ಹಣ ಬಿಡಿಸಿಕೊಡುವಂತೆ ಅಪರಿಚಿತನಿಗೆ ಎಟಿಎಂ ಕೊಟ್ಟು ರೈತರೊಬ್ಬರು ₹40,500 ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿದೆ.
ಪಟ್ಟಣದ ಹಳೆ ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಭಟ್ರೇನಹಳ್ಳಿ ರಾಜಣ್ಣ ಎಂಬ ರೈತ ಶುಕ್ರವಾರ ಹಣ ಬಿಡಿಸಲು ಹೋಗಿದ್ದರು. ಇದೇ ವೇಳೆ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಗೆ ಹಣ ಬಿಡಿಸಿಕೊಡುವಂತೆ ಎಟಿಎಂ ಕಾರ್ಡ್ ಕೊಟ್ಟಿದ್ದರು.
ರೈತನಿಗೆ ₹10,000 ಹಣ ಬಿಡಿಸಿಕೊಟ್ಟ ಅಪರಿಚಿತ ವ್ಯಕ್ತಿಯು, ರೈತನನ್ನು ಯಾಮಾರಿಸಿ ಬೇರೆ ಎಟಿಎಂ ಕೊಟ್ಟಿದ್ದಾನೆ. ರೈತನ ಎಟಿಎಂನಿಂದ ₹40,500 ಹಣ ಬಿಡಿಸಿ ಚಿನ್ನ ಖರೀದಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂ. ಗ್ರಾಮಾಂತರ | ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ವಿತರಣೆ; ವಿಕಲಚೇತನರಿಂದ ಅರ್ಜಿ ಆಹ್ವಾನ
ಕೂಡಲೇ ಎಚ್ಚೆತ್ತ ರೈತ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳ್ಳನಿಗಾಗಿ ದೇವನಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.