‘ದೇಶ ಕಂಡ ಅಪ್ರತಿಮ ಹೋರಾಟಗಾರರು ಹಾಗೂ ದೇಶದ ಉನ್ನತಿಯನ್ನು ಉತ್ತುಂಗಕ್ಕೆ ಏರಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿಕೊಟ್ಟ ಸಂವಿಧಾನ ಜಾರಿಗೆ ಬಂದ ದಿನ ಜನವರಿ 26’ ಎಂದು ದೊಡ್ಡೂರ ಗ್ರಾಮ ಪಂಚಾಯಿತಿ ಸದಸ್ಯೆ ಮಧುಮಾಲತಿ ಈಳಿಗೇರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪ್ರತಿಯೊಬ್ಬ ಭಾರತೀಯರಿಗೆ ತನ್ನದೇ ಆದ ಹಕ್ಕುಗಳನ್ನು ಪಡೆದುಕೊಳ್ಳಲು ಭಾರತ ಸಂವಿಧಾನದಿಂದ ಮಾತ್ರ ಸಾಧ್ಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಮಾನತೆ ಅನುಷ್ಠಾನವೇ ಸಂವಿಧಾನದ ಆಶಯ: ಶಾಸಕ ಎಸ್ ಆರ್ ಶ್ರೀನಿವಾಸ್
ದೊಡ್ಡೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಲ್ಲಪ್ಪ ಯಲ್ಲಪ್ಪ ತೋಟದ, ಉಪಾಧ್ಯಕ್ಷೆ ಲಕ್ಷ್ಮಿ ಅಂಗಡಿ, ಕಾರ್ಯದರ್ಶಿ ರಾಮಯ್ಯ ಗುರುವಿನ ಹಾಗೂ ಸದಸ್ಯರುಗಳಾದ ಚಂದ್ರಶೇಖರ ಈಳಿಗೇರವರು, ನಾನಪ್ಪ ಲಮಾಣಿ, ಜಯಮ್ಮ ಮಣ್ಣಮ್ಮನವರ, ದೇವಕ್ಕ ಭಜಕ್ಕನವರವರು, ಶಂಕ್ರಪ್ಪ ಲಮಾಣಿ, ನಿಂಗಪ್ಪ ಬಂಕಾಪೂರ, ಮಾಂತೇಶ ಲಮಾಣಿ, ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಊರಿನ ಹಿರಿಯರು ಇದ್ದರು.
ವರದಿ : ಲಕ್ಷ್ಮೇಶ್ವರ ಸಿಟಿಜನ್ ಜರ್ನಲಿಸ್ಟ್: ಮಲ್ಲೇಶ ಮಣ್ಣಮ್ಮನವರ