ʼಪ್ರಜಾಪರಿರ್ವತನಾ ವೇದಿಕೆ ಕರ್ನಾಟಕʼದ ದಾವಣಗೆರೆ ಜಿಲ್ಲಾ ಘಟಕ, ನಗರದ ರೋಟರಿ ಬಾಲ ಭವನದಲ್ಲಿ ಜ.29ರಂದು, ಬೆ.11-30ಕ್ಕೆ ʼಸಂವಿಧಾನ ಜಾಗೃತಿ ಕಾರ್ಯಕ್ರಮʼ ಹಾಗೂ ಜೋಗೇಂದ್ರಸಿಂಗ್ ಮಂಡಲ್‌ರವರ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ ತಿಳಿಸಿದರು.
ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿಯನ್ನು ಹೊರತುಪಡಿಸಿ ಸಂವಿಧಾನದಲ್ಲಿ ಏನಿದೆ ಎನ್ನುವಂತ ಆಳವಾದ ಜ್ಞಾನ ಸಮುದಾಯಗಳಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಸಂವಿಧಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಸಮುದಾಯಗಳು ವಿಫಲವಾಗಿವೆ. ಭಾರತದ ಪ್ರತಿಯೊಬ್ಬರು ಸಂವಿಧಾನವನ್ನು ಅದರ ಮೂಲ ಆಶಯವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಭಾರತ ಭವ್ಯ ಭಾರತವಾಗುತ್ತದೆ. ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎನ್ನುವ ಸರಳ ಸತ್ಯವನ್ನು ಭಾರತೀಯರು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗಿ ಪೆದ್ದ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿಗಳು ಸಾನಿದ್ಯ ವಹಿಸಲಿದ್ದಾರೆ. ಉದ್ಘಾಟನೆಯನ್ನು ಪ್ರಜಾಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ. ಗೋಪಾಲ್ ನೆರವೇರಿಸಲಿದ್ದಾರೆ. ಸಂವಿಧಾನ ಪೀಠಿಕೆ ಅನಾವರಣವನ್ನು ಮಾಯಕೊಂಡ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಎನ್. ರುದ್ರಮುನಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ಡಾ. ಸಯ್ಯಾದ್ ರೋಷನ್ ಮುಲ್ಲಾ, ಕಾಂಚನಾ ಎನ್, ಎ.ಕೆ. ಚನ್ನೇಶ್ವರ, ಕೆ. ಓ. ಮಂಜಪ್ಪ, ಸಂಘಪಾಲು ಧಮ್ಮಚಾರಿ, ಭೀಮಪ್ಪ ಪಿ, ಎಚ್.ಕೆ. ಕೃಷ್ಣ ಅರಕೆರೆ, ಎಚ್. ಮನೋಹರ, ಟಿ. ಧನಿಕ ತಿಮ್ಮೇನಹಳ್ಳಿ, ಸುನಿಲ್ ಯರಗನಾಳ್, ಅಜಯ್.ಎಂ, ಗಣೇಶ್ ನಾಯ್ಕ ವಿ.ಬಿ. ಪರಮೇಶ್ವರಪ್ಪ ವಿ.ಎನ್ ಹಾಗೂ ದಾವಣಗೆರೆ ಜಿಲ್ಲೆಯ ಮತ್ತು ತಾಲೂಕುಗಳ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.