ಮೈಸೂರು | ಜನವಸತಿ ಪ್ರದೇಶದಲ್ಲಿ ಹುಲಿಯಿರುವುದು ಅಸ್ಪಷ್ಟ: ಸಿಬ್ಬಂದಿಗಳು ಹೈರಾಣು

Date:

Advertisements

ಮೈಸೂರು ತಾಲೂಕಿನ ಜನವಸತಿ ಪ್ರದೇಶಗಳ ಬಳಿ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಬ್ಯಾತಹಳ್ಳಿ ಬಳಿ ಹುಲಿ ಕಾಣಿಸಿಕೊಂಡು ಸುಮಾರು ಎರಡು ತಿಂಗಳು ಕಳೆದಿದ್ದು, ನವೆಂಬರ್ ಅಂತ್ಯದಿಂದ ಅದರ ಸುಳಿಲು ಸಿಕ್ಕಿಲ್ಲ. ಒಂದು ವಾರದ ಹಿಂದೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವ ನಗರದ ಬಳಿ ಮತ್ತೊಂದು ಹುಲಿ ಸಿಸಿಟಿವಿಗೆ ಕಾಣಿಸಿಕೊಂಡಿದ್ದು, ಕಾಲುವೆಯ ಬಳಿ ಅದರ ಹೆಜ್ಜೆ ಗುರುತುಗಳೂ ಕಂಡುಬಂದಿವೆ.

“ಹೆಜ್ಜೆಗುರುತುಗಳನ್ನು ಗಮನಿಸಿದರೆ ಸುಮಾರು ಎರಡು ವರ್ಷ ವಯಸ್ಸಿನ ಹುಲಿಯಿರಬಹುದು ಎಂಬುದು ತಿಳಿಯುತ್ತದೆ. ಇಲಾಖೆಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಹುಲಿಗಳು ಈವರೆಗೆ ಪತ್ತೆಯಾಗಿಲ್ಲ. ಹುಲಿಗಳು ಅರಣ್ಯ ಪ್ರದೇಶಗಳಿಗೆ ಮರಳಿರಬಹುದು ಅಥವಾ ಹೊಲಗಳಲ್ಲಿ ಅಡಗಿರಬಹುದು” ಎಂದು ಕೆಲವು ಅಧಿಕಾರಿಗಳು ವಾದಿಸುತ್ತಾರೆ.

Advertisements

“ಹುಲಿಗಳು ಈವರೆಗೆ ಜಾನುವಾರುಗಳನ್ನು ಕೊಂದಿರುವ ಯಾವುದೇ ಘಟನೆಗಳು ನಡೆದಿಲ್ಲ. ಜತೆಗೆ ಈ ಹುಲಿಗಳನ್ನು ಯಾರೂ ನೋಡಿದ ವರದಿಗಳಿಲ್ಲ. ಆದರೂ ಸಿಬ್ಬಂದಿಗಳನ್ನು ಅವುಗಳನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ” ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

“ಹುಲಿಗಳನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಇಲಾಖೆ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಹುಲಿ ಇರುವುದು ಎರಡು ಬಾರಿ ಕಾಣಿಸಿಕೊಂಡ ನಂತರ ಮತ್ತು ಹೆಜ್ಜೆ ಗುರುತುಗಳು ಕಂಡುಬಂದ ನಂತರ, ಅವುಗಳನ್ನು ಮೊದಲು ನೋಡಿದ ಪ್ರದೇಶಗಳಲ್ಲಿ ನೋಡಲಾಗುವುದಿಲ್ಲ. ಮೈಸೂರು ವೃತ್ತವು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಒಳಗೊಂಡಿದೆ” ಎಂದು ಅರಣ್ಯ ಸಂರಕ್ಷಣಾಧಿಕಾರಿ (ಮೈಸೂರು ವೃತ್ತ) ಮಾಲತಿ ಪ್ರಿಯಾ ಹೇಳಿದ್ದಾರೆ.

“ಚಿರತೆ ಕಾರ್ಯಪಡೆಯ ಸಿಬ್ಬಂದಿ ಈ ಪ್ರದೇಶದಲ್ಲಿ ದಿನದ 24 ಗಂಟೆಯೂ ಕಣ್ಗಾವಲು ಇಡುತ್ತಿದ್ದಾರೆ. ಬೋನುಗಳನ್ನು ಇಡುವುದರ ಜೊತೆಗೆ ಅವುಗಳನ್ನು ಪತ್ತೆಹಚ್ಚಲು ಥರ್ಮಲ್ ಡ್ರೋನ್‌ಗಳಂತಹ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಈವರೆಗೆ, ಈ ಸ್ಥಳಗಳಲ್ಲಿ ಹುಲಿಗಳು ಜಾನುವಾರುಗಳನ್ನು ಕೊಂದಿರುವ ಬಗ್ಗೆ ಗ್ರಾಮಸ್ಥರಿಂದ ಯಾವುದೇ ಮಾಹಿತಿ ಬಂದಿಲ್ಲ” ಎಂದು ಮಾಲತಿ ಹೇಳಿದರು.

“ಶ್ರೀರಂಗಪಟ್ಟಣದ ಅಧಿಕಾರಿಯೊಬ್ಬರು 4 ಕಿ.ಮೀ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಕೂಂಬಿಂಗ್ ಮಾಡಿದರು. ಆದರೆ ಕೆಲವು ದಿನಗಳಿಂದ ಹುಲಿ ಕಾಣಿಸಲಿಲ್ಲ. ಕುರಿ ಮಾಲೀಕರು ತಮ್ಮ ಹಿಂಡಿನಿಂದ ಯಾವುದೇ ಕುರಿಗಳನ್ನು ಕಳೆದುಕೊಂಡಿದ್ದಾರೆಯೇ ಎಂದು ತಿಳಿಯಲು ನಾವು ಸುತ್ತಮುತ್ತಲಿನ ಕುರಿಗಾಹಿಗಳನ್ನು ವಿಚಾರಿಸುತ್ತಿದ್ದೇವೆ. ಸ್ಥಳೀಯ ಪೊಲೀಸರೂ ಕೂಡ ಚನ್ನನಹಳ್ಳಿ, ಮಹದೇವಪುರ, ಬಿದರಹಳ್ಳಿ ಮತ್ತು ತಾರಿಪುರ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಒಂದು ವಾರದ ಹಿಂದೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಪ್ರಕಟಣೆಗಳನ್ನು ಮಾಡಲಾಗಿತ್ತು. ಆದರೆ, ಜನರು ಯಾವುದೇ ಭಯವಿಲ್ಲದೆ ಎಂದಿನಂತೆ ಓಡಾಡುತ್ತಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ʼಸಂವಿಧಾನ ಸಮರ್ಪಣೆಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ ದೊರಕಿದ ದಿನʼ

“ಮಹದೇವಪುರದಿಂದ ಸುಮಾರು 8 ಕಿಮೀ ದೂರದಲ್ಲಿರುವ ತಮ್ಮ ಗ್ರಾಮದ ಬಳಿ ಹುಲಿಯನ್ನು ನೋಡಿದ್ದಾರೆ. ಆ ಹುಲಿ ಹಸುವನ್ನು ಗಾಯಗೊಳಿಸಿದೆ ಎಂದು ತಡಗವಾಡಿ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಕರೆಸಿದ್ದಾರೆ. ಆದರೆ, ಪರಿಶೀಲನೆ ವೇಳೆ ನಮಗೆ ಯಾವುದೇ ಹೆಜ್ಜೆ ಗುರುತುಗಳು ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ” ಎಂದು ಅಧಿಕಾರಿ ಹೇಳಿದರು.

“ಈ ಪ್ರದೇಶವು ಕಬ್ಬಿನ ಗದ್ದೆಗಳು ಮತ್ತು ಪೊದೆಗಳಿಂದ ಕೂಡಿದ ಬಯಲು ಪ್ರದೇಶವಾಗಿದೆ. ಇದು ಹುಲಿ ಪೊಟರೆಗಳನ್ನು ಮಾಡಿಕೊಳ್ಳಲು ಸೂಕ್ತ ಸ್ಥಳಗಳಾಗಿವೆ. ಈವರೆಗೆ ಯಾವುದೇ ದೃಶ್ಯ, ಹೆಜ್ಜೆಗುರುತುಗಳು ಅಥವಾ ಯಾವುದೇ ಹತ್ಯೆಗಳಂತಹ ಘಟನೆಗಳು ನಡೆದಿಲ್ಲ. ಆದರೆ ಜನರು ಇನ್ನೂ ಭಯಭೀತರಾಗಿದ್ದಾರೆ” ಎಂದು ಮೈಸೂರು ತಾಲೂಕಿನ ಚಿಕ್ಕಕನ್ಯ ಗ್ರಾಮಸ್ಥರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X