ಬೆಂಗಳೂರು ಉಪನಗರ ರೈಲು ಯೋಜನೆ : 5.5 ಕಿ.ಮೀ ವಿಸ್ತರಣೆ

Date:

Advertisements

ರೈಲ್ವೆಯ ಮಹತ್ವದ ಯೋಜನೆಯಾದ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ)ನ್ನು 148.17 ಕಿಮೀಗೆ ಯೋಜಿಸಲಾಗಿತ್ತು. ಇದೀಗ, ಸಾರ್ವಜನಿಕರ ಬೇಡಿಕೆ ಮೇರೆಗೆ ಸರಿಸುಮಾರು 5.5 ಕಿಮೀ ವಿಸ್ತರಿಸಲು ಸಿದ್ಧವಾಗಿದೆ.

ರಾಜಾನುಕುಂಟೆ- ಹೀಳಲಿಗೆ (ಕಾರಿಡಾರ್ 4) ವೈಟ್ ಫೀಲ್ಡ್ – ಕೆಂಗೇರಿ (ಕಾರಿಡಾರ್ 2) ಮಾರ್ಗದಲ್ಲಿ ವಿಸ್ತರಣೆಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಇದೀಗ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಲ್ಟ್‌) ಈ ಪ್ರಸ್ತಾವನೆಯನ್ನು ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (K-RIDE) ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯು ಅಂಗೀಕರಿಸಿದೆ. ಈಗ ಅದನ್ನು ನೈಋತ್ಯ ರೈಲ್ವೆ ಮೂಲಕ ರೈಲ್ವೆ ಮಂಡಳಿಗೆ ಅದರ ಒಪ್ಪಿಗೆಗಾಗಿ ಕಳುಹಿಸಲಾಗುತ್ತಿದೆ.

Advertisements

“ಹೀಳಲಿಗೆ ಕಾರಿಡಾರ್ (ಕನಕ ಲೈನ್) ಅನ್ನು ಚಂದಾಪುರದವರೆಗೆ ಸುಮಾರು ಒಂದು ಕಿಮೀ ವಿಸ್ತರಿಸಲು ಡಲ್ಟ್‌ ಪ್ರಸ್ತಾಪಿಸಿದೆ. ಕೆಂಗೇರಿ ಮಾರ್ಗವನ್ನು (ಪಾರಿಜಾತ ಲೈನ್) ಅನ್ನು ಚಲ್ಲಘಟ್ಟ ಕಡೆಗೆ ವಿಸ್ತರಿಸಲಾಗುವುದು” ಎಂದು ಕೆ-ರೈಡ್ ಮೂಲಗಳು ತಿಳಿಸಿವೆ.

“ಕಾರ್ಯಸಾಧ್ಯತೆಯ ಅಧ್ಯಯನದ ನಂತರವೇ ನಿಖರವಾದ ದೂರವು ತಿಳಿಯುತ್ತದೆ. ಸದ್ಯಕ್ಕೆ ಸುಮಾರು 4.5 ಕಿ.ಮೀ.ಗೆ ಇದನ್ನು ಪ್ರಸ್ತಾಪಿಸಲಾಗಿದೆ” ಎಂದು ಡಲ್ಟ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲ್ವೆ ಹೋರಾಟಗಾರ ಪೃಥ್ವಿನ್ ರೆಡ್ಡಿ ಮಾತನಾಡಿ, “ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಅವರು ಆನೇಕಲ್, ಹೀಳಲಿಗೆ ಮತ್ತು ಹುಸ್ಕೂರು ರೈಲು ನಿಲ್ದಾಣಗಳಿಗೆ ಭೇಟಿ ನೀಡಿದಾಗ ಉಪನಗರ ಮಾರ್ಗವನ್ನು ವಿಸ್ತರಿಸುವಂತೆ ಸ್ಥಳೀಯರು ಒತ್ತಾಯಿಸಿದರು. 46.88 ಕಿಮೀ ಕನಕ ಮಾರ್ಗದ ಗುತ್ತಿಗೆಯನ್ನು ಇತ್ತೀಚೆಗೆ ಲಾರ್ಸನ್ ಮತ್ತು ಟೂರ್ಬೋ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಯಿತು” ಎಂದರು.

ಈ ಸುದ್ದಿ ಓದಿದ್ದೀರಾ? ಸ್ವಂತ ಕ್ಷೇತ್ರ ಅಭಿವೃದ್ಧಿ ಪಡಿಸಲಾಗದ ಎನ್‌. ಎ. ಹ್ಯಾರಿಸ್‌ ಬೆಂಗಳೂರನ್ನು ಅಭಿವೃದ್ಧಿ ಪಡಿಸುತ್ತಾರೆಯೇ? ಎಎಪಿ ವಿರೋಧ

“ಈ ಪ್ರಸ್ತಾವಿತ ವಿಸ್ತರಣೆಗಳು 452 ಕಿಮೀ 2ನೇ ಹಂತದ ಯೋಜನೆಯಲ್ಲಿ ಕಾಣಿಸಿಕೊಂಡಿವೆ. ನಾವು ಕೈಗೊಳ್ಳಲು ಬಯಸಿದ ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನವನ್ನು ನವೆಂಬರ್ 2023 ರಲ್ಲಿ ನೈರುತ್ಯ ರೈಲ್ವೆ ತಿರಸ್ಕರಿಸಿದೆ. ಇದೇ ಪ್ರಸ್ತಾವನೆಯನ್ನು 2023ರ ಡಿಸೆಂಬರ್ 28 ರಂದು ನೈರುತ್ಯ ರೈಲ್ವೆಗೆ ಸಲ್ಲಿಸಿದ್ದೇವೆ. ನಮ್ಮ ವಿನಂತಿಯನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳುತ್ತೇವೆ. ನೈರುತ್ಯ ರೈಲ್ವೆ ಮತ್ತೊಮ್ಮೆ ಪ್ರಸ್ತಾವನೆಯನ್ನು ತಿರಸ್ಕರಿಸಿದರೆ, ರೈಲ್ವೆ ಮಂಡಳಿಗೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ. ಈ ಹೆಚ್ಚುವರಿ 4.5 ಕಿ.ಮೀ. ಇದಕ್ಕೆ ರಾಜ್ಯದಿಂದ ಒಪ್ಪಿಗೆ ಸಿಕ್ಕಿದ್ದು, ಕೇಂದ್ರ ಮಾತ್ರ ಇದನ್ನು ಅನುಮೋದಿಸಬೇಕಿದೆ” ಎಂದು ಹಿರಿಯ ಕೆ-ರೈಡ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

Download Eedina App Android / iOS

X