರ್ಣಾಯಕ ಸಂಶೋಧನೆಯಾಗಿದೆ. ಸರ್ವೇ ವರದಿಯಲ್ಲಿ ಮಸೀದಿಗೂ ಮುನ್ನ ದೊಡ್ಡ ದೇಗುಲ ಇತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ” ಎಂದು ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.

“ಸಮೀಕ್ಷೆಯಲ್ಲಿ 32 ಸ್ಥಳಗಳಲ್ಲಿ ಪುರಾವೆಗಳು ಸಿಕ್ಕಿವೆ. ಮಸೀದಿ ನಿರ್ಮಾಣಕ್ಕೂ ಮುಂಚೆಯೇ ಹಿಂದೂ ದೇವಾಲಯವಿತ್ತು ಎಂದು ತೋರಿಸುತ್ತದೆ. 2 ಸೆಪ್ಟೆಂಬರ್ 1669 ರಂದು ದೇವಾಲಯವನ್ನು ಕೆಡವಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜನಾರ್ದನ, ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ. ಜ್ಞಾನವಾಪಿಯ ಪಶ್ಚಿಮ ಗೋಡೆಯು ಹಿಂದೂ ದೇವಾಲಯದ ಭಾಗವಾಗಿತ್ತು. ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ” ಎಂದು ಹಿಂದೂ ಪರ ವಕೀಲ ತಿಳಿಸಿದ್ದಾರೆ.

“ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. ಸರ್ವೇ ವೇಳೆ ಕಟ್ಟಡದ ರಚನೆಗೆ ಯಾವುದೇ ಹಾನಿ ಉಂಟಾಗಿಲ್ಲ, ಶೋಧಿಸಿದ ಎಲ್ಲ ವಸ್ತುಗಳನ್ನು ದಾಖಲಿಸಲಾಗಿದೆ. ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ರಚನೆಯಲ್ಲಿ ಹಿಂದಿನ ರಚನೆಯ ಕಂಬಗಳ ಬಳಕೆಯಾಗಿದೆ. ಸ್ತಂಭಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ” ಎಂದು ಎಎಸ್‌ಐ ವರದಿಯನ್ನು ಓದುತ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಹೊಸ ರಚನೆಯ ನಿರ್ಮಾಣದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಭಾಗಗಳನ್ನು ಮರುಬಳಕೆ ಮಾಡಲಾಗಿದೆ. ದೇವಾಲಯವು ದೊಡ್ಡ ಕೇಂದ್ರವನ್ನು ಮಸೀದಿಯ ಸಭಾಂಗಣವಾಗಿ ಬಳಸಲಾಗುತ್ತಿದೆ. ಈಗಿರುವ ಮಸೀದಿಯಲ್ಲಿ ಹಿಂದಿನ ರಚನೆಯ 34 ಶಾಸನಗಳನ್ನು ಬಳಸಲಾಗಿದೆ. ಮರು ಬಳಕೆ ವೇಳೆ ಕುರುಹು ನಾಶ ಮಾಡಲಾಗಿದೆ. ಈ ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ” ಎಂದು ಅರ್ಜಿದಾರರಾದ ಐವರು ಹಿಂದೂ ಮಹಿಳೆಯರ ಪರ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X