ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಗಳಿಗೆ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದಿರುವ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ, ಮೀಸಲಾತಿಗೆ ಒಪ್ಪಿಗೆ ಸೂಚಿಸಿದೆ. ಆ ಮೂಲಕ ನಾಲ್ಕು ದಶಕಗಳ ಹೋರಾಟ ಅಂತ್ಯಗೊಂಡಿದೆ.
ನಮ್ಮ ಮನವಿಯನ್ನು ಸ್ವೀಕರಿಸಿ ಮಹಾರಾಷ್ಟ್ರ ಸರ್ಕಾರವು ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿದೆ. ಹಾಗಾಗಿ, ನನ್ನ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಜ್ ಪಾಟೀಲ್ ಲಕ್ಷಾಂತರ ಜನರ ಮುಂದೆ ಘೋಷಿಸಿದರು. ಈ ವೇಳೆ ನೆರೆದಿದ್ದ ಮಂದಿ ಕೇಕೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.
#WATCH | Navi Mumbai: Maratha reservation activists celebrate after Manoj Jarange Patil announces to end the protests today as the government has accepted their demands pic.twitter.com/V1KxosEHRm
— ANI (@ANI) January 27, 2024
ಸಿ.ಎಂ ಏಕನಾಥ್ ಶಿಂಧೆ ಅವರು ಮನೋಜ್ ಅವರಿಗೆ ಜ್ಯೂಸ್ ನೀಡಿದರು. ಅದನ್ನು ಸ್ವೀಕರಿಸಿದ ಅವರು, ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ ಎಂದು ಘೋಷಣೆ ಮಾಡಿದರು.
ಮುಖ್ಯಮಂತ್ರಿಯವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಅಲ್ಲದೆ ನಮ್ಮ ಬೇಡಿಕೆಗಳಿಗೆ ಒಪ್ಪಿಗೆಯನ್ನು ಸೂಚಿಸುವ ಮೂಲಕ ನನ್ನ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇನೆ. ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದೇನೆ ಎಂದು ಹೇಳಿದರು.
ತಮ್ಮ ಬೇಡಿಕೆಗೆ ಆಗ್ರಹಿಸಿ ಜನವರಿ 20ರಂದು ಜಲ್ನಾದಿಂದ ಪ್ರಾರಂಭವಾದ ಮೀಸಲಾತಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಶನಿವಾರ ಮುಂಬೈ ನಗರವನ್ನು ಪ್ರವೇಶಿಸಲು ಸಜ್ಜಾಗುತ್ತಿದ್ದಂತೆ ಅವರ ಘೋಷಣೆ ಹೊರಬಿದ್ದಿದೆ.
ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಾಂಗೆ ನೇತೃತ್ವದಲ್ಲಿ ಶುಕ್ರವಾರ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭವಾಗಿತ್ತು. ದಕ್ಷಿಣ ಮುಂಬೈನ ಆಝಾದ್ ಮೈದಾನದಲ್ಲಿ ನಿನ್ನೆಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಇದರೊಂದಿಗೆ ನಾಲ್ಕು ದಶಕಗಳಿಂದ ನಡೆಯುತ್ತಿದ್ದ ಹೋರಾಟ ಅಂತ್ಯಗೊಂಡಿದೆ.
हा विजय हा सकल मराठा समाजाचा आणि त्यासाठी जीवाची बाजी लावून झुंजलेल्या मनोज जरांगे पाटील यांच्या संघर्षाचा विजय असल्याचे मत व्यक्त केले. तसेच गेले सात दिवस कोणतेही गालबोट लागू न देता अत्यंत शिस्तबद्ध पध्दतीने हे आंदोलन यशस्वी केल्याबद्दल सकल मराठा समाजाचे कौतुक आणि अभिनंदन केले. pic.twitter.com/4dtD25I2HA
— Eknath Shinde – एकनाथ शिंदे (@mieknathshinde) January 27, 2024
ಜನವರಿ 20 ರಂದು ಜಾಲ್ನಾದಿಂದ ಆರಂಭವಾದ ಮೀಸಲಾತಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಶನಿವಾರ ಮುಂಬೈ ನಗರ ಪ್ರವೇಶಿಸಲು ಸಜ್ಜಾಗಿತ್ತು. ಅಷ್ಟರಲ್ಲಿ ಮಹಾರಾಷ್ಟ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು, ಪ್ರತಿಭಟನೆ ಸುಖಾಂತ್ಯ ಕಂಡಿದೆ. ನಂತರ ಮಹಾರಾಷ್ಟ್ರ ಸರ್ಕಾರವು ಜಾತಿ ಮೀಸಲಾತಿ ಕುರಿತು ಸರ್ಕಾರಿ ಆದೇಶ ಹೊರಡಿಸಿದ್ದು, ಸಚಿವರಾದ ದೀಪಕ್ ಕೇಸರ್ಕರ್ ಮತ್ತು ಮಂಗಲ್ ಪ್ರಭಾತ್ ಲೋಧಾ ಅವರು ಮನೋಜ್ ಜಾರಂಗೆ ಪಾಟೀಲ್ ಅವರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ ಎಂದು ಪತ್ರ ನೀಡಿದ್ದಾರೆ.
Maharashtra CM Eknath Shinde says, “I am a farmer’s son and I know how it feels, I had promised to give reservation to Marathas and I have fulfilled my promise, this is a historic moment. We never make any decision for votes, we make decisions for the public interest. Today is… https://t.co/Zd2zbrwv3D pic.twitter.com/6pq4mmX5C1
— ANI (@ANI) January 27, 2024
ನಾಲ್ಕು ದಶಕಗಳಿಂದ ನಡೆಯುತ್ತಿದ್ದ ಹೋರಾಟ
ಮಹಾರಾಷ್ಟ್ರ ಜನಸಂಖ್ಯೆಯಲ್ಲಿ 33% ಒಳಗೊಂಡಿರುವ ಮರಾಠ ಸಮುದಾಯವು ದಶಕಗಳಿಂದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದವು. 1981 ರಲ್ಲಿ ಮರಾಠಾ ಮೀಸಲಾತಿಗೆ ಒತ್ತಾಯಿಸಿ ಮೊದಲ ಪ್ರತಿಭಟನೆಯು ಮತ್ತಾಡಿ ಕಾರ್ಮಿಕ ಸಂಘದ ನಾಯಕ ಅಣ್ಣಾಸಾಹೇಬ ಪಾಟೀಲ ನೇತೃತ್ವದಲ್ಲಿ ನಡೆದಿತ್ತು.
7-6 Lakh People join Maratha Reservation in Mumbai!
Media Will not show you!pic.twitter.com/8pvKqqR1q7
— Ashish Singh (@AshishSinghKiJi) January 26, 2024
2019ರಲ್ಲಿ ರಾಜ್ಯ ಸರ್ಕಾರ ಮರಾಠ ಸಮುದಾಯಕ್ಕೆ 16% ಮೀಸಲಾತಿ ನೀಡಿತು. ಆದರೆ, 2021ರಲ್ಲಿ ಸುಪ್ರೀಂ ಕೋರ್ಟ್ ಶೇ.50 ಮೀಸಲಾತಿಯನ್ನು ಉಲ್ಲೇಖಿಸಿ ಶೇ.16ರ ಕೋಟಾವನ್ನು ರದ್ದುಗೊಳಿಸಿತ್ತು. ಅಂದಿನಿಂದ ಮನೋಜ್ ಜಾರಂಗೆ ನೇತೃತ್ವದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿತ್ತು. ಕೆಲವು ಕಡೆಗಳಲ್ಲಿ ಪ್ರತಿಭಟನೆಯು ಹಿಂಸಾರೂಪಕ್ಕೂ ತಾಳಿತ್ತು.