ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂಡಿಯಾ ಒಕ್ಕೂಟ ಬಿಟ್ಟು ಎನ್‌ಡಿಎ ಸೇರ್ಪಡೆಗೊಂಡು ಹೊಸ ಸರ್ಕಾರ ರಚಿಸಲು ಹೊರಟಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ನಿತೀಶ್ ನಡೆಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ ನಿತೀಶ್ ಆಗಾಗ ತಮ್ಮ ರಾಜಕೀಯ ಮಿತ್ರರನ್ನು ಬದಲಿಸುತ್ತಿರುವುದು ಬಣ್ಣ ಬದಲಿಸುವ ಗೋಸುಂಬೆಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ. ತಮ್ಮ ತಾಳಕ್ಕೆ ಕುಣಿಯುತ್ತಾರೆ ಎಂದುಕೊಂಡು ಮಾಡಲಾಗಿರುವ ಈ ವಿಶ್ವಾಹ ದ್ರೋಹವನ್ನು ಬಿಹಾರದ ಜನತೆ ಎಂದಿಗೂ ಕ್ಷಿಮಿಸಲಾರರು”ಎಂದು ಹೇಳಿದ್ದಾರೆ.
“ಭಾರತ್ ಜೋಡೋ ನ್ಯಾಯ ಯಾತ್ರೆಯ ಬಗ್ಗೆ ಪ್ರಧಾನಿ ಮತ್ತು ಬಿಜೆಪಿ ಭಯಗೊಂಡಿರುವುದು ಇದರಿಂದ ಸ್ಪಷ್ಟವಾಗಿದೆ. ಆ ಗಮನವನ್ನು ಬೇರೆಡೆ ಸೆಳೆಯಲು ಈ ರಾಜಕೀಯ ನಾಟಕ ಸೃಷ್ಟಿಸಲಾಗಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ನಿತೀಶ್ ಬಿಹಾರದ ಆಯಾರಾಂ ಗಯಾರಾಂ
ಕಲಬುರಗಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಮೈತ್ರಿಯಲ್ಲಿ ಉಳಿಯಲು ಬಯಸ್ಸಿದ್ದರೆ, ಉಳಿಯುತ್ತಿದ್ದರು. ಅದರೆ, ಅವರು ಹೋಗಬೇಕೆಂದು ಬಯಸುತ್ತಾರೆ. ಅವರು ಹೋಗಿದ್ದಾರೆ. ಅವರ ಈ ನಡೆ ಬಗ್ಗೆ ನಮಗೆ ಮೊದಲೇ ಗೊತ್ತಿತ್ತು. ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರು ನಿತೀಶ್ ಮೈತ್ರಿ ತೊರೆಯುತ್ತಿದ್ದಾರೆ ಎಂದು ಹೇಳಿದ್ದರು. ಅದು ಇಂದು ನಡೆದಿದೆ. ದೇಶದಲ್ಲಿ ‘ಆಯಾ ರಾಮ್-ಗಯಾ ರಾಮ್’ ಎಂಬಂತಹ ಅನೇಕ ಜನರಿದ್ದಾರೆ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
ರಾಜ್ಯಪಾಲರಿಗೆ ಬಿಜೆಪಿ ಬೆಂಬಲ ಪತ್ರವನ್ನು ಸಲ್ಲಿಸಿರುವ ನಿತೀಶ್, ಸಂಜೆ 5 ಗಂಟೆಗೆ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಕಳೆದ 18 ತಿಂಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಮತ್ತೆ ಸೇರ್ಪಡೆಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಅಲ್ಲದೆ 11 ವರ್ಷಗಳಲ್ಲಿ ಇದು ನಾಲ್ಕನೇ ಬಾರಿ.
बार-बार राजनीतिक साझेदार बदलने वाले नीतीश कुमार रंग बदलने में गिरगिटों को कड़ी टक्कर दे रहे हैं।
इस विश्वासघात के विशेषज्ञ और उन्हें इशारों पर नचाने वालों को बिहार की जनता माफ़ नहीं करेगी।
बिलकुल साफ़ है की भारत जोड़ो न्याय यात्रा से प्रधानमंत्री और भाजपा घबराए हुए हैं और उससे… https://t.co/v47tQ8ykaw
— Jairam Ramesh (@Jairam_Ramesh) January 28, 2024