ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಪಣ ಎಂದು ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವ ಲತಾ ಚಂದ್ರಶೇಖರ್ ಮೊದಲ ಬಾರಿಗೆ ನಮ್ಮ ಈದಿನ.ಕಾಮ್ ನಾ ವಿಶೇಷ ಸಂದರ್ಶನದಲ್ಲಿ ಮಾತನಾಡಿ ಈ ದಿನ.ಕಾಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಇಂತಿಷ್ಟು ಕಾರ್ಯಕ್ರಮ ಹಾಗೂ ಯೋಜನೆ ಮಾಡಬೇಕು ಎಂದು ಆಶೀಸಿದ್ದಿವೆ ಎಂದು ಹೇಳುತ್ತಾ. ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ನಗರ ನೈರ್ಮಲ್ಯ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚಾಗಿ ಗಮನ ಕೊಟ್ಟು ಜನಸ್ನೇಹಿ ನಗರಸಭೆ ಮಾಡುವುದು ನಮ್ಮ ಗುರಿ ಎಂದರು.
ವಿವಿಧ ಅನುದಾನಗಳಡಿಯಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮತ್ತು ಎಸ್ಎಫ್‌ಸಿ ಯೋಜನೆಯಡಿಯಲ್ಲಿ ನಾಗರೀಕ ಸೌಲಭ್ಯ ನೀಡಿವುದು. ಶಾಸಕರ ವಿಶೇಷ ಅನುದಾನ 15ಕೋಟಿಯನ್ನು ತ್ವರಿತಗತಿಯಲ್ಲಿ ಕಾಮಗಾರಿಗಳನ್ನ ಪೂರ್ಣಗೊಳಿಸುಲಾಗುವುದು ಎಂದರು.
ಮೂಲಭೂತ ಸೌಕರ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಇತರೆ ಅಧಿಕಾರಿಗಳು ಮತ್ತು ಜನಪರ ಸಮನ್ವಯದೊಂದಿಗೆ ಭದ್ರಾವತಿಯ ಸರ್ವತೋಮುಖ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಕೆಲಸ ಮಾಡುತ್ತಿವೆ ಎಂದರು.